ಒಳಗೇನಿದೆ!?

ಒಬ್ಬರಿಗೆ ಉದ್ಯೋಗ ನೀಡಿದ್ರೆ ಉದ್ಯೋಗದಾತರಿಗೂ ಸಿಗುತ್ತೆ ತಿಂಗಳಿಗೆ 3 ಸಾವಿರ ರೂಪಾಯಿ!; ಏನಿದು ಯೋಜನೆ?

ಬೆಂಗಳೂರು: ಕೇಂದ್ರ ಸರ್ಕಾರ ವಿಕಸಿತ ಭಾರತ ಕಲ್ಪನೆಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಆ ಪೈಕಿ ಉದ್ಯೋಗದಾತರಿಗೂ ಉತ್ತೇಜನ ನೀಡುವಂಥ ಉಪಕ್ರಮವನ್ನು ಈಗಾಗಲೇ ಆರಂಭಿಸಿದೆ. ಅರ್ಥಾತ್‌, ಹೊಸದಾಗಿ ಒಬ್ಬರಿಗೆ ಉದ್ಯೋಗ ನೀಡಿದರೆ ಅಂಥ ಉದ್ಯೋಗದಾತರಿಗೆ ತಿಂಗಳಿಗೆ ಗರಿಷ್ಠ ಮೂರು ಸಾವಿರ ರೂಪಾಯಿ ಸಿಗುತ್ತದೆ.

ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್‌ ಯೋಜನೆಯಡಿ ಇಂಥದ್ದೊಂದು ಉಪಕ್ರಮವನ್ನು ಜಾರಿಗೆ ತರಲಾಗಿದೆ. ಹೊಸದಾಗಿ ಒಬ್ಬರಿಗೆ ಉದ್ಯೋಗ ನೀಡಿದರೆ ಅಂಥ ಉದ್ಯೋಗದಾತರು ವೇತನಕ್ಕೆ ಅನುಸಾರವಾಗಿ ಪ್ರತಿ ತಿಂಗಳಿಗೆ ಮೂರು ಸಾವಿರ ರೂಪಾಯಿವರೆಗೆ ಪಡೆಯಲಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಎಲ್ಲ ಕ್ಷೇತ್ರಗಳಿಗೂ ಇದು ಅನ್ವಯಿಸಲಿದ್ದು, ಉದ್ಯೋಗದಾತರಿಗೆ ಈ ಪ್ರಯೋಜನ ಎರಡು ವರ್ಷಗಳ ವರೆಗೆ ಲಭಿಸುತ್ತದೆ. ಅದರಲ್ಲೂ ಉತ್ಪಾದಕ ಕ್ಷೇತ್ರದವರಿಗೆ ಹೆಚ್ಚುವರಿಯಾಗಿ ಎರಡು ವರ್ಷ ಅಂದರೆ ಒಟ್ಟು ನಾಲ್ಕು ವರ್ಷಗಳ ಕಾಲ ಈ ಪ್ರಯೋಜನ ಸಿಗುತ್ತದೆ. ಮೊದಲ ಕಂತು ಆರನೇ ತಿಂಗಳಲ್ಲಿ ಸಿಗಲಿದ್ದು, ಉಳಿದ ಕಂತುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆಯಂತೆ ನೀಡಲಾಗುತ್ತದೆ.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಯಾರಿಗೆ ಅನ್ವಯ?: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನೋಂದಣಿ ಹೊಂದಿದ್ದು, ಉದ್ಯೋಗಿಗಳ ಇಪಿಎಫ್‌ಒ ಕೋಡ್‌ ಪಡೆದು ತಿಂಗಳ ರಿಟರ್ನ್ಸ್‌ ಪಾವತಿಸುತ್ತಿರುವವರಿಗೆ ಈ ಯೋಜನೆ ಅನ್ವಯಿಸುತ್ತದೆ. ಅಲ್ಲದೆ, ಉದ್ಯೋಗಿಗಳು ಹೊಸಬರಾಗಿರಬೇಕು. ಅಂದರೆ, 2025ರ ಆಗಸ್ಟ್‌ 1ರಿಂದ 2027ರ ಜುಲೈ 31ರ ಒಳಗೆ ಇಪಿಎಫ್‌ಒ ನೋಂದಣಿ ಆಗಿರುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಮಾತ್ರ ಉದ್ಯೋಗದಾತರಿಗೆ ಈ ಪ್ರಯೋಜನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ..

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್‌ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ

ಇದೂ ಓದಿ:ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್‌. ಮಂಜುನಾಥ್‌

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ