ಒಳಗೇನಿದೆ!?

ಇನ್ಮುಂದೆ ಬೆರಳಿಟ್ಟರೂ, ಮುಖ ತೋರಿಸಿದರೂ ಹಣ ಟ್ರಾನ್ಸ್‌ಫರ್: ಏನಿದು ಹೊಸ ಫೀಚರ್?‌

ಮುಂಬೈ: ಇನ್ಮುಂದೆ ಯಾರಿಗಾದರೂ ಹಣ ಕಳುಹಿಸಬೇಕೆಂದರೆ ಬೆರಳ ತುದಿಯ ಒಂದು ಸ್ಪರ್ಶ ಇಲ್ಲವೇ ಒಂದು ಲುಕ್‌ ಕೊಟ್ಟರೂ ಸಾಕು. ಹೌದು… ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ (ಎನ್‌ಪಿಸಿಐ) ಆರಂಭಿಸಿರುವ ಹೊಸ ಫೀಚರ್‌ನಿಂದಾಗಿ ಇದು ಸಾಧ್ಯ.

ಎನ್‌ಪಿಸಿಐ ತನ್ನ ಪ್ರಮುಖ ಏಕೀಕೃತ ಪಾವತಿ ಇಂಟರ್‌ಫೇಸ್ (ಯುಪಿಐ) ಕೇಂದ್ರಿತ ಹಲವಾರು ಉಪಕ್ರಮಗಳನ್ನು ಮಂಗಳವಾರ ಪ್ರಾರಂಭಿಸಿದ್ದು, ಇದರಲ್ಲಿ ಆನ್-ಡಿವೈಸ್ ಬಯೋಮೆಟ್ರಿಕ್ ದೃಢೀಕರಣವೂ ಸೇರಿದೆ. ಜೊತೆಗೆ, ಯುಪಿಐ ಪಿನ್‌ ಸೆಟ್ ಮಾಡಲು ಅಥವಾ ರೀ-ಸೆಟ್ ಮಾಡಲು ಆಧಾರ್‌-ಲಿಂಕ್ಡ್ ಬಯೋಮೆಟ್ರಿಕ್ ದೃಢೀಕರಣ ಸಕ್ರಿಯಗೊಳಿಸಲು ಆಧಾರ್‌-ಆಧಾರಿತ ಮುಖ ದೃಢೀಕರಣವನ್ನೂ ಆರಂಭಿಸಲಾಗಿದೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ವಿಶೇಷವೆಂದರೆ ಯುಪಿಐಗಾಗಿ ಆನ್-ಡಿವೈಸ್ ದೃಢೀಕರಣವು ಗ್ರಾಹಕರಿಗೆ ತಮ್ಮ ಸ್ಮಾರ್ಟ್‌ಫೋನ್‌ನ ಭದ್ರತಾ ಆಯ್ಕೆಗಳಾದ ಫಿಂಗರ್‌ಪ್ರಿಂಟ್ ಅಥವಾ ಫೇಸ್‌ ಅನ್‌ಲಾಕ್ ಮೂಲಕ ಯುಪಿಐ ಪಾವತಿಗಳನ್ನು ನೇರವಾಗಿ ದೃಢೀಕರಿಸಲು ಅನುವು ಮಾಡಿಕೊಡುತ್ತದೆ.

ಇದೂ ಓದಿ: ಒಬ್ಬರಿಗೆ ಉದ್ಯೋಗ ನೀಡಿದ್ರೆ ಉದ್ಯೋಗದಾತರಿಗೂ ಸಿಗುತ್ತೆ ತಿಂಗಳಿಗೆ 3 ಸಾವಿರ ರೂಪಾಯಿ!; ಏನಿದು ಯೋಜನೆ?

ಅಂದರೆ ಇನ್ನುಮುಂದೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಪಿನ್‌ ಬದಲು ಫಿಂಗರ್‌ಪ್ರಿಂಟ್‌ ಇಲ್ಲವೇ ಫೇಸ್‌ ಅನ್‌ಲಾಕ್‌ ಬಳಸಬಹುದು. ಇದು ಯುಪಿಐ ಪಿನ್‌ಗೆ ಪರ್ಯಾಯ ಆಗಿರಲಿದ್ದು, ಗ್ರಾಹಕರು ತಮ್ಮ ಆದ್ಯತೆಯ ದೃಢೀಕರಣ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಎನ್‌ಪಿಸಿಐ ತಿಳಿಸಿದೆ.

ಅಲ್ಲದೇ, ವ್ಯಾಪಾರ ಪ್ರತಿನಿಧಿಗಳಿಂದ ನಡೆಸಲ್ಪಡುವ ಯುಪಿಐ ಕ್ಯಾಶ್ ಪಾಯಿಂಟ್‌ಗಳಲ್ಲಿ ಯುಪಿಐ ಬಳಸಿ ಮೈಕ್ರೋ ಎಟಿಎಂಗಳ ಮೂಲಕ ನಗದು ಹಿಂಪಡೆಯುವ ಹೊಸ ವಿಧಾನವನ್ನು ಸಹ ಪ್ರಾರಂಭಿಸಲಾಗಿದೆ ಎಂದು ಎನ್‌ಪಿಸಿಐ ತಿಳಿಸಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದಿಂದ ಉಚಿತವಾಗಿ ಫಾಸ್ಟ್ಯಾಕ್‌ ಟ್ರೇನಿಂಗ್: ನೋಂದಣಿ ವಿವರ ಇಲ್ಲಿದೆ..

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ