ಹೋಟೆಲ್ ಕನ್ನಡ, ಬೆಂಗಳೂರು: ʼಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ..ʼ ಎನ್ನುವುದು ಜನಪ್ರಿಯ ಹಾಡಿನ ಸಾಲು. ಆದರೆ ಇಲ್ಲೀಗ ಇದು ʼದಕ್ಷಿಣ ಧ್ರುವದಿಂದ ಉತ್ತರ ಧ್ರುವಕೂ..ʼ ಎಂಬಂತಾಗಿದೆ.
ಅರ್ಥಾತ್, ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲೂ ಹೋಟೆಲ್‌ಗೆ ಹೆಸರಾಗಿರುವ ಉಡುಪಿಯವರ ಹೋಟೆಲೊಂದು ಇತ್ತೀಚೆಗೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಗೊಂಡಿದೆ.
ರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಆರಂಭವಾಗಿರುವ ಈ ಹೋಟೆಲ್‌ಗೆ ʼಬೆಂಗಳೂರು ಕೆಫೆʼ ಎಂಬ ಹೆಸರಿಡಲಾಗಿದ್ದು, ಇದು ದಕ್ಷಿಣ ಭಾರತದವರನ್ನು ಅದರಲ್ಲೂ ಕನ್ನಡಿಗರನ್ನು ಬಹಳವಾಗಿ ಸೆಳೆಯಲಾರಂಭಿಸಿದೆ.
ಇದೂ ಓದಿ: ಕುಂಭಮೇಳ: ಕನ್ನಡಿಗ ಯಾತ್ರಿಕರ ಮೆಚ್ಚುಗೆ ಗಳಿಸುತ್ತಿರುವ ಅಯೋಧ್ಯೆಯ ಉಡುಪಿ ಹೋಟೆಲ್
ಶ್ರೀ ರಾಮಮಂದಿರದ ಮುಖ್ಯದ್ವಾರದ ಸಮೀಪ, ಬಿರ್ಲಾ ಮಂದಿರದ ಎದುರು, ರಾಮ ಪಥ ಮಾರ್ಗದಲ್ಲಿನ ಪಂಡಿತ್ ತಿಲಾರಾಂ ಶಾಸ್ತ್ರೀಜಿ ಕಟ್ಟಡದಲ್ಲಿ ಇದೇ ಅಕ್ಟೋಬರ್ 6ರಂದು ʼಬೆಂಗಳೂರು ಕೆಫೆʼ ಉದ್ಘಾಟನೆಗೊಂಡಿದೆ.




ಉಡುಪಿಯ ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ನೆರವೇರಿದ ಈ ಉದ್ಘಾಟನಾ ಸಮಾರಂಭದಲ್ಲಿ ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಕಾರ್ಯದರ್ಶಿ ಶ್ರೀ ಗೋಪಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಟ್ಟಡದ ಮಾಲೀಕರಾದ ಶ್ರೀ ಮಹಾಂತ ವೇದಪ್ರಕಾಶ್ ಮತ್ತು ಅವರ ಕುಟುಂಬಸ್ಥರೂ ಭಾಗಿಯಾಗಿದ್ದರು.

ಅಲ್ಲದೆ ಶಾಸಕರಾದ ಅರವಿಂದ ಬೆಲ್ಲದ್ ಅವರು ಕೂಡ ʼಬೆಂಗಳೂರು ಕೆಫೆʼಗೆ ಭೇಟಿ ನೀಡಿ, ಇಲ್ಲಿನ ತಿಂಡಿ-ತಿನಿಸನ್ನು ಸವಿದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರ ಮೂಲದ ಬೀಜಾಡಿ ನರಸಿಂಹ, ಸುರೇಂದ್ರ ಕಾಂಚನ್, ಸುಬ್ರಹ್ಮಣ್ಯ ಕಾಂಚನ್, ಮುನಿರಾಜು ಮತ್ತು ಪ್ರದೀಪ್ ಮೆಂಡನ್ ಅವರ ಪಾಲುದಾರಿಕೆಯಲ್ಲಿ ನಿರ್ಮಾಣಗೊಂಡಿರುವ ʼಬೆಂಗಳೂರು ಕೆಫೆʼ, ಅಯೋಧ್ಯೆ ಶ್ರೀರಾಮಮಂದಿರದ ದರ್ಶನಕ್ಕೆ ತೆರಳುವ ಭಕ್ತರನ್ನು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಶುಚಿ-ರುಚಿಯಾದ ಪಕ್ಕಾ ದಕ್ಷಿಣ ಭಾರತೀಯ ತಿಂಡಿ-ತಿನಿಸುಗಳ ಜೊತೆಗೆ ದೇಶದ ಇತರ ಭಾಗದ ಪ್ರಮುಖ ತಿಂಡಿಗಳನ್ನು ಹೊಂದಿರುವ ಈ ಹೋಟೆಲ್ ಅಯೋಧ್ಯೆಗೆ ಆಗಮಿಸುವವರ ನೆಚ್ಚಿನ ಊಟೋಪಾಹಾರ ಕೇಂದ್ರವಾಗಿ ಈಗಾಗಲೇ ಸೆಳೆಯಲಾರಂಭಿಸಿದೆ.

ನಮ್ಮ ಹೋಟೆಲ್‌ಗೆ ಕನ್ನಡದಲ್ಲೇ ದೊಡ್ಡ ಬೋರ್ಡ್ ಹಾಕಿದ್ದು, ಅದೇ ಕನ್ನಡಿಗರನ್ನು ಕೈಬೀಸಿ ಕರೆಯುತ್ತಿದೆ. ಮಾತ್ರವಲ್ಲದೆ ಪಕ್ಕಾ ಉಡುಪಿ ಶೈಲಿಯ ಆಹಾರವನ್ನು ಸವಿದ ಜನರು ಮೆಚ್ಚುಗೆ ಸೂಚಿಸಿ ಹೋಗುತ್ತಿರುವುದು ಅತ್ಯಂತ ಖುಷಿ ನೀಡುತ್ತಿದೆ.
| ಬೀಜಾಡಿ ನರಸಿಂಹ, ಪಾಲುದಾರರು, ಬೆಂಗಳೂರು ಕೆಫೆ.
ಹೋಟೆಲ್ ವಿಳಾಸ: ಬೆಂಗಳೂರು ಕೆಫೆ, ರಾಮ ಪಥ ಮಾರ್ಗ, ಬಿರ್ಲಾ ಮಂದಿರ ಎದುರು, ಶ್ರೀರಾಮಮಂದಿರ ಮುಖ್ಯದ್ವಾರ ಸಮೀಪ, ಅಯೋಧ್ಯೆ, ಉತ್ತರಪ್ರದೇಶ.

ಲೊಕೇಷನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ..
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಬೆಂಗಳೂರಿನ ಎಂಟಿಆರ್ ಹೋಟೆಲ್‌ಗೆ ನಾರ್ವೆ ರಾಯಭಾರಿಯ ಮೆಚ್ಚುಗೆ
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಇನ್ಮುಂದೆ ಬೆರಳಿಟ್ಟರೂ, ಮುಖ ತೋರಿಸಿದರೂ ಹಣ ಟ್ರಾನ್ಸ್‌ಫರ್: ಏನಿದು ಹೊಸ ಫೀಚರ್?



