ಹೋಟೆಲ್ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಗಳು ಏರ್‌ಗನ್‌ನಿಂದ ಶೂಟ್ ಮಾಡಿದ್ದು, ಉದ್ಯಮಿಯ ಕುತ್ತಿಗೆಗೆ ಗಾಯವಾಗಿದೆ.
ಬಸವನಗುಡಿಯ ನರ್ತಕಿ ಹಾಗೂ ಕಾರ್ಗಿಲ್ ಬಾರ್ & ರೆಸ್ಟೋರೆಂಟ್ ಮಾಲೀಕ ರಾಜಗೋಪಾಲ್ (57) ದಾಳಿಗೊಳಗಾದ ಉದ್ಯಮಿ. ಬಸವನಗುಡಿಯ ಕೃಷ್ಣರಾವ್ ಪಾರ್ಕ್‌ನಲ್ಲಿ ಡಿಸೆಂಬರ್ 10ರಂದು ರಾತ್ರಿ 7.45ರ ಸುಮಾರಿಗೆ ಈ ದಾಳಿ ನಡೆದಿದೆ.
ಇದೂ ಓದಿ: ಅಯೋಧ್ಯೆಯಲ್ಲಿ ‘ಬೆಂಗಳೂರು ಕೆಫೆ’: ರಾಮ ಜನ್ಮಭೂಮಿಯಲ್ಲಿ ಈಗ ಉಡುಪಿಯ ನೈಜ ರುಚಿಯ ಹೋಟೆಲ್
ಗಾಯಗೊಂಡಿರುವ ಉದ್ಯಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಠಾಣೆ ಪೊಲೀಸರು ಅವರ ಹೇಳಿಕೆ ಪಡೆದು, ಘಟನೆ ನಡೆದ ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ʼನನಗೆ ಯಾರ ಮೇಲೂ ಅನುಮಾನವಿಲ್ಲ, ನನಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ, ಯಾರು-ಯಾಕೆ ದಾಳಿ ನಡೆಸಿದ್ದಾರೆಂದು ಗೊತ್ತಾಗುತ್ತಿಲ್ಲʼ ಎಂಬುದಾಗಿ ರಾಜಗೋಪಾಲ್ ಪೊಲೀಸರಿಗೆ ತಿಳಿಸಿದ್ದಾರೆ.
ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಈ ಹಿಂದೆ ಎರಡು ಗಲಾಟೆ: ಮೆಜೆಸ್ಟಿಕ್ ಬಳಿ ಇರುವ ಸಹೋದರನ ಜಾಗದ ವಿಚಾರವಾಗಿ ಹತ್ತು ವರ್ಷಗಳ ಹಿಂದೆ ರಮೇಶ್ ಎಂಬವರ ಜೊತೆ ಜಗಳವಾಗಿತ್ತು. ಕಾರ್ಗಿಲ್ ಬಾರ್‌ನ ಬಿಲ್ಡಿಂಗ್ ವಿಚಾರವಾಗಿ ಶಾಂತಕುಮಾರ್ ಹಾಗೂ ಕಾರ್ತಿಕ್ ಎನ್ನುವವರ ಜೊತೆ ಜಗಳವಾಗಿತ್ತು ಎಂದು ರಾಜಗೋಪಾಲ್ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!



