ಒಳಗೇನಿದೆ!?

2030ರ ವೇಳೆಗೆ 900 ಕಾಫಿ ಕೇಂದ್ರಗಳ ಸ್ಥಾಪನೆ ಗುರಿ, ಬೃಹತ್‌ ವಿಸ್ತರಣೆಗೆ ಸಜ್ಜಾದ ಕಂಪನಿ

ಹೋಟೆಲ್‌ ಕನ್ನಡ, ಬೆಂಗಳೂರು: ಭಾರತದ ಪ್ರಮುಖ ಕಾಫಿ ಕಂಪನಿಯಾದ ‘ಬರಿಸ್ತಾ ಕಾಫಿ’ (Barista Coffee) ತನ್ನ ಮಾರುಕಟ್ಟೆ ವಿಸ್ತರಿಸಲು ಮುಂದಾಗಿದ್ದು, 2030ರ ವೇಳೆಗೆ ದೇಶಾದ್ಯಂತ ತನ್ನ ಮಳಿಗೆಗಳ ಸಂಖ್ಯೆಯನ್ನು 800 ರಿಂದ 900ಕ್ಕೆ ಏರಿಸುವ ಗುರಿ ಹಾಕಿಕೊಂಡಿದೆ. ಈ ವಿಸ್ತರಣೆಯಲ್ಲಿ ಕಂಪನಿ ಮುಖ್ಯವಾಗಿ 2 ಮತ್ತು 3ನೇ ಹಂತದ (Tier-II & III) ನಗರಗಳ ಮೇಲೆ ಹೆಚ್ಚಿನ ಗಮನ ಹರಿಸಲಿದೆ ಎಂದು ಸಿಇಒ ರಜತ್ ಅಗರ್ವಾಲ್ ತಿಳಿಸಿದ್ದಾರೆ.

ಇತ್ತೀಚೆಗೆ ಬಿಹಾರದ ಪಟನಾದಲ್ಲಿ ತನ್ನ 500ನೇ ಕೆಫೆಯನ್ನು ಬರಿಸ್ತಾ ಉದ್ಘಾಟಿಸಿದೆ. ಸಣ್ಣ ನಗರಗಳಲ್ಲಿ ಯುವಜನತೆಯ ಕಾಫಿ ಸಂಸ್ಕೃತಿ ಮತ್ತು ಆದಾಯ ಮಟ್ಟ ಹೆಚ್ಚುತ್ತಿರುವುದರಿಂದ ಈ ನಗರಗಳಲ್ಲಿ ಉತ್ತಮ ಅವಕಾಶಗಳಿವೆ. ಮೆಟ್ರೋ ನಗರಗಳಿಗೆ ಹೋಲಿಸಿದರೆ ಇಲ್ಲಿ ಮಳಿಗೆಗಳ ಬಾಡಿಗೆ ಮತ್ತು ನಿರ್ವಹಣಾ ವೆಚ್ಚ ಕಡಿಮೆ ಇರುವುದರಿಂದ ಲಾಭದ ಪ್ರಮಾಣವೂ ಉತ್ತಮವಾಗಿರುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಪ್ರಮುಖ ಅಂಶಗಳು
  • ವಾರ್ಷಿಕ ವಿಸ್ತರಣೆ: ಕಂಪನಿ ಪ್ರತಿ ವರ್ಷ ಸುಮಾರು 50-60 ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸಿದ್ದು, ಇದು ಕಂಪನಿ ಒಡೆತನ ಹಾಗೂ ಫ್ರಾಂಚೈಸಿ ಮಾದರಿಯ ಮಿಶ್ರಣವಾಗಿರಲಿದೆ.
  • ವೆಂಡಿಂಗ್ ಮಷಿನ್: ಕಾಫಿ ವೆಂಡಿಂಗ್ ಮಷಿನ್ ವಲಯದಲ್ಲೂ ಬರಿಸ್ತಾ ಭಾರಿ ಬೆಳವಣಿಗೆ ನಿರೀಕ್ಷಿಸುತ್ತಿದೆ. ಪ್ರಸ್ತುತ 500 ಯಂತ್ರಗಳನ್ನು ಹೊಂದಿದ್ದು, ಮುಂದಿನ 5 ವರ್ಷಗಳಲ್ಲಿ ಇದನ್ನು 5,000ಕ್ಕೆ (10 ಪಟ್ಟು ಹೆಚ್ಚಳ) ಏರಿಸುವ ಗುರಿ ಹೊಂದಿದೆ.
  • ಆರ್ಥಿಕ ಗುರಿ: 2026ರ ಆರ್ಥಿಕ ವರ್ಷದಲ್ಲಿ ಫ್ರಾಂಚೈಸಿ ಆದಾಯವೂ ಸೇರಿ ಒಟ್ಟು 400 ಕೋಟಿ ರೂ. ಮಾರಾಟದ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ಇದೂ ಓದಿ: ಜಗತ್ತಿನಲ್ಲೇ ಅತ್ಯಧಿಕ ಚಹಾ ಸೇವನೆ ಇರುವ ದೇಶ ಭಾರತ!

ಪ್ರಸ್ತುತ ಭಾರತದಲ್ಲಿ ಕೆಫೆ ಉದ್ಯಮ ಸುಮಾರು 6,000 ಕೋಟಿ ರೂ. ಮೌಲ್ಯದ್ದಾಗಿದ್ದು, ವಾರ್ಷಿಕವಾಗಿ ಶೇ. 10-12ರ ದರದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬರಿಸ್ತಾ ತನ್ನ ಜಾಲ ಬಲಪಡಿಸಿಕೊಳ್ಳುತ್ತಿದೆ.

ಇದೂ ಓದಿ: ದಾವೋಸ್ ಶೃಂಗಸಭೆಯಲ್ಲೂ ಚಹಾ-ಸಮೋಸಾ, ಪಕೋಡ-ಕಿಚಡಿ ಮುಂತಾದ ಭಾರತೀಯ ಆಹಾರಗಳು..

ಇದೂ ಓದಿ: ಮಸಾಲಾ ಟೀಯಿಂದ ಕಡುಕಪ್ಪು ಚಹಾದವರೆಗೆ; ಜೀವನವಿಧಾನ..

ಇದೂ ಓದಿ: ನ್ಯಾಯಕ್ಕಾಗಿ ಚಹಾ ಮೊರೆ ಹೋದ ವಿವಾಹಿತ; ಕೈಯಲ್ಲಿ ಬೇಡಿ, ಪತ್ನಿ ಮನೆ ಬಳಿಯೇ ಟೀ ಸ್ಟಾಲ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ