ಒಳಗೇನಿದೆ!?

ಬಜೆಟ್‌ನಲ್ಲಿ ಏನಿರಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಬೆಂಗಳೂರು ಹೋಟೆಲುಗಳ ಸಂಘ

ಸಿಎಂ ಜೊತೆ ಪಿ.ಸಿ.ರಾವ್‌, ವೀರೇಂದ್ರ ಕಾಮತ್.

ಹೋಟೆಲ್‌ ಕನ್ನಡ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಮತ್ತೊಂದು ಬಜೆಟ್‌ ಮಂಡನೆಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್‌ ಕ್ಷೇತ್ರದ ಬೇಡಿಕೆಗಳ ಬಗ್ಗೆ ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ) ಮನವಿಯನ್ನು ಸಲ್ಲಿಸಿದೆ.

ಕರ್ನಾಟಕದ 2026-27ರ ಬಜೆಟ್‌ ಪೂರ್ವ ಸಭೆಯಲ್ಲಿ ಭಾಗಿಯಾದ ಬಿಎಚ್‌ಎ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಕೋರಿಕೊಂಡಿದೆ. ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌, ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಎನ್.ವೀರೇಂದ್ರ ಕಾಮತ್‌ ಈ ಮನವಿ ಸಲ್ಲಿಸಿದ್ದಾರೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಆತಿಥ್ಯ ಉದ್ಯಮ ಒಂದು ವಿಶೇಷವಾದ ಉದ್ಯಮವಾಗಿದ್ದು, ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದಲ್ಲದೆ, ರೈತರು ಬೆಳೆಯುವ ಪದಾರ್ಥಗಳನ್ನು ಹೆಚ್ಚಿಗೆ ಖರೀದಿಸಿ ಪ್ರೋತ್ಸಾಹಿಸುತ್ತ ಬಂದಿರುತ್ತೇವೆ. ಜೊತೆಗೆ ಜನಸಾಮಾನ್ಯರಿಗೆ ಉಚಿತವಾಗಿ ಕುಡಿಯುವ ನೀರು ಹಾಗೂ ಶೌಚಗೃಹ ಸೌಲಭ್ಯ ಒದಗಿಸುತ್ತಿದ್ದೇವೆ ಎಂದಿರುವ ಇವರು, ತಮ್ಮ ಉದ್ಯಮಕ್ಕೆ ಅಗತ್ಯವಿರುವ ಸಹಕಾರವನ್ನು ಕೋರಿದ್ದಾರೆ.

ಇದೂ ಓದಿ: ಬಜೆಟ್‌ನಲ್ಲಿ ಹೋಟೆಲ್‌ ಕ್ಷೇತ್ರಕ್ಕೆ ಸಿಕ್ಕಿದ್ದೇನು?; ಏನಿದು ರಾಷ್ಟ್ರೀಯ ಆತಿಥ್ಯ ಸಂಸ್ಥೆ?

ʼನಮ್ಮ ಉದ್ಯಮಕ್ಕೆ 24/7 ತೆರೆಯಲು ಅನುಮತಿ ಕೊಟ್ಟಿದ್ದರೂ ಆ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಬಂದಿರುವುದಿಲ್ಲ, ಇದನ್ನು ಪ್ರಮುಖವಾಗಿ ಪರಿಗಣಿಸಬೇಕೆಂದು ಕೋರುತ್ತೇವೆ. ಜೊತೆಗೆ ಬಾರ್ & ರೆಸ್ಟೋರೆಂಟ್‌ಗಳಿಗೆ ಕನಿಷ್ಠ ಪಕ್ಷ ತಡರಾತ್ರಿ 2 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕುʼ ಎಂಬುದಾಗಿ ಬಿಎಚ್‌ಎ ಮನವಿ ಮಾಡಿಕೊಂಡಿದೆ.

ಇದೂ ಓದಿ: ಏನನ್ನು ತಿನ್ನಬೇಕು/ತಿನ್ನಬಾರದು ಅಂತ ಕೂಡ ತಿಳಿಸುತ್ತೆ ಈ ಎಐ!; ಏನಿದು ಬಫೆ-ಜಿಪಿಟಿ?  

ಬಿಎಚ್‌ಎ ಇತರ ಬೇಡಿಕೆಗಳು
  • ಬಿಬಿಎಂಪಿ ಆಸ್ತಿ ತೆರಿಗೆಯ ಮೇಲೆ ಶೇ.40 ಹೆಚ್ಚುವರಿಯಾಗಿ ಗಾರ್ಬೇಜ್‌ ಟ್ಯಾಕ್ಸ್ ಹಾಕಿರುವುದನ್ನು ಹಿಂಪಡೆಯಬೇಕು.
  • ವ್ಯವಹಾರವನ್ನು ಸುಲಭವಾಗಿಸುವ ಕ್ರಮದಡಿ ಎಲ್ಲ ಪರವಾನಗಿಗಳನ್ನು ಏಕಗವಾಕ್ಷಿ ಮೂಲಕ ಇತ್ಯರ್ಥ ಪಡಿಸಬೇಕು.
  • ಬೆಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲ ರಸ್ತೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಉದ್ಯಮಿಗಳಿಗೆ ಅಡಚಣೆ ಆಗದಂತೆ ಸಹಕರಿಸಬೇಕು.‌

ಇದೂ ಓದಿ:ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ: ಈಗ ಬೆಂಗಳೂರಲ್ಲೂ ಸಿಗುತ್ತೆ ಮೈಸೂರು ಮೈಲಾರಿ ದೋಸೆ; ಹೋಟೆಲ್‌ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಇದೂ ಓದಿ: ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ