ಒಳಗೇನಿದೆ!?

ಎಫ್​ಎಸ್​ಎಸ್​ಎಐ ಪ್ರಮಾಣಪತ್ರಗಳಿಗಿನ್ನು ನವೀಕರಣ ಅನಗತ್ಯ; ಒಮ್ಮೆ ಪಡೆದರೆ ಜೀವಿತಾವಧಿ ಮಾನ್ಯತೆ

ಹೋಟೆಲ್ ಕನ್ನಡ, ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ನೀಡುವ ನೋಂದಣಿ ಪ್ರಮಾಣಪತ್ರ ಹಾಗೂ ಪರವಾನಗಿಗಳು ಇನ್ಮುಂದೆ ಜೀವಿತಾವಧಿ ಮಾನ್ಯತೆ ಹೊಂದಿರಲಿವೆ ಹಾಗೂ ಅವುಗಳಿಗೆ ನವೀಕರಣ ಅಗತ್ಯವಿರುವುದಿಲ್ಲ.

ವ್ಯಾಪಾರ-ವಹಿವಾಟು ಇನ್ನಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ತರಲಾಗಿರುವ ಕೆಲವು ಸುಧಾರಣೆಗಳ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಎಫ್​ಎಸ್​ಎಸ್​ಎಐ, ಶುಕ್ರವಾರ ಈ ವಿಷಯ ತಿಳಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅನುಮೋದಿಸಿದ ಸುಧಾರಣೆಗಳಲ್ಲಿ ಮುಖ್ಯವಾಗಿ ನೋಂದಣಿಗೆ ಅಗತ್ಯವಿರುವ ವಾರ್ಷಿಕ ವಹಿವಾಟು ಮಿತಿಯನ್ನು 12 ಲಕ್ಷದಿಂದ 1.5 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಬದಲಾವಣೆ ಮಾರ್ಚ್ 10ರಿಂದಲೇ ಜಾರಿಗೆ ಬಂದಿದೆ ಎಂದು ಎಫ್​ಎಸ್​ಎಸ್​ಎಐ ತಿಳಿಸಿದೆ.

ಇದೂ ಓದಿ: ಆಹಾರೋದ್ಯಮ ಸ್ಥಗಿತಗೊಳಿಸಿದರೆ ಮುಕ್ತಾಯ ವರದಿ ಸಲ್ಲಿಕೆ ಕಡ್ಡಾಯ!; ಎಫ್‌ಎಸ್‌ಎಸ್‌ಎಐ ನಿಯಮ

ಅಲ್ಲದೆ, ನಗರಪಾಲಿಕೆಗಳಲ್ಲಿ ನೋಂದಾಯಿತ ಬೀದಿಬದಿ ವ್ಯಾಪಾರಿಗಳು ಸ್ವಯಂಚಾಲಿತವಾಗಿ ಎಫ್‌ಎಸ್‌ಎಸ್‌ಎಐಯಲ್ಲಿ ‘ಡೀಮ್ಡ್ ನೋಂದಾಯಿತ’ರಾಗುತ್ತಾರೆ. ಇದರಿಂದ ಸಣ್ಣ ವ್ಯಾಪಾರಿಗಳಿಗೆ ತುಂಬಾ ಸುಲಭವಾಗಲಿದೆ ಎಂಬುದಾಗಿಯೂ ಅದು ತಿಳಿಸಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ವ್ಯಾಪಾರ ಸುಲಭವಾಗಿಸುವುದು ಹಾಗೂ ಆಹಾರ ಸುರಕ್ಷತೆ ಖಚಿತಪಡಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯ ಈ ಸಮಗ್ರ ನಿಯಂತ್ರಣ ಸುಧಾರಣೆಗಳನ್ನು ಅನುಮೋದಿಸಿದೆ ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ. ಈ ಕ್ರಮಗಳು ದೇಶದ ಆಹಾರ ವ್ಯವಹಾರ ಹೆಚ್ಚು ಸುಗಮಗೊಳಿಸುವ ಭರವಸೆ ನೀಡಿವೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬಜೆಟ್‌ನಲ್ಲಿ ಹೋಟೆಲ್‌ ಕ್ಷೇತ್ರಕ್ಕೆ ಸಿಕ್ಕಿದ್ದೇನು?; ಏನಿದು ರಾಷ್ಟ್ರೀಯ ಆತಿಥ್ಯ ಸಂಸ್ಥೆ?

ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ‌ ನೇತೃತ್ವ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ