ಒಳಗೇನಿದೆ!?

ಚಹಾ ಮಾರಿದ್ದೆ, ತಟ್ಟೆ-ಲೋಟ ಕೂಡ ತೊಳೆದಿದ್ದೆ; ಆ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ..

ಮಿರ್ಜಾಪುರ: ಚಾಯ್‌ವಾಲಾ ಎಂದಾಕ್ಷಣ ಬಹುತೇಕರಿಗೆ ಪ್ರಮುಖವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೆನಪಾಗುವುದು ಸಹಜ. ಏಕೆಂದರೆ ಒಂದು ಕಾಲದಲ್ಲಿ ಚಹಾ ಮಾರುತ್ತಿದ್ದರು ಎನ್ನಲಾದ ನರೇಂದ್ರ ಮೋದಿ ನಂತರ ಪ್ರಧಾನಿ ಆಗುವ ಮಟ್ಟಕ್ಕೆ ಬೆಳೆದಿದ್ದು ಒಂದು ಸಾಹಸಗಾಥೆಯೇ ಸರಿ.  ತಮ್ಮ ಈ ಚಾಯ್‌ವಾಲಾ ಹಿನ್ನೆಲೆ ಕುರಿತು ಪ್ರಧಾನಿ ಈ ಹಿಂದೆ ಹಲವು ಸಲ ಹೇಳಿಕೊಂಡಿದ್ದು, ಭಾನುವಾರ ಅದನ್ನೇ ಇನ್ನೊಮ್ಮೆ ಉಲ್ಲೇಖಿಸಿದ್ದಾರೆ.

ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಮೇ 26ರಂದು ನಡೆದ ಬಹಿರಂಗ ಸಭೆಯಲ್ಲಿ ಮತ ಯಾಚಿಸಿದ ಅವರು, ಚಹಾ ಜೊತೆಗಿನ ತಮ್ಮ ಹಿನ್ನೆಲೆಯನ್ನು ಸಾರ್ವಜನಿಕರ ಮುಂದೆ ಇನ್ನೊಮ್ಮೆ ನೆನಪಿಸಿಕೊಂಡರು.

ನಾನು ಬಾಲ್ಯದಲ್ಲಿ ಚಹಾ ಮಾರಾಟ ಮಾಡಿದ್ದಲ್ಲದೆ, ತಟ್ಟೆ-ಲೋಟ ತೊಳೆದು ಬೆಳೆದಿದ್ದೇನೆ. ಮೋದಿ ಮತ್ತು ಚಹಾ ನಡುವಿನ ಸಂಬಂಧ ಗಾಢವಾದುದು ಹಾಗೂ ವಿಶೇಷವಾದುದು ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ