ಒಳಗೇನಿದೆ!?

ಸೆಪ್ಟೆಂಬರ್‌ನಲ್ಲಿ ವರ್ಲ್ಡ್‌ ಫುಡ್‌ ಇಂಡಿಯಾ-2024; ಭಾರತ ಸರ್ಕಾರದ ಕಾರ್ಯಕ್ರಮ

ನವದೆಹಲಿ: ಭಾರತ ಸರ್ಕಾರದ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ ಹಮ್ಮಿಕೊಂಡಿರುವ ವಾರ್ಷಿಕ ಕಾರ್ಯಕ್ರಮ ʼವರ್ಲ್ಡ್‌ ಫುಡ್‌ ಇಂಡಿಯಾʼ ಈ ಸಲ ಸೆ.19ರಿಂದ 22ರ ವರೆಗೆ ನವದೆಹಲಿಯಲ್ಲಿನ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ನಡೆಯಲಿದೆ.

ಆಹಾರ ಸಂಸ್ಕರಣಾ ಉದ್ಯಮಗಳ ಸಚಿವ ಚಿರಾಗ್‌ ಪಾಸ್ವಾನ್‌, ಆಹಾರ ಸಂಸ್ಕರಣಾ ಉದ್ಯಮಗಳ ಖಾತೆಯ ರಾಜ್ಯ ಸಚಿವ ರವನೀತ್‌ ಸಿಂಗ್‌ ಬಿಟ್ಟು ಅವರು ಜೂ.19ರಂದು ದೆಹಲಿಯ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ಹಂಚಿಕೊಂಡರು.

ಶ್ರೀಮಂತ ಭಾರತೀಯ ಆಹಾರ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಮತ್ತು ದೇಶದ ವೈವಿಧ್ಯಮಯ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು 2017ರಲ್ಲಿ ʼವರ್ಲ್ಡ್ ಫುಡ್ ಇಂಡಿಯಾʼ ಪ್ರಾರಂಭಿಸಿತು. ಈ ವರ್ಷ ʼವರ್ಲ್ಡ್ ಫುಡ್ ಇಂಡಿಯಾʼ ಸೆಪ್ಟೆಂಬರ್‌ 19ರಿಂದ 22ರ ವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿನ ಭಾರತ ಮಂಟಪದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಇದು ಆಹಾರ ಉದ್ಯಮದ ದಿಗ್ಗಜರು ಹಾಗೂ ಸಂಬಂಧಿತ ಕ್ಷೇತ್ರದ ಹೂಡಿಕೆದಾರರು, ಅಧಿಕಾರಿಗಳು ಮುಂತಾದವರ ಸಮಾಗಮದ ಬೃಹತ್‌ ವೇದಿಕೆ ಆಗಿರಲಿದ್ದು, ಆಹಾರ ಸಂಸ್ಕರಣಾ ಉದ್ಯಮದ ದೇಶಾದ್ಯಂತದ ಪ್ರತಿನಿಧಿಗಳು ಮಾತ್ರವಲ್ಲದೆ ವಿದೇಶಗಳಿಂದಲೂ ಅತಿಥಿಗಳು-ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಕುರಿತು ಸಂಕ್ಷಿಪ್ತ ವಿವರ ನೀಡಿದ ಅವರು, ಹೆಚ್ಚಿನ ಮಾಹಿತಿ, ನೋಂದಣಿ ಇತ್ಯಾದಿಗಳಿಗೆ ಅಧಿಕೃತ ಅಂತರ್ಜಾಲ ತಾಣ ( https://www.worldfoodindia.gov.in/ ) ವೀಕ್ಷಿಸುವಂತೆ ಕೋರಿಕೊಂಡರು.

https://twitter.com/worldfoodindia/status/1803300466861670905

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ