ಇಂಡಿಯನ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ (ಎಎಚ್‌ಎಆರ್) ಎಂಬುದನ್ನು ಸಂಕ್ಷಿಪ್ತವಾಗಿ ʼಆಹಾರ್ʼ ಎಂದೂ ಕರೆಯಲಾಗುತ್ತದೆ. ಪರಸ್ಪರ ಪ್ರಯೋಜನದ ಆಶಯದೊಂದಿಗೆ ದೇಶದ ಎಲ್ಲ ಹೋಟೆಲ್‌ಗಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ಇದನ್ನು 1979ರಲ್ಲಿ ಸ್ಥಾಪಿಸಲಾಯಿತು. ಮುಂಬೈನ ವರ್ಲಿಯ ಸಣ್ಣ ಬಾಡಿಗೆ ಸ್ಥಳದಲ್ಲಿ ಆರಂಭವಾದ ಈ ಸಂಘಟನೆ ಕ್ರಮೇಣ ಬೆಳೆದು ದಾದರ್‌ನ ಶಿವಾಜಿ ಪಾರ್ಕ್‌ಗೆ ಸ್ಥಳಾಂತರಗೊಂಡಿತು. ದತ್ತ ಕದಂ ಅವರು ಈ ಸಂಘಟನೆಯ ಪ್ರಪ್ರಥಮ ಅಧ್ಯಕ್ಷರು. ಸಣ್ಣ, ಮಧ್ಯಮ ಹಾಗೂ 3 ಸ್ಟಾರ್ ವರೆಗಿನ ಹೋಟೆಲ್‌ಗಳನ್ನು ಒಂದೇ ವೇದಿಕೆಯಡಿ ತರುವುದು ತಮ್ಮ ಉದ್ದೇಶ, ಸದ್ಯ 8 ಸಾವಿರಕ್ಕೂ ಅಧಿಕ ಹೋಟೆಲ್‌ಗಳು ತಮ್ಮಲ್ಲಿ ನೋಂದಾಯಿಸಿಕೊಂಡಿವೆ ಎಂದು ಈ ಸಂಘ ಹೇಳಿಕೊಂಡಿದೆ.