ರಾಜಧಾನಿ ಬೆಂಗಳೂರಿನಲ್ಲಿರುವ ಎಲ್ಲ ಹೋಟೆಲುಗಳಿಗೆ ಒಂದು ಸಂಘಟಿತ ಶಕ್ತಿ ಒದಗಿಸುವ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆರಂಭ ಆಗಿರುವಂಥದ್ದೇ ‘ಬೃಹತ್ ಬೆಂಗಳೂರು ಹೋಟೆಲುಗಳ ಸಂಘ’ (ಬಿಬಿಎಚ್‌ಎ). ಬೃಹತ್ ಬೆಂಗಳೂರು ಹೊಟೇಲುಗಳ ಸಂಘ(ರಿ.) 88 ವರ್ಷಗಳ ಹಳೆಯ ಸಂಸ್ಥೆಯಾಗಿದ್ದು, 1936ರಲ್ಲಿ ಇದರ ಸ್ಥಾಪನೆ ಆಯಿತು. ಬಿ.ಟಿ.ರಾಮಯ್ಯ ಅವರು ಇದರ ಸ್ಥಾಪಕ ಅಧ್ಯಕ್ಷರು. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮದ ದೊಡ್ಡ ಧ್ವನಿ ಆಗಿರುವ ಬೃಹತ್ ಬೆಂಗಳೂರು ಹೋಟೆಲುಗಳ ಸಂಘವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹಲವು ಹೋಟೆಲುಗಳ ಸದಸ್ಯತ್ವ ಹೊಂದಿದೆ.