ಬೆಂಗಳೂರು: ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರ 70ನೇ ಜ್ಮನದಿನಾಚರಣೆ ಬೆಂಗಳೂರು ಅರಮನೆಯ ಗಾಯತ್ರಿ ವಿಹಾರದಲ್ಲಿ ಜೂ.30ರಂದು ಅದ್ಧೂರಿಯಾಗಿ ನಡೆಯಿತು.
ಪಿ.ಸಿ.ರಾವ್ ಅವರು ರವಿವಾರ ಮೊದಲಿಗೆ ಉಡುಪಿಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಕುಟುಂಬವರ್ಗದವರ ಸಮೇತ ಭೇಟಿಯಾಗಿ ಆಶೀರ್ವಾದ ಪಡೆದರು. ನಂತರ ಅರಮನೆ ಮೈದಾನದಲ್ಲಿನ ಅದ್ಧೂರಿ ಸಮಾರಂಭದಲ್ಲಿ ಭಾಗಿಯಾದರು.
ತಮ್ಮ 70ನೇ ಜನ್ಮದಿನದ ಜೊತೆಗೆ ತಾವು ಬೆಂಗಳೂರಿನಲ್ಲಿ ಸುದೀರ್ಘ 50 ವರ್ಷಗಳನ್ನು ಕಳೆದಿರುವ ಕುರಿತು ಸಂತೋಷವನ್ನು ಹಂಚಿಕೊಳ್ಳುವ ಸಲುವಾಗಿ ಪಿ.ಸಿ.ರಾವ್ ಅವರ ಅರಮನೆ ಮೈದಾನದಲ್ಲಿ ತಮ್ಮ ಆಪ್ತೇಷ್ಟರಿಗಾಗಿ ಔತಣಕೂಟ ಆಯೋಜಿಸಿದ್ದರು.
ಹೋಟೆಲ್ ಹಾಗೂ ವಿವಿಧ ಕ್ಷೇತ್ರಗಳ ನೂರಾರು ಗಣ್ಯರು ಇದರಲ್ಲಿ ಭಾಗವಹಿಸಿ, ಪಿ.ಸಿ.ರಾವ್ ಅವರಿಗೆ ಜನ್ಮದಿನದ ಶುಭ ಹಾರೈಸಿದರು. ಅಲ್ಲದೆ ಅವರ ಮುಂದಿನ ಜೀವನಕ್ಕೂ ಶುಭಾಶಯ ಕೋರಿದರು.
ಪಿ.ಸಿ.ರಾವ್ ಅವರು ಐಡಿಯಲ್ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ, ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ನಿರ್ದೇಶಕ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ, ಆನಂದ ಬಳಗದ ಉಪಾಧ್ಯಕ್ಷ, ಕರ್ನಾಟಕ ಟೂರಿಸಂ ಸೊಸೈಟಿ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.