ಒಳಗೇನಿದೆ!?

ಈ ರೆಸ್ಟೋರೆಂಟ್‌ಗೆ ನೀವೇ ಮಾಲೀಕರಾಗಬಹುದು; ಇಲ್ಲಿದೆ ವಿವರ…

Hotel Zafrani House
ಹೋಟೆಲ್‌ ಜಫ್ರಾನಿ ಹೌಸ್

ಬೆಂಗಳೂರು: ಹೋಟೆಲ್‌ ಉದ್ಯಮವೊಂದು ಸೆಳೆತ, ಒಂದು ಹೋಟೆಲ್‌ ನಡೆಸಬೇಕು ಅಥವಾ ಹೋಟೆಲೊಂದರ ಮಾಲೀಕರಾಗಬೇಕು ಎನ್ನುವುದು ಹಲವರ ಬಯಕೆ ಆಗಿರುತ್ತದೆ. ಅಂಥವರಿಗೆ ಇಲ್ಲೊಂದು ಸುಸಜ್ಜಿತ ಹೋಟೆಲ್‌ನ ಮಾಲೀಕರಾಗುವ ಅವಕಾಶವಿದೆ.

ಅರ್ಥಾತ್‌, ರಾಜಧಾನಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ʼಜಫ್ರಾನಿ ಹೌಸ್ʼ‌ ಎನ್ನುವ ಈ ಲಕ್ಸುರಿ ರೆಸ್ಟೋರೆಂಟ್‌ ಮಾರಾಟಕ್ಕಿದೆ. ಒಮ್ಮೆಗೆ 90 ಮಂದಿ ಆಸೀನರಾಗಿ ಊಟ-ತಿಂಡಿ ಸೇವಿಸುವಷ್ಟು ಸ್ಥಳಾವಕಾಶ ಹೊಂದಿರುವ ಈ ರೆಸ್ಟೋರೆಂಟ್‌ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿದೆ.

ಹೋಟೆಲ್‌ನವರು ಹೇಳುವುದಿಷ್ಟು…

ನಲವತ್ತು ಲಕ್ಷ ರೂಪಾಯಿ ಹೂಡಿಕೆಯಲ್ಲಿ ನಿರ್ಮಾಣಗೊಂಡಿರುವ ಈ ಹೋಟೆಲ್‌ನಲ್ಲಿ ವಾರ್ಷಿಕ 1.5 ಕೋಟಿ ರೂಪಾಯಿಯಷ್ಟು ಹಣದ ಹರಿವು (ಟರ್ನ್‌ ಓವರ್‌) ಇದೆ. ವಾರ್ಷಿಕ 25 ಲಕ್ಷ ರೂ. ನಿವ್ವಳ ಆದಾಯವಿದ್ದು, ಸದ್ಯ 60 ಲಕ್ಷ ರೂ. ಮೊತ್ತಕ್ಕೆ ಮಾರಾಟಕ್ಕಿದೆ.‌

ಆಸಕ್ತರು ಸಂಪರ್ಕಿಸಬಹುದು: ವಿನಯ್‌ ಕುಮಾರ್- 91135 98379

ವಿಶೇಷ ಸೂಚನೆ: ಕೊಳ್ಳುವವರು ಮತ್ತು ಕೊಡುವವರ ಅನುಕೂಲದ ದೃಷ್ಟಿಯಿಂದ ಈ ಮಾಹಿತಿ ಪೋಸ್ಟ್‌ ಮಾಡಲಾಗಿದೆ. ಈ ವ್ಯವಹಾರಕ್ಕೂ ʼಹೋಟೆಲ್‌ ಕನ್ನಡʼಕ್ಕೂ ಯಾವುದೇ ಸಂಬಂಧವಿಲ್ಲ. ವ್ಯವಹರಿಸುವವರ ನಿರ್ಧಾರ ಅವರವರ ವಿವೇಚನೆಗೆ ಬಿಟ್ಟಿದ್ದಾಗಿರುತ್ತದೆಯೇ ಹೊರತು ಅದಕ್ಕೂ ʼಹೋಟೆಲ್‌ ಕನ್ನಡʼಕ್ಕೂ ಯಾವುದೇ ಸಂಬಂಧ ಇರುವುದಿಲ್ಲ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ