ಒಳಗೇನಿದೆ!?

ಹೋಟೆಲ್‌ಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡಿ; ಕೇಂದ್ರ ಸರ್ಕಾರಕ್ಕೆ ಎಫ್‌ಎಚ್‌ಆರ್‌ಎಐ ಮನವಿ

Pradeep Shetty FHRAI
ಎಫ್‌ಎಚ್‌ಆರ್‌ಎಐ ಅಧ್ಯಕ್ಷ ಪ್ರದೀಪ್‌ ಶೆಟ್ಟಿ

ನವದೆಹಲಿ: ಹೋಟೆಲ್‌ಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಫೆಡರೇಷನ್‌ ಆಫ್‌ ಹೋಟೆಲ್‌ & ರೆಸ್ಟೋರೆಂಟ್‌ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾ (ಎಫ್‌ಎಚ್‌ಆರ್‌ಎಐ) ಅಧ್ಯಕ್ಷ ಪ್ರದೀಪ್‌ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ಬಜೆಟ್‌ ಪೂರ್ವಭಾವಿ ಶಿಫಾರಸಿನಲ್ಲಿ ಎಫ್‌ಎಚ್‌ಆರ್‌ಎಐ ಸಲ್ಲಿಸಿದ್ದ ಮನವಿ ಪತ್ರದಲ್ಲಿ ಈ ಬೇಡಿಕೆಯನ್ನು ಉಲ್ಲೇಖಿಸಲಾಗಿದೆ.

ದೇಶದ ಎಲ್ಲ ಹೋಟೆಲ್‌ ಮತ್ತು ಸಮಾವೇಶ ಕೇಂದ್ರಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡುವುದರಿಂದ ಆತಿಥೇಯ ಕ್ಷೇತ್ರಕ್ಕೆ ಬಂಡವಾಳವನ್ನು ಆಕರ್ಷಿಸುವ ಜೊತೆಗೆ ಅದರ ಅಭಿವೃದ್ಧಿಗೂ ವೇಗ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಅವರು, 10 ಕೋಟಿ ರೂಪಾಯಿಗೂ ಹೆಚ್ಚಿನ ಯೋಜನಾ ವೆಚ್ಚದ ಸಮಾವೇಶ ಕೇಂದ್ರಗಳು ಮತ್ತು ಹೋಟೆಲ್‌ಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡಬೇಕು ಎಂದು ಕೋರಿದ್ದಾರೆ.

ಫೆಡರೇಷನ್‌ ಆಫ್‌ ಹೋಟೆಲ್‌ & ರೆಸ್ಟೋರೆಂಟ್‌ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾ ಅಧ್ಯಕ್ಷ ಪ್ರದೀಪ್‌ ಶೆಟ್ಟಿ

ಎಲ್ಲ  ಹೋಟೆಲ್‌ಗಳಿಗೆ ಶೇ. 12 ಜಿಎಸ್‌ಟಿ ದರ ನಿಗದಿಪಡಿಸಲು ಕೋರಿದ ಅವರು, ಸದ್ಯದ ಜಿಎಸ್‌ಟಿ ವ್ಯವಸ್ಥೆಯಲ್ಲಿ ಒಂದೇ ಹೋಟೆಲ್‌ನಲ್ಲಿ ಜಿಎಸ್‌ಟಿ ಬೇರೆ ಸ್ಲ್ಯಾಬ್‌ಗಳಿಗೆ ಹೋಗುವುದರಿಂದ ಅನುಸರಣೆಯಲ್ಲಿ ಸಮಸ್ಯೆಗಳಾಗುವ ಜೊತೆಗೆ ಗ್ರಾಹಕರಲ್ಲಿ ಗೊಂದಲವನ್ನೂ ಉಂಟು ಮಾಡುತ್ತಿದೆ, ಹೀಗಾಗಿ ರೂಮ್‌ ಟ್ಯಾರಿಫ್‌ಗಳಿಂದ ರೆಸ್ಟೋರೆಂಟ್‌ ಟ್ಯಾರಿಫ್‌ಗಳನ್ನು ಪ್ರತ್ಯೇಕಿಸುವಂತೆಯೂ ಕೋರಿದರು.

ಸಂಬಂಧಿತ ಸುದ್ದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಸಂಬಂಧಿತ ಸುದ್ದಿ: ಹೋಟೆಲಿಗರ ಪ್ರಮುಖ ಬೇಡಿಕೆ ಸಂಬಂಧ ವಿತ್ತ ಸಚಿವರ ಪ್ರತಿಕ್ರಿಯೆ ಇದು…

ಸಂಬಂಧಿತ ಸುದ್ದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ