ಬೆಂಗಳೂರು: ರಾಜಧಾನಿಯ ʼಬೃಹತ್ ಬೆಂಗಳೂರು ಹೋಟೆಲುಗಳ ಸಂಘʼಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಕೆ.ಆರ್.ರಸ್ತೆಯಲ್ಲಿರುವ ʼಶ್ರೇಷ್ಠಭೂಮಿʼಯಲ್ಲಿನ ಸಂಘದ ಕಚೇರಿಯಲ್ಲಿ ಜುಲೈ 10ರಂದು ನಡೆಯಿತು.
ಬೃಹತ್ ಬೆಂಗಳೂರು ಹೋಟೆಲುಗಳ ಸಂಘ(ಬಿಬಿಎಚ್‌ಎ) ಬುಧವಾರ ಆಯೋಜಿಸಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆದಿದ್ದು, ನೂತನ ಪದಾಧಿಕಾರಿಗಳ ಅಧಿಕಾರಾವಧಿ 2024ರಿಂದ 2027ರ ವರೆಗೆ ಇರಲಿದೆ.
ನಿಕಟಪೂರ್ವ ಅಧ್ಯಕ್ಷ ಪಿ.ಸಿ.ರಾವ್ ಅವರನ್ನು ಗೌರವಾಧ್ಯಕ್ಷರನ್ನಾಗಿ ಹಾಗೂ ಸುಬ್ರಹ್ಮಣ್ಯ ಹೊಳ್ಳ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬಿಬಿಎಚ್‌ಎ ನೂತನ ಪದಾಧಿಕಾರಿಗಳು
- ಗೌರವಾಧ್ಯಕ್ಷ: ಪಿ.ಸಿ.ರಾವ್, ಐಡಿಯಲ್ ಗ್ರೂಪ್ ಆಫ್ ಕಂಪನೀಸ್.
- ಅಧ್ಯಕ್ಷ: ಸುಬ್ರಹ್ಮಣ್ಯ ಹೊಳ್ಳ, ಉಡುಪಿ ಶ್ರೀಕೃಷ್ಣ ಭವನ.
- ಉಪಾಧ್ಯಕ್ಷ: ಶಂಕರ್ ಕುಂದರ್, ರಜತಾದ್ರಿಸ್ & ಶ್ರೀನಿಧಿ ಗ್ರೂಪ್ ಆಫ್ ಹೋಟೆಲ್ಸ್, ಕೃಷ್ಣಂ.
- ಉಪಾಧ್ಯಕ್ಷ: ಶಕೀರ್ ಹಖ್, ಎಂಪೈರ್ ಹೋಟೆಲ್ಸ್.
- ಕಾರ್ಯದರ್ಶಿ: ವೀರೇಂದ್ರ ಕಾಮತ್, ಕಾಮತ್ ಗ್ರೂಪ್ ಆಫ್ ಹೋಟೆಲ್ಸ್.
- ಖಜಾಂಚಿ: ಸುಧಾಕರ್ ಶೆಟ್ಟಿ, ಕೂಲ್ ಕಾರ್ನರ್.
- ಜಂಟಿ ಕಾರ್ಯದರ್ಶಿ: ರಾಕೇಶ್ ಅಳ್ಸೆ, ಪ್ರಿಯದರ್ಶಿನಿ ಹೋಟೆಲ್.
- ಜಂಟಿ ಕಾರ್ಯದರ್ಶಿ: ಕೃಷ್ಣರಾಜ್, ನಿಸರ್ಗ ಹೋಟೆಲ್.
- ಜಂಟಿ ಕಾರ್ಯದರ್ಶಿ: ಶೇಖರ್ ನಾಯ್ಡು, ಸ್ವಾತಿ ಗ್ರೂಪ್ ಆಫ್ ಹೋಟೆಲ್ಸ್.
- ಜಂಟಿ ಕಾರ್ಯದರ್ಶಿ: ಧನಂಜಯ ಬಿ.ಎಂ., ಸೌತ್ ತಿಂಡೀಸ್.
ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಇದೂ ಓದಿ: ಕರಾವಳಿಯಲ್ಲಿ ಉತ್ತಮ ಪಂಚತಾರಾ ಹೋಟೆಲ್‌ಗಳಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಇದೂ ಓದಿ: ಹೋಟೆಲಿಗರ ಪ್ರಮುಖ ಬೇಡಿಕೆ ಸಂಬಂಧ ವಿತ್ತ ಸಚಿವರ ಪ್ರತಿಕ್ರಿಯೆ ಇದು…