ಒಳಗೇನಿದೆ!?

ಅಬಕಾರಿ ಸಚಿವರಿಗೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಮನವಿ

Bruhath Bangalore Hotels Association (BBHA)
Bruhath Bangalore Hotels Association (BBHA)

ಬೆಂಗಳೂರು: ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದಂತೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (ಬಿಬಿಎಚ್ಎ) ಮನವಿ ಮಾಡಿಕೊಂಡಿದೆ.

ಅಬಕಾರಿ ಇಲಾಖೆಯಲ್ಲಿ ಅವೈಜ್ಞಾನಿಕವಾದ ಹಾಗೂ ಅನಗತ್ಯವಾದ ಹಲವಾರು ಕಾನೂನುಗಳನ್ನು ಸಬಲೀಕರಣ ಮಾಡದೆ ನಮಗೆ ಆಗಿಂದಾಗ್ಯೆ ನೋಟಿಸ್ ಜಾರಿಗೊಳಿಸಿ, ತಪಾಸಣೆ ನಡೆಸುತ್ತಿರುವುದರಿಂದ ಅಡಚಣೆಗಳು ಆಗುತ್ತಿವೆ ಎಂದು ಸಚಿವರಲ್ಲಿ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಮನವಿ ಮಾಡಿಕೊಂಡಿದ್ದಾರೆ. 

ಈಗಾಗಲೇ ಅಬಕಾರಿ ತೆರಿಗೆ ಮುಖಾಂತರ ನಾವು ದಿನಕ್ಕೆ ನೂರು ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೊತ್ತ ಸಂಗ್ರಹಿಸಿ ಕೊಡುತ್ತಿದ್ದೇವೆ. ಇದರ ಜೊತೆಗೆ ವಾರ್ಷಿಕವಾಗಿ ಪ್ರತಿ ಸನ್ನದುದಾರರು 9ರಿಂದ 10 ಲಕ್ಷ ರೂ. ಪರವಾನಗಿ ಶುಲ್ಕ ಕಟ್ಟುತ್ತಿದ್ದೇವೆ. ಕಟ್ಟಡ ಬಾಡಿಗೆ, ವಾಣಿಜ್ಯ ಬಳಕೆ ಗ್ಯಾಸ್, ಹೊರಗುತ್ತಿಗೆ ಸಿಬ್ಬಂದಿ, ಆನ್‌ಲೈನ್‌ ಸೇವೆ ಮುಂತಾದವುಗಳಿಗೆ ಅಧಿಕವಾಗಿ ಶೇ.18 ಜಿಎಸ್‌ಟಿ ಕಟ್ಟುತ್ತಿದ್ದೇವೆ. ಇದಲ್ಲದೆ ಬಹಳಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿರುತ್ತೇವೆ. ಹೀಗಿದ್ದರೂ ನಮ್ಮ ಉದ್ಯಮಕ್ಕೆ ಹಲವು ಅಡಚಣೆಗಳು ಆಗುತ್ತಿವೆ ಎಂದು ಅವರು ಸಚಿವರ ಗಮನ ಸೆಳೆದಿದ್ದಾರೆ.

ಆನ್‌ಲೈನ್‌ ಮೂಲಕ ಪರವಾನಗಿ ಶುಲ್ಕ ಪಾವತಿ ಹಾಗೂ ಪರವಾನಗಿ ಪಡೆಯುವುದು ಸಮರ್ಪಕವಾಗಿ ಸಾಧ್ಯವಾಗುತ್ತಿಲ್ಲ. CL-7ನಿಂದ CL-6ಗೆ ಬದಲಾವಣೆ ಮಾಡುವಾಗ ಹೆಚ್ಚುವರಿ ಶುಲ್ಕ ಕಟ್ಟಿದರೂ ಪರವಾನಗಿ ನೀಡುತ್ತಿಲ್ಲ. ಇತ್ತೀಚೆಗೆ ಇದರ ಬಗ್ಗೆ ನ್ಯಾಯಾಲಯದಿಂದ ಆದೇಶ ಪಡೆಯಬೇಕಾಯಿತು ಎಂದು ಸಚಿವರಿಗೆ ತಿಳಿಸಿದರು.

ಎಲ್ಲ ಸನ್ನದುದಾರರ ಅಳಿವು-ಉಳಿವು ಹಾಗೂ ಬೆಳವಣಿಗೆಗೆ ಅಬಕಾರಿ ಇಲಾಖೆಯ ಸಹಕಾರ ಅತ್ಯಗತ್ಯ. ಇದರ ಜೊತೆಗೆ ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ತಡರಾತ್ರಿ 2 ಗಂಟೆಯ ವರೆಗೆ ಪಬ್, ಬಾರ್ & ರೆಸ್ಟೋರೆಂಟ್ ತೆರೆದಿಡಲು ಅವಕಾಶ ನೀಡಬೇಕು. ಈ ಎಲ್ಲ ವಿಚಾರಗಳ ಬಗ್ಗೆ ಸಮರ್ಪಕವಾಗಿ ಚರ್ಚಿಸಿ ಒಂದು ಹೊಸ ಮಾರ್ಗಸೂಚಿ ಹೊರಡಿಸಬೇಕೆಂದು ಕೋರಿಕೊಂಡಿದ್ದಾರೆ.

ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ(ಬಿಬಿಎಚ್‌ಎ) ಇತ್ತೀಚೆಗೆ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರನ್ನು ಭೇಟಿಯಾಗಿ ಬಾರ್‌, ಪಬ್‌ & ರೆಸ್ಟೋರೆಂಟ್‌ಗಳ ಕುರಿತು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಬಿಬಿಎಚ್‌ಎ ಗೌರವಾಧ್ಯಕ್ಷ ಪಿ.ಸಿ.ರಾವ್‌ ಅವರ ಮಾತು.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಇದೂ ಓದಿ: ಹೋಟೆಲೋದ್ಯಮದ ಸಮಸ್ಯೆಗಳ ಕುರಿತು ಉಪ ಮುಖ್ಯಮಂತ್ರಿ ಅವರಿಗೆ ಬಿಬಿಎಚ್‌ಎ ಮನವಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ