ಒಳಗೇನಿದೆ!?

ಕೇಂದ್ರ ಬಜೆಟ್:‌ ಚಾಯ್‌ವಾಲಾರ ಪ್ರತಿಕ್ರಿಯೆ ಏನು?

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಮಂಡಿಸಿರುವ ಕೇಂದ್ರ ಬಜೆಟ್‌ ಕುರಿತು ʼಚಾಯ್‌ವಾಲಾʼರ ಅಭಿಪ್ರಾಯ ʼಬೈಟುʼ ಎನ್ನುವಂತಾಗಿದೆ. ಅರ್ಥಾತ್‌, ಚಹಾ ಕ್ಷೇತ್ರದಲ್ಲಿ ಬಜೆಟ್‌ ಬಗ್ಗೆ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಅದನ್ನು ಮೆಚ್ಚಿದ್ದರೆ, ಇನ್ನು ಕೆಲವರು ಚೆನ್ನಾಗಿಲ್ಲ ಎಂದು ಮಾತಲ್ಲೇ ಚುಚ್ಚಿದ್ದಾರೆ.

ಚಹಾ ಕಾರ್ಮಿಕರ ಅದರಲ್ಲೂ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ರೂಪಿಸಿರುವ ಪ್ರಧಾನಮಂತ್ರಿ ಶ್ರಮಿಕ್‌ ಪ್ರೋತ್ಸಾಹನ್‌ ಯೋಜನೆ (ಪಿಎಂಸಿಎಸ್‌ಪಿವೈ) ಸ್ವಾಗತಾರ್ಹ ನಡೆ ಎಂದು ಭಾರತೀಯ ಚಹಾ ಸಂಘ (ಟೀ ಅಸೋಸಿಯೇಷನ್‌ ಆಫ್‌ ಇಂಡಿಯಾ-ಟಿಎಐ) ಹೇಳಿದೆ.

ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ 1000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಮೂಲಕ ಕಾರ್ಮಿಕರಿಗೆ ಶಿಕ್ಷಣ-ಆರೋಗ್ಯ ಸೇವೆಗಳ ನಿಬಂಧನೆಗಳನ್ನು ಬಲಪಡಿಸಲು ಚಹಾ ಬೆಳೆಯುವ ಪ್ರದೇಶಗಳಲ್ಲಿ ಅಗತ್ಯ ಆಧಾರಿತ ಮಧ್ಯಸ್ಥಿಕೆ ವಹಿಸುವ ಗುರಿ ಹೊಂದಿದೆ. ಸರ್ಕಾರ ವಿಶೇಷವಾಗಿ ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯದ ಅಗತ್ಯಕ್ಕೆ ಒತ್ತು ನೀಡಿದ್ದು, ಇದರಿಂದ ಚಹಾ ಉದ್ಯಮ ಅಪಾರ ಪ್ರಯೋಜನ ಪಡೆಯಲಿದೆ ಎಂದು ಭಾರತೀಯ ಚಹಾ ಸಂಘ ​​ಹೇಳಿದೆ.

ಅದಾಗ್ಯೂ 2024-25ರ ಬಜೆಟ್‌ನಲ್ಲಿ ಚಹಾ ಉದ್ಯಮಕ್ಕೆ ಏನೂ ಪ್ರಯೋಜನವಿಲ್ಲ ಎಂದು ಚಹಾ ಹರಾಜುದಾರರ ಸಂಘ (ಅಸೋಸಿಯೇಷನ್‌ ಆಫ್‌ ಟೀ ಆಕ್ಷನರ್ಸ್-ಎಟಿಎ)ದ ಕಾರ್ಯದರ್ಶಿ ಸುಜಿತ್‌ ಪಾತ್ರ ಹೇಳಿದ್ದಾರೆ.

ರಫ್ತು ಉತ್ತೇಜಿಸುವ ನಿಟ್ಟಿನಲ್ಲಿ ರಫ್ತು ಉತ್ಪನ್ನಗಳ ಮೇಲಿನ ಸುಂಕಗಳು ಮತ್ತು ತೆರಿಗೆಗಳ ಇಳಿಕೆ ಬಗ್ಗೆ ಉದ್ಯಮದ ನಿರೀಕ್ಷೆ ಇತ್ತು, ಆದರೆ ಬಜೆಟ್‌ನಲ್ಲಿ ಅದು ಈಡೇರಿಲ್ಲ. ಅಲ್ಲದೆ ಚಹಾ ಮಂಡಳಿಯಂತಹ ಸರಕು ಮಂಡಳಿಗಳಿಗೆ ಹಣಕಾಸಿನ ನೆರವು ಬಗ್ಗೆಯೂ ನಿರೀಕ್ಷೆ ಇತ್ತು, ಅದು ಕೂಡ ಈಡೇರಿಲ್ಲ ಎಂದು ಸುಜಿತ್‌ ಪಾತ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದೂ ಓದಿ: ʼದೋಸೆ ಪಾರ್ಸೆಲ್‌ʼ ಎಂದು ತಂದಿದ್ದ ಚೀಲದಲ್ಲಿತ್ತು ನೋಟುಗಳ ಕಂತೆ!

ಇದೂ ಓದಿ: ಕಬಾಬ್‌-ಮಂಚೂರಿಯನ್‌ ಬಳಿಕ ಚಹಾ ಪುಡಿಯದ್ದೂ ಬಣ್ಣ ಬಯಲು

ಇದೂ ಓದಿ: ನಾನು ನಂದಿನಿ, ಮಾರ್ಕೆಟ್‌ಗೆ ಬರ್ತೀನಿ..; ಕೆಎಂಎಫ್‌ನಿಂದಲೂ ಇಡ್ಲಿ-ದೋಸೆ ಹಿಟ್ಟು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ