ಒಳಗೇನಿದೆ!?

ಕೇಂದ್ರ ಬಜೆಟ್‌: ಫೆಡರೇಷನ್‌ ಆಫ್‌ ಹೋಟೆಲ್‌‌ & ರೆಸ್ಟೋರೆಂಟ್ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾ ಪ್ರತಿಕ್ರಿಯೆ ಏನು?

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಮಂಡಿಸಿರುವ ಕೇಂದ್ರ ಬಜೆಟ್‌ ಸಂಬಂಧ ಹೋಟೆಲ್‌ ಹಾಗೂ ಆತಿಥೇಯ ಕ್ಷೇತ್ರದ ಹಲವರಿಂದ ಪ್ರತಿಕ್ರಿಯೆ ಹೊರಹೊಮ್ಮುತ್ತಿದ್ದು, ಫೆಡರೇಷನ್‌ ಆಫ್‌ ಹೋಟೆಲ್‌‌ & ರೆಸ್ಟೋರೆಂಟ್ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾ (ಎಫ್‌ಎಚ್‌ಆರ್‌ಎಐ) ಕೂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ 2047ರ ವಿಕಸಿತ ಭಾರತದ ಕಲ್ಪನೆ ಹಾಗೂ ಅದನ್ನು ಈಡೇರಿಸುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಗಣನೀಯ ಪಾತ್ರದ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್‌ ಮಂಡಿಸಿದ 2024-25ರ ಕೇಂದ್ರ ಬಜೆಟ್‌ ಬಗ್ಗೆ ಆತಿಥೇಯ ಕ್ಷೇತ್ರ ಭಾರಿ ನಿರೀಕ್ಷೆ ಇರಿಸಿಕೊಂಡಿತ್ತು ಎಂದು ಎಫ್‌ಎಚ್‌ಆರ್‌ಎಐ ಅಧ್ಯಕ್ಷ ಪ್ರದೀಪ್‌ ಶೆಟ್ಟಿ ತಿಳಿಸಿದ್ದಾರೆ.

ಅದಾಗ್ಯೂ 2047ರ ಸುಮಾರಿಗೆ 3 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಅಭಿವೃದ್ಧಿಗೆ ವೇಗ ನೀಡುವ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೂಲಭೂತ ಸವಾಲುಗಳನ್ನು ಎದುರಿಸುವ ಸಲುವಾಗಿ ಆತಿಥೇಯ ಕ್ಷೇತ್ರದಲ್ಲಿ ರಚನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಅಂಥದ್ದೇನೂ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೂ ಓದಿ: ಚಹಾ ಮಾರಿದ್ದೆ, ತಟ್ಟೆ-ಲೋಟ ಕೂಡ ತೊಳೆದಿದ್ದೆ; ಆ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ..

ಇದೂ ಓದಿ: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಇದೂ ಓದಿ: ಹೋಟೆಲ್‌ ಉದ್ಯಮಕ್ಕಿದೆ ನಮ್ಮ ಸಂಪೂರ್ಣ ಬೆಂಬಲ: ಕನ್ನಡಪ್ರಭ- ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ