ಒಳಗೇನಿದೆ!?

ಬಿಬಿಎಚ್‌ಎನಿಂದ 500ಕ್ಕೂ ಅಧಿಕ ಮಂದಿಗೆ ಎಫ್‌ಎಸ್‌ಎಸ್ಎಐ ಫಾಸ್ಟ್ಯಾಕ್‌ ಟ್ರೇನಿಂಗ್

ಫಾಸ್ಟ್ಯಾಕ್‌ ಟ್ರೇನಿಂಗ್‌ನಲ್ಲಿ ಹೋಟೆಲ್‌ ಸಿಬ್ಬಂದಿ.

ಬೆಂಗಳೂರು: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ (ಬಿಬಿಎಚ್‌ಎ)ದ ವತಿಯಿಂದ ಎಫ್‌ಎಸ್‌ಎಸ್‌ಎಐ ಫಾಸ್ಟ್ಯಾಕ್‌ ಟ್ರೇನಿಂಗ್‌ ಕೊಡಿಸಲಾಗುತ್ತಿದ್ದು, ಇದುವರೆಗೆ 500ಕ್ಕೂ ಅಧಿಕ ಮಂದಿಗೆ ತರಬೇತಿ ಒದಗಿಸಲಾಗಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಹಾರ ಉದ್ಯಮದಲ್ಲಿ ಇರುವವರಿಗೆ ʼಫುಡ್‌ ಸೇಫ್ಟಿ ಟ್ರೇನಿಂಗ್‌ & ಸರ್ಟಿಫಿಕೇಷನ್‌ʼ (FoSTaC) ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಿಬಿಎಚ್‌ಎ ತನ್ನ ಸದಸ್ಯ ಹೋಟೆಲ್‌ಗಳ ಸಿಬ್ಬಂದಿಗೆ ನಿಯಮಿತವಾಗಿ ಈ ತರಬೇತಿ ಒದಗಿಸುತ್ತಿದೆ.

ಬಿಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್.‌ ಸುಬ್ರಹ್ಮಣ್ಯ ಹೊಳ್ಳ ತರಬೇತಿ ಪಡೆಯುವವರನ್ನು ಉದ್ದೇಶಿಸಿ ಮಾತನಾಡಿದರು. ಗೌರವಾಧ್ಯಕ್ಷ ಪಿ.ಸಿ.ರಾವ್‌, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್‌ ಜೊತೆಗಿದ್ದರು.

ಆಹಾರ ಉದ್ಯಮದಲ್ಲಿ ಇರುವವರಿಗೆ ಫಾಸ್ಟ್ಯಾಕ್‌ ತರಬೇತಿಯನ್ನು ಎಫ್‌ಎಸ್‌ಎಸ್‌ಎಐ ಕಡ್ಡಾಯಗೊಳಿಸಿದೆ. ಹೀಗಾಗಿ ಬಿಬಿಎಚ್‌ಎ ಸದಸ್ಯರಿಗೆ ಸಂಘದಿಂದಲೇ ತರಬೇತಿ ಆಯೋಜಿಸಿ ನೀಡಲಾಗುತ್ತಿದೆ.
| ಪಿ.ಸಿ.ರಾವ್, ಗೌರವಾಧ್ಯಕ್ಷ, ಬಿಬಿಎಚ್‌ಎ.

ಎಫ್‌ಎಸ್‌ಎಸ್‌ಎಐ ಅಧಿಕಾರಿಗಳಿಂದ ಬಿಬಿಎಚ್‌ಎ ಸದಸ್ಯ ಹೋಟೆಲ್‌ಗಳ ಸಿಬ್ಬಂದಿಗೆ ಕಳೆದ ಒಂದು ವರ್ಷದಿಂದ ಈಚೆಗೆ ನಿಯಮಿತವಾಗಿ ಈ ತರಬೇತಿ ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಅಂದರೆ ಜುಲೈ 22ರ ಸೋಮವಾರವೂ ಬಿಬಿಎಚ್‌ಎ ಈ ತರಬೇತಿ ಆಯೋಜಿಸಿದ್ದು, 65 ಮಂದಿ ಪಾಲ್ಗೊಂಡಿದ್ದರು. ಇದರೊಂದಿಗೆ ಕಳೆದೊಂದು ವರ್ಷದ ಅವಧಿಯಲ್ಲಿ ಬಿಬಿಎಚ್‌ಎ 500ಕ್ಕೂ ಅಧಿಕ ಮಂದಿಗೆ ಫಾಸ್ಟ್ಯಾಕ್‌ ತರಬೇತಿ ಕೊಡಿಸಿದಂತಾಗಿದೆ.

ಹೋಟೆಲ್‌ ಸಿಬ್ಬಂದಿಗೆ ತರಬೇತಿ ನೀಡುತ್ತಿರುವ ಎಫ್‌ಎಸ್‌ಎಸ್‌ಎಐ ಅಧಿಕಾರಿ.

ಫಾಸ್ಟ್ಯಾಕ್‌ ಟ್ರೇನಿಂಗ್‌ ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇದೂ ಓದಿ: ʼದೋಸೆ ಪಾರ್ಸೆಲ್‌ʼ ಎಂದು ತಂದಿದ್ದ ಚೀಲದಲ್ಲಿತ್ತು ನೋಟುಗಳ ಕಂತೆ!

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ಹೋಟೆಲ್‌ ಉದ್ಯಮಕ್ಕಿದೆ ನಮ್ಮ ಸಂಪೂರ್ಣ ಬೆಂಬಲ: ಕನ್ನಡಪ್ರಭ- ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ