ಬೆಂಗಳೂರು: ವಿಧಾನಸೌಧದ ಸದನದಲ್ಲಿ ಏನೇನಾಗುತ್ತಿದೆ ಎಂದು ಮಾಧ್ಯಮಗಳ ಮೂಲಕ ರಾಜ್ಯದ ಜನತೆ ಮಾತ್ರವಲ್ಲದೇ, ಜಗತ್ತಿನಾದ್ಯಂತದ ಜನರು ವೀಕ್ಷಿಸುತ್ತಿದ್ದಾರೆ. ಅದಾಗ್ಯೂ ಶಾಲಾ ಮಕ್ಕಳಿಗೆ ವಿಧಾನಸಭಾ ಕಲಾಪವನ್ನು ಹತ್ತಿರದಿಂದ ನೋಡುವ ಅನುಭವ ವಿಶೇಷವಾದುದು.
ರಾಜಧಾನಿ ಬೆಂಗಳೂರಿನ ಶಾಲೆಯೊಂದರ ನೂರಾರು ಮಕ್ಕಳಿಗೆ ಈ ವಿಶೇಷ ಅನುಭವದ ಅವಕಾಶವನ್ನು ಹೋಟೆಲೋದ್ಯಮಿಯೊಬ್ಬರು ಮಾಡಿಕೊಟ್ಟಿದ್ದಾರೆ. ʼಹೋಟೆಲ್ ರಸಪಾಕʼದ ರೂಪಾ ಶಾಸ್ತ್ರಿ ಅವರು ತಮ್ಮ ʼಋಣ ಫೌಂಡೇಷನ್ʼ ವತಿಯಿಂದ ಶಾಲಾ ಮಕ್ಕಳಿಗಾಗಿ ಇದನ್ನು ಆಯೋಜಿಸಿದ್ದರು.
ತಮ್ಮ ʼಋಣ ಪ್ರತಿಷ್ಠಾನʼದ ವತಿಯಿಂದ ಶಾಲೆಯೊಂದರ ನೂರಕ್ಕೂ ಅಧಿಕ ಮಕ್ಕಳನ್ನು ಬುಧವಾರ ಕಲಾಪ ವೀಕ್ಷಣೆಗಾಗಿ ವಿಧಾನಸೌಧಕ್ಕೆ ಕರೆದೊಯದರು. ಮಕ್ಕಳು ಕಲಾಪ ವೀಕ್ಷಿಸಿದ ಬಳಿಕ ಮಧ್ಯಾಹ್ನ ಅವರನ್ನು ಗಾಂಧಿನಗರದಲ್ಲಿರುವ ತಮ್ಮ ʼರಸಪಾಕ ಹೋಟೆಲ್ʼಗೆ ಕರೆದೊಯ್ದು ಭೋಜನ ವ್ಯವಸ್ಥೆಯನ್ನೂ ಮಾಡಿದರು.
ಇದೂ ಓದಿ: ಹೋಟೆಲ್ ಉದ್ಯಮಕ್ಕಿದೆ ನಮ್ಮ ಸಂಪೂರ್ಣ ಬೆಂಬಲ: ಕನ್ನಡಪ್ರಭ- ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ಬಿಬಿಎಚ್‌ಎನಿಂದ 500ಕ್ಕೂ ಅಧಿಕ ಮಂದಿಗೆ ಎಫ್‌ಎಸ್‌ಎಸ್ಎಐ ಫಾಸ್ಟ್ಯಾಕ್ ಟ್ರೇನಿಂಗ್