ಬೆಂಗಳೂರು: ಹೋಟೆಲ್ ಕ್ಷೇತ್ರದ ಕುರಿತ ಬೇಡಿಕೆಗಳನ್ನು ಬಜೆಟ್ ಹಿನ್ನೆಲೆಯಲ್ಲಿ ಮರು ಪರಿಶೀಲಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ಮನವಿ ಮಾಡಿಕೊಂಡಿದೆ.
ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರು ಹೋಟೆಲಿಗರ ನಿಯೋಗದೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬೆಂಗಳೂರಿನಲ್ಲಿ ರವಿವಾರ ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಹೋಟೆಲ್ ಕ್ಷೇತ್ರದ ಪರವಾಗಿ ಈ ಬೇಡಿಕೆಗಳನ್ನು ಮರು ಪರಿಶೀಲಿಸಿ ಎಂದು ಅವರು ಕೋರಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಬೇಡಿಕೆಗಳು
- ಕರ್ನಾಟಕವು 300 ಕಿ.ಮೀ. ಕರಾವಳಿಯನ್ನು ಹೊಂದಿದೆ. ಕರ್ನಾಟಕ ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಹಣವನ್ನು ನಿಯೋಜಿಸಿ. ಇದು ಹೆಚ್ಚಿನ ಉದ್ಯೋಗಗಳನ್ನು ಮತ್ತು ಆದಾಯವನ್ನು ಸೃಷ್ಟಿಸುತ್ತದೆ.
- ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದು. ಅಲ್ಲದೆ, ಪ್ರಸ್ತುತ ಒಂದೇ ಟ್ರ್ಯಾಕ್ ಇರುವುದರಿಂದ ದೀರ್ಘಾವಧಿಯ ಬೇಡಿಕೆ ಮುಂದುವರಿಸಲು ಟ್ರ್ಯಾಕ್ ದ್ವಿಗುಣಗೊಳಿಸುವ ಅಗತ್ಯವಿದೆ.
- ಮಂಗಳೂರು ಮತ್ತು ಕಾರವಾರದ ನಡುವೆ ದೇಶೀಯ ವಿಮಾನ ನಿಲ್ದಾಣ ನಿರ್ಮಾಣದ ಅಗತ್ಯವಿದೆ.
- ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷದಿಂದ 9 ಲಕ್ಷ ರೂಪಾಯಿ ಸ್ಲ್ಯಾಬ್‌ಗೆ ಏರಿಸಿ.
- ವಾಣಿಜ್ಯ ಬಳಕೆ ಅಡುಗೆ ಅನಿಲದ ಮೇಲಿನ ಜಿಎಸ್‌ಟಿ ಶೇ. 5ರ ವರೆಗೆ ಇಳಿಸಿ.
- ಒಂದು ಸಾವಿರ ರೂಪಾಯಿವರೆಗಿನ ಹೋಟೆಲ್ ಕೊಠಡಿ ಬಾಡಿಗೆಯ ಜಿಎಸ್‌ಟಿ ಶೇ.5ಕ್ಕೆ ಇಳಿಸಿ.
ಇದೂ ಓದಿ: ವಿತ್ತ ಸಚಿವೆ ಜೊತೆ ಹೋಟೆಲೋದ್ಯಮಿಗಳ ಸಂವಾದ; ಗಮನ ಸೆಳೆದ ಸಂಗತಿ ಇದು…
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಇದೂ ಓದಿ: ಹೋಟೆಲ್ ಓನರ್ ಪಾದಕ್ಕೆರಗಿ ಆಶೀರ್ವಾದ ಪಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್