ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೋಟೆಲಿಗರ ಸಂಘಟಿತ ಶಕ್ತಿಯಾದ ‘ಬೆಂಗಳೂರು ಹೋಟೆಲುಗಳ ಸಂಘ(ರಿ.)ʼ ಫುಡ್ ಡೆಲಿವರಿ ಸುಗಮವಾಗಿಸುವ ನಿಟ್ಟಿನಲ್ಲಿ ಬುಧವಾರ ಮಹತ್ವದ ಮಾತುಕತೆಯೊಂದನ್ನು ನಡೆಸಿದೆ. ಪರಿಣಾಮವಾಗಿ ಹೋಟೆಲ್ಗಳ ಫುಡ್ ಡೆಲಿವರಿ ನಿಟ್ಟಿನಲ್ಲಿ ಸದ್ಯದಲ್ಲೇ ಪ್ರಮುಖ ತೀರ್ಮಾನವೊಂದು ಹೊರಬೀಳುವ ಸಾಧ್ಯತೆ ಕಂಡುಬಂದಿದೆ.
ಕೇಂದ್ರ ಸರ್ಕಾರದ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ಡಿಸಿ) ಸಹಭಾಗಿತ್ವದಲ್ಲಿ ಫುಡ್ ಡೆಲಿವರಿ ಪ್ರಾರಂಭಿಸಿರುವ ಓಲಾ, ಗ್ರೋಥ್ ಫಾಲ್ಕನ್ ಹಾಗೂ ಮ್ಯಾಜಿಕ್ ಪಿನ್ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ನಡೆದ ವಿಶೇಷ ಸಭೆಯಲ್ಲಿ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡು ಸಮಾಲೋಚನೆ ನಡೆಸಿದ್ದಾರೆ.
ಗ್ರೋಥ್ ಫಾಲ್ಕನ್ನವರು ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯರಿಗೆ ವಿಶೇಷ ರಿಯಾಯಿತಿ ಸೇವೆ ಕೊಡುವುದಾಗಿ ಆಶ್ವಾಸನೆ ಕೊಟ್ಟಿರುತ್ತಾರೆ. ಈ ಸಂಬಂಧ ಸಮಂಜಸವಾದ ಒಡಂಬಡಿಕೆ ಮಾಡಿಕೊಂಡ ಬಳಿಕ ಎಲ್ಲ ಸದಸ್ಯರು ಫುಡ್ ಡೆಲಿವರಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇನ್ನು ಕೆಲವು ದಿನಗಳಲ್ಲಿ ಈ ವಿಚಾರವಾಗಿ ಹೆಚ್ಚಿನ ಚರ್ಚೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂಬುದಾಗಿ ಬೆಂಗಳೂರು ಹೋಟೆಲುಗಳ ಸಂಘದವರು ತಿಳಿಸಿದ್ದಾರೆ.
ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ, ಉಪಾಧ್ಯಕ್ಷ ಶಕೀರ್ ಹಕ್, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್, ʼವಿದ್ಯಾರ್ಥಿ ಭವನʼದ ಅರುಣ್ ಅಡಿಗ ಮುಂತಾದವರು ಈ ಸಮಾಲೋಚನೆಯಲ್ಲಿ ಉಪಸ್ಥಿತರಿದ್ದರು.
ಇದೂ ಓದಿ: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರಿಗೆ ಬಿಎಚ್‌ಎ ಅಭಿನಂದನೆ
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಇದೂ ಓದಿ: ಅರಮನೆ ಮೈದಾನದಲ್ಲಿ ನಡೆಯುವ ಕುಂದಾಪ್ರ ಕನ್ನಡ ಹಬ್ಬದಲ್ಲಿದೆ ಹೋಟೆಲಿಗರಿಗೆ ಈ ಸುವರ್ಣಾವಕಾಶ!