ಬೆಂಗಳೂರು: ಜನಪ್ರಿಯ ಹಾಗೂ ಪ್ರಸಿದ್ಧ ಹೋಟೆಲ್‌ಗಳಿಗೆ ಆಗಾಗ ಗಣ್ಯಾತಿಗಣ್ಯ ವ್ಯಕ್ತಿಗಳು ಭೇಟಿ ನೀಡುವುದು, ಅಲ್ಲಿನ ತಿಂಡಿ-ತಿನಿಸುಗಳನ್ನು ಸವಿಯುವುದು ನಡೆಯುತ್ತಿರುತ್ತದೆ. ಇದೀಗ ಇಸ್ರೋ ಮಾಜಿ ಅಧ್ಯಕ್ಷರ ಭೇಟಿಗೆ ಶತಕದ ಹೊಸ್ತಿಲಲ್ಲಿರುವ ಸುಪ್ರಸಿದ್ಧ ಹೋಟೆಲ್ ಸಾಕ್ಷಿಯಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ, ಕನ್ನಡಿಗ, ಪದ್ಮಶ್ರೀ ಪುರಸ್ಕೃತ ಡಾ.ಎ.ಎಸ್. ಕಿರಣ್ ಕುಮಾರ್ ಅವರು ಬೆಂಗಳೂರಿನ ʼಉಡುಪಿ ಶ್ರೀಕೃಷ್ಣ ಭವನʼಕ್ಕೆ ಆಗಸ್ಟ್ 4ರ ಭಾನುವಾರ ಭೇಟಿ ನೀಡಿ, ಉಪಾಹಾರ ಸೇವಿಸಿದ್ದಾರೆ.
ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕರು, ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರೂ ಆಗಿರುವ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಅವರು ಕಿರಣ್ ಕುಮಾರ್ ಅವರನ್ನು ಭೇಟಿ ಆಗಿರುತ್ತಾರೆ. ಈ ವೇಳೆ ಹೊಳ್ಳ ಅವರ ಪತ್ನಿ ಕೂಡ ಹಾಜರಿದ್ದರು. ಹಾಸನ ಜಿಲ್ಲೆಯ ಆಲೂರಿನವರಾದ ಕಿರಣ್ ಕುಮಾರ್ ಅವರು 2015ರಿಂದ 2018ರ ವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ʼಉಡುಪಿ ಶ್ರೀಕೃಷ್ಣ ಭವನʼವು 1926ರಲ್ಲಿ ಸ್ಥಾಪನೆಯಾಗಿದ್ದು, ಇನ್ನು ಎರಡು ವರ್ಷ ಪೂರ್ಣಗೊಂಡರೆ ಶತಮಾನೋತ್ಸವ ಸಂಭ್ರಮಕ್ಕೆ ಪಾತ್ರವಾಗಲಿದೆ. ಕಳೆದ 9 ದಶಕಗಳಿಂದಲೂ ಉಡುಪಿ ಶ್ರೀಕೃಷ್ಣ ಭವನವು ಆಹಾರಪ್ರಿಯರ ನೆಚ್ಚಿನ ತಾಣವಾಗಿ ಮೆಚ್ಚುಗೆಗೆ ಪಾತ್ರವಾಗುತ್ತಲೇ ಬಂದಿದೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!