ಒಳಗೇನಿದೆ!?

ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಬೃಹತ್‌ ಉದ್ಯೋಗಾವಕಾಶ; ನಾಳೆಯೇ ಸಂದರ್ಶನ..

ಗೋವಿಂದ ಬಾಬು ಪೂಜಾರಿ

ಬೆಂಗಳೂರು: ಸಮಾಜ ಸೇವಕ, ಹೋಟೆಲೋದ್ಯಮಿ ಗೋವಿಂದ ಬಾಬು ಪೂಜಾರಿ ಅವರು ತಮ್ಮ ಉದ್ಯಮದಲ್ಲೀಗ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇರಿಸಿದ್ದು, ಸ್ವ-ಉದ್ಯೋಗಿ ಆಗಬೇಕು ಎಂದು ಬಯಸುವವರಿಗೆ ಸುವರ್ಣಾವಕಾಶ ಒದಗಿಸಲು ಮುಂದಾಗಿದ್ದಾರೆ.

ಸ್ವಂತ ಉದ್ಯಮ ನಡೆಸಬೇಕು ಎನ್ನುವವರಿಗೆ ತಮ್ಮ ಶೆಫ್‌ಟಾಕ್‌ ಫುಡ್‌ & ಹಾಸ್ಪಿಟಾಲಿಟಿ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್ ಮೂಲಕ ಏಳು ವಿಭಾಗಗಳಲ್ಲಿ ಉದ್ಯೋಗಾವಕಾಶ ನೀಡಲು ಮುಂದಾಗಿರುವ ಅವರು, ಇದೇ ಸೆಪ್ಟೆಂಬರ್‌ 4ರ ಬುಧವಾರ ಬೆಂಗಳೂರಿನಲ್ಲಿ ಸುದೀರ್ಘ ಸಂದರ್ಶನ ನಡೆಸಲಿದ್ದಾರೆ.

ಬೇಕರಿ, ಜ್ಯೂಸ್‌ ಕೌಂಟರ್‌, ಟಕ್‌ ಶಾಪ್‌, ಸ್ಯಾಂಡ್‌ವಿಚ್‌ ಸ್ಟೇಷನ್, ಎಂಆರ್‌ಪಿ ಔಟ್‌ಲೆಟ್‌, ದೋಸೆ ಕೌಂಟರ್‌, ಹೆಲ್ತ್‌ ಫುಡ್‌ ಕೌಂಟರ್‌ ವಿಭಾಗಗಳಲ್ಲಿ ಸ್ವಂತ ಉದ್ಯಮಕ್ಕೆ ಅವಕಾಶ ಮಾಡಿಕೊಡುತ್ತಿರುವುದಾಗಿ ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ಮುಂಬೈ, ಪೂನಾಗಳಲ್ಲೂ ಸ್ವಂತ ಉದ್ಯಮಕ್ಕೆ ಅವಕಾಶ ಕಲ್ಪಿಸಿಕೊಡಲಿರುವ ಅವರು, ಹೊಸಬರು ಹಾಗೂ ಅನುಭವಿಗಳಿಗೂ ವಿವಿಧ ಉದ್ಯೋಗ-ಉದ್ಯಮ ಅವಕಾಶ ಇರುವುದಾಗಿ ತಿಳಿಸಿದ್ದಾರೆ.

ಆಸಕ್ತರು ತಮ್ಮ ಸ್ವವಿವರ ಕಳುಹಿಸಬೇಕಾದ ಇ-ಮೇಲ್‌ ಐಡಿ: hohr1@cheftalk.co.in

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್‌ಫೋನ್‌ ಸಂಖ್ಯೆ: 6366908224, 7795676896

ಸಂದರ್ಶನ ನಡೆಯುವ ಸ್ಥಳ: ಶೆಫ್‌ಟಾಕ್‌ ಫುಡ್‌ & ಹಾಸ್ಪಿಟಾಲಿಟಿ ಸರ್ವಿಸಸ್‌ ಪ್ರೈ.ಲಿ. ಕಚೇರಿ, ನಂ. 1-2, 4ನೇ ವಾರ್ಡ್‌,18ನೇ ಅಡ್ಡರಸ್ತೆ, ಮುನಿರೆಡ್ಡಿ ಬಡಾವಣೆ, ಮಂಗಮ್ಮನಪಾಳ್ಯ, ಬೆಂಗಳೂರು-68

ಇದೂ ಓದಿ: ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ: ಸಚಿವರ ಭರವಸೆ

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ