ಬೆಂಗಳೂರು: ಫಾಸ್ಟ್‌ಫುಡ್ ತಯಾರಿ ಕಲಿತುಕೊಳ್ಳಬೇಕು ಎಂಬ ಆಸಕ್ತಿ ಇರುವವರಿಗೆಂದೇ ಪ್ರತಿಷ್ಠಿತ ಸಂಸ್ಥೆಗಳೆರಡು ಜೊತೆಯಾಗಿ ತರಬೇತಿ ನೀಡಲು ಸಜ್ಜಾಗಿವೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ʼರುಡ್‌ಸೆಟ್ʼ ಸಂಸ್ಥೆ ಈ ತರಬೇತಿಯನ್ನು ನೀಡಲಿದೆ.
ಫಾಸ್ಟ್‌ಫುಡ್ ತಯಾರಿಕೆ ಕುರಿತ 10 ದಿನಗಳ ತರಬೇತಿಯನ್ನು ಉಚಿತವಾಗಿಯೇ ನೀಡಲಿದ್ದು, ಅದಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯವರು ಅರ್ಜಿ ಸಲ್ಲಿಸಬಹುದು.
ಹದಿನೆಂಟರಿಂದ 45ರ ವಯೋಮಾನದ ನಿರುದ್ಯೋಗಿ ಯುವಕ-ಯುವತಿಯರು ಸೆಪ್ಟೆಂಬರ್ 13ರ ಒಳಗೆ ತಲುಪುವಂತೆ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 93801 62042 ಅಥವಾ 97409 82585 ಸಂಖ್ಯೆಗಳಿಗೆ ಕರೆ ಮಾಡಬಹುದು.
ಇದೂ ಓದಿ: ವರ್ಷದ ಹಿಂದೆ ಇಬ್ಬರು ನೀಡಿದ್ದ ದೂರು, 15 ಹೋಟೆಲ್‌ಗಳಿಗೆ ಈಗ ಮುಚ್ಚಬೇಕಾದ ಪರಿಸ್ಥಿತಿ!
ಇದೂ ಓದಿ: ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ: ಸಚಿವರ ಭರವಸೆ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!