ಒಳಗೇನಿದೆ!?

ಹಾಲು ಮಾತ್ರವಲ್ಲ, ಆಲ್ಕೋಹಾಲು ದರವೂ ಏರಿಕೆ?; ಯಾವುದು, ಎಂದಿನಿಂದ, ಎಷ್ಟು ಹೆಚ್ಚಳ?‌

ಬೆಂಗಳೂರು: ಹಾಲಿನ ದರ ಏರಿಕೆ ದೃಢಪಡಿಸಿರುವ ಸರ್ಕಾರ ಸದ್ಯದಲ್ಲೇ ಆಲ್ಕೋಹಾಲು ದರವನ್ನೂ ಏರಿಸಲಿದೆ ಎನ್ನುವುದು ಕೂಡ ಬಹುತೇಕ ಖಚಿತವಾಗಿದೆ. ಅಂದರೆ, ಬಿಯರ್‌ ದರ ಶೀಘ್ರವೇ ಏರಿಕೆ ಆಗುವ ಸಾಧ್ಯತೆ ಇದೆ.

ಈ ಸಂಬಂಧ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಅನುಮೋದನೆ ಸಿಕ್ಕರೆ ಅಕ್ಟೋಬರ್‌ 1ರಿಂದಲೇ ಹೊಸ ದರ ಜಾರಿಗೆ ಬರುವ ಸಾಧ್ಯತೆಯೂ ಇದೆ. ಆಗ ರಾಜ್ಯದಲ್ಲಿ ಪ್ರತಿ ಬಾಟಲ್ ಬಿಯರ್‌ ಮೇಲೆ ಸರಾಸರಿ 10 ರೂ. ಹೆಚ್ಚಳವಾಗಲಿದೆ.

ರಾಜ್ಯದಲ್ಲಿ 3,988 ವೈನ್‌ಶಾಪ್ (ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್‌ಎ), 2,382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7), 68 ಮಿಲಿಟರಿ ಕ್ಯಾಂಟೀನ್ ಮಳಿಗೆ (ಸಿಎಲ್‌8), ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 3,634 ಎಂಎಸ್‌ಐಎಲ್‌ (ಸಿಎಲ್11ಸಿ) ಮತ್ತು 745 ಆರ್‌ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ.

ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 65-70 ಕೋಟಿ ರೂ. ಅಬಕಾರಿ ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ. ಆದಾಯ ಹೆಚ್ಚಿಸುವ ಸಲುವಾಗಿ ಪ್ರೀಮಿಯಂ ಮದ್ಯದ ದರ ಇಳಿಸಿ, ಬಿಯರ್‌‌ ದರ ಹೆಚ್ಚಿಸಿ ಸರ್ಕಾರ ಆಗಸ್ಟ್‌ 26ರಂದು ಅಧಿಸೂಚನೆ ಹೊರಡಿಸಿತ್ತು.

ಆದರೆ, ಬಿಯರ್ ದರ ಹೆಚ್ಚಳ ಸಂಬಂಧ ಅಂತಿಮ ಅಧಿಸೂಚನೆ ಇನ್ನೂ ಹೊರಬಂದಿಲ್ಲ. ವಾರದೊಳಗೆ ಹೊರಬರಲಿದ್ದು, ಅದರನ್ವಯ ಬಿಯರ್ ದರ ಹೆಚ್ಚಳವಾಗಲಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಲೆ ಏರಿಕೆಯಲ್ಲೂ ಹ್ಯಾಟ್ರಿಕ್

ಐದು ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಸತತ ಮೂರನೇ ಬಾರಿ ಬಿಯರ್ ದರ ಹೆಚ್ಚಿಸಿದೆ. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಶುಂಕ ಹೆಚ್ಚಿಸಿದ್ದರು.

ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಹೆಚ್ಚವರಿ ಅಬಕಾರಿ ಸುಂಕವನ್ನು ಶೇ.10 ಹೆಚ್ಚಿಸಲಾಗಿತ್ತು. ಇದೀಗ ಬಾಟಲ್ ಮೇಲೆ ಸರಾಸರಿ 10 ರೂ. ಹೆಚ್ಚಳವಾಗಲಿದೆ.

ಇದೂ ಓದಿ: ಹೋಟೆಲ್‌ ಮಾಲೀಕರ ಕುರಿತ ವಿಡಿಯೋ ವೈರಲ್‌, ಮಾಜಿ ಐಪಿಎಸ್‌ ಅಧಿಕಾರಿಯಿಂದ ಕ್ಷಮೆ ಯಾಚನೆ

ಇದೂ ಓದಿ: ಹಾಲಿನ ದರ ಶೀಘ್ರದಲ್ಲೇ ಏರಿಕೆ ಖಚಿತ; ಎಷ್ಟು ಹೆಚ್ಚಳ, ದರ ಏರಿಕೆಯಿಂದ ಯಾರಿಗೆ ಲಾಭ?

ಇದೂ ಓದಿ:ವಿದ್ಯುತ್‌ ಸಂಪರ್ಕ ನಾಳೆಯಿಂದಲೇ ಕಡಿತ; ಯಾರಿಗೆಲ್ಲ ಅನ್ವಯ? ಇಲ್ಲಿದೆ ವಿವರ…

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ