ಒಳಗೇನಿದೆ!?

ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ಇಳಿಸಲು ನೂರಾರು ಆಹಾರೋದ್ಯಮಿಗಳ ಮನವಿ

ಸಚಿವರಾದ ಪಿಯೂಷ್‌ ಗೋಯಲ್‌, ಚಿರಾಗ್‌ ಪಾಸ್ವಾನ್.

ನವದೆಹಲಿ: ದೆಹಲಿಯಲ್ಲಿ ಸೆ.20ರಿಂದ ನಡೆಯುತ್ತಿರುವ ಮೂರು ದಿನಗಳ ವಿಶ್ವ ಆಹಾರ ಭಾರತ-2024 ಕಾರ್ಯಕ್ರಮದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರದ ಪ್ರಚಾರಾರ್ಥವಾಗಿ ಆಹಾರ ಉದ್ಯಮಗಳ ನೂರಕ್ಕೂ ಅಧಿಕ ಪ್ರತಿನಿಧಿಗಳ ಜೊತೆ ಕೇಂದ್ರ ಸರ್ಕಾರ ಗುರುವಾರ ಮಹತ್ವದ ಸಭೆ ನಡೆಸಿತು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್‌ ಪಾಸ್ವಾನ್‌ ಅವರ ಜಂಟಿ ಅಧ್ಯಕ್ಷತೆಯಲ್ಲಿ ಈ ಉನ್ನತ ಮಟ್ಟದ ಸಿಇಒ ದುಂಡುಮೇಜಿನ ಸಭೆ ನಡೆಯಿತು.

ಆಹಾರ ಸಂಸ್ಕರಣೆ ಕುರಿತ ತಪ್ಪು ಅಭಿಪ್ರಾಯಗಳು, ಆಹಾರ ಉದ್ಯಮ ಕುರಿತ ಜಿಎಸ್‌ಟಿ ಹಾಗೂ ಇತರ ಹಲವು ವಿಚಾರಗಳಲ್ಲಿ ಉದ್ಯಮದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು.

ಸಚಿವರಾದ ಪಿಯೂಷ್‌ ಗೋಯಲ್‌, ಚಿರಾಗ್‌ ಪಾಸ್ವಾನ್‌ ಜಂಟಿ ಅಧ್ಯಕ್ಷತೆಯ ಸಭೆಯಲ್ಲಿ ಭಾಗವಹಿಸಿದ್ದ ಆಹಾರೋದ್ಯಮಿಗಳು.

ಸಭೆಯಲ್ಲಿ ಭಾಗವಹಿಸಿದ್ದ ಆಹಾರೋದ್ಯಮದ ನೂರಾರು ಪ್ರತಿನಿಧಿಗಳು ಆಹಾರ ಉದ್ಯಮದಲ್ಲಿನ ಜಿಎಸ್‌ಟಿ ಕುರಿತ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರಮುಖವಾಗಿ ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ಇಳಿಸುವಂತೆ ಆಹಾರೋದ್ಯಮಿಗಳು ಮನವಿ ಮಾಡಿಕೊಂಡರು.

ಆಹಾರ ಉದ್ಯಮದ ಪ್ರತಿನಿಧಿಗಳು ತಮ್ಮ ಸಮಸ್ಯೆ-ಸಲಹೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಅನುಕೂಲ ಆಗಲಿ ಎಂದೇ ಈ ವೇದಿಕೆ ಒದಗಿಸಲಾಗಿದೆ ಎಂದು ಸಭೆ ಕುರಿತು ಚಿರಾಗ್‌ ಪಾಸ್ವಾನ್‌ ಹೇಳಿದರು.

ಜಿಎಸ್‌ಟಿ ದರಕ್ಕೆ ಸಂಬಂಧಿಸಿ ಹಲವು ಅಹವಾಲುಗಳಿದ್ದು ನಮ್ಮ ಸಚಿವಾಲಯವು ಈ ವಿಷಯವನ್ನು ಜಿಎಸ್‌ಟಿ ಕೌನ್ಸಿಲ್‌ ಗಮನಕ್ಕೆ ತರಲಿದ್ದು, ಅಂತಿಮ ನಿರ್ಧಾರವನ್ನು ಕೌನ್ಸಿಲ್‌ ತಳೆಯಲಿದೆ ಎಂದು ಪಾಸ್ವಾನ್‌ ಭರವಸೆ ನೀಡಿದರು.‌

ಇದೂ ಓದಿ: ನಾಳೆಯಿಂದ ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆ; 70ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಭಾಗಿ

ಇದೂ ಓದಿ: ಹೋಟೆಲ್‌ ಮಾಲೀಕರ ಕುರಿತ ವಿಡಿಯೋ ವೈರಲ್‌, ಮಾಜಿ ಐಪಿಎಸ್‌ ಅಧಿಕಾರಿಯಿಂದ ಕ್ಷಮೆ ಯಾಚನೆ

ಇದೂ ಓದಿ: ಒಂದು ಕಪ್‌ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ