ಬೆಂಗಳೂರು: ಹೋಟೆಲ್ ಉದ್ಯಮವನ್ನು ಬಹಳಷ್ಟು ವರ್ಷಗಳಿಂದ ಕಾಡುತ್ತಿರುವ ಚಿಲ್ಲರೆ ಕೊರತೆ ಸಮಸ್ಯೆಯಿಂದ ಹೋಟೆಲಿಗರಿಗೆ ಸದ್ಯದಲ್ಲೇ ಒಂದಷ್ಟು ನಿರಾಳತೆ ಸಿಗುವ ಸಾಧ್ಯತೆ ಗೋಚರಿಸಿದೆ.
ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ)ದ ಪದಾಧಿಕಾರಿಗಳು ಹಾಗೂ ಕರ್ಣಾಟಕ ಬ್ಯಾಂಕ್ ಕರೆನ್ಸಿ ಚೆಸ್ಟ್ ಮ್ಯಾನೇಜರ್ ಜೊತೆ ಮಂಗಳವಾರ ನಡೆದ ಮಹತ್ವದ ಮಾತುಕತೆ ಬಳಿಕ ಈ ಆಶಾಭಾವನೆ ಹೊರಹೊಮ್ಮಿದೆ.
ಹೊಟೇಲುಗಳ ಮಾಲೀಕರಿಗೆ ಚಿಲ್ಲರೆ ವಿತರಿಸುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯ ಮೇರೆಗೆ ಸಂಘದ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಲಾಯಿತು.
ʼಭಾರತೀಯ ರಿಸರ್ವ್ ಬ್ಯಾಂಕ್ ಸಹಕಾರ ಲಭಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿವಿಧ ಶಾಖೆಗಳಲ್ಲಿ ಚಿಲ್ಲರೆ ವಿತರಣೆ ಮಾಡುವ ಪ್ರಯತ್ನ ಮಾಡುತ್ತೇವೆʼ ಎಂದು ಕರ್ಣಾಟಕ ಬ್ಯಾಂಕ್ ಆಶ್ವಾಸನೆ ನೀಡಿದೆ. ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ಹೋಟೆಲಿಗರಿಗೆ ಚಿಲ್ಲರೆ ಕೊರತೆ ಸಮಸ್ಯೆಯ ತೀವ್ರತೆ ತಗ್ಗಲಿದೆ ಎಂದು ಬಿಎಚ್‌ಎ ತಿಳಿಸಿದೆ.
ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಉಪಾಧ್ಯಕ್ಷ ಶಂಕರ್ ಕುಂದರ್, ಜಂಟಿ ಕಾರ್ಯದರ್ಶಿಗಳಾದ ಬಿ.ಎಂ. ಧನಂಜಯ, ಕೃಷ್ಣರಾಜ್, ಹಿರಿಯ ಹೋಟೆಲೋದ್ಯಮಿಗಳಾದ ರಾಧಾಕೃಷ್ಣ ಅಡಿಗ, ಅರುಣ್ ಅಡಿಗ ಅವರು ಈ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.
ಇದೂ ಓದಿ: ಸ್ವಿಗ್ಗಿ-ಜೊಮ್ಯಾಟೊ ಇತ್ಯಾದಿಗಳಲ್ಲಿ ಮಾಡುವ ಫುಡ್ ಆರ್ಡರ್‌ಗಳಿಂದ ಒಂದು ವರ್ಷಕ್ಕಾಗುವ ಹೆಚ್ಚುವರಿ ಖರ್ಚೆಷ್ಟು?
ಇದೂ ಓದಿ: ಪೆಟ್ರೋಲ್- ಡೀಸೆಲ್ ದರ ಇಳಿಕೆಗೆ ಬೆಂಗಳೂರು ಹೋಟೆಲುಗಳ ಸಂಘದ ಆಗ್ರಹ
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ