ಬೆಂಗಳೂರು: ಎಲ್ಲಿಯೋ ಇರುವ ಹೋಟೆಲ್‌ಗಳನ್ನು ಮಾಲೀಕರು ಎಲ್ಲಿಯೋ ಕುಳಿತುಕೊಂಡು ನಿರ್ವಹಿಸುವುದು, ನಿಗಾ ವಹಿಸುವುದು ಹಳೇ ಸಂಗತಿ. ಆದರೆ, ಇಲ್ಲೊಂದು ಹೋಟೆಲ್‌ನಲ್ಲಿ ರಿಸೆಪ್ಷನಿಸ್ಟ್ ಕೂಡ ಅದೇ ರೀತಿ ಎಲ್ಲಿಂದಲೋ ಕೆಲಸ ಮಾಡುತ್ತಿರುವುದು ಸದ್ಯಕ್ಕೆ ಹೊಸ ವಿಚಾರ.
ಈ ಹೋಟೆಲ್ ಇರುವುದು ಬೆಂಗಳೂರಿನಲ್ಲಾದರೂ ಇದರ ರಿಸೆಪ್ಷನಿಸ್ಟ್ ಅದೆಲ್ಲೋ ಕುಳಿತು ಕೆಲಸ ಮಾಡುತ್ತಿದ್ದಾರೆ. ಇಂಥ ಅಪರೂಪದ ವಿಷಯವೊಂದನ್ನು ʼಎನ್‌ಟೂರೇಜ್ʼ ಕಂಪನಿಯ ಸಿಇಒ ಅನನ್ಯ ನಾರಂಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ʼಚೆಕ್‌ಇನ್ ಆಗುತ್ತಿದ್ದಂತೆ ನನಗೆ ಗೊತ್ತಾಗಿದ್ದೇನೆಂದರೆ, ಈ ಹೋಟೆಲ್‌ನಲ್ಲಿ ಇಬ್ಬರು ಸೆಕ್ಯುರಿಟಿ ಗಾರ್ಡ್ ಹಾಗೂ ಒಂದಿಬ್ಬರು ಟೆಕ್ನಿನಿಷಿಯನ್ಸ್ ಬಿಟ್ಟರೆ ಬೇರೆ ಸಿಬ್ಬಂದಿ ಇಲ್ಲ. ಎಲ್ಲವೂ ಪ್ರಧಾನ ಕಚೇರಿಯಲ್ಲಿ ಕುಳಿತ ನುರಿತ ಹಾಸ್ಪಿಟಾಲಿಟಿ ಸ್ಟಾಫ್‌ನಿಂದ ನಿರ್ವಹಿಸಲ್ಪಡುತ್ತಿದೆ. ಅವರು ಏಕಕಾಲಕ್ಕೆ ಹಲವು ಹೋಟೆಲ್‌ಗಳಿಗೆ ಹೀಗೆ ಕೆಲಸ ಮಾಡುತ್ತಿರುತ್ತಾರೆʼ ಎಂದು ಅನನ್ಯ ಈ ವರ್ಚುವಲ್ ರಿಸೆಪ್ಷನಿಸ್ಟ್ ಬಗ್ಗೆ ಹೇಳಿಕೊಂಡಿದ್ದಾರೆ.
ʼಒಲಿವ್ ಲಿವಿಂಗ್ʼನ ಹೋಟೆಲ್‌ನಲ್ಲಿ ಇಂಥದ್ದೊಂದು ವರ್ಚುವಲ್ ರಿಸೆಪ್ಷನಿಸ್ಟ್ ವ್ಯವಸ್ಥೆ ಮಾಡಲಾಗಿದ್ದು, ಅನನ್ಯ ಅಭಿಪ್ರಾಯಕ್ಕೆ ಒಲಿವ್ ಲಿವಿಂಗ್‌ನ ಸಹ-ಸಂಸ್ಥಾಪಕ ಕಹ್ರಾಮನ್ ಯಿಜಿಟ್ ಕೂಡ ಪ್ರತಿಕ್ರಿಯಿಸಿದ್ದಾರೆ.
ʼಒಲಿವ್ ಲಿವಿಂಗ್‌ನ ಅನುಭವವನ್ನು ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು ಅನನ್ಯ. ನಮ್ಮ ವರ್ಚುವಲ್ ರಿಸೆಪ್ಷನಿಸ್ಟ್ ಹಾಗೂ ರಿಮೋಟ್ ಮ್ಯಾನೇಜ್‌ಮೆಂಟ್ ನಿಮಗೆ ಎಂಥ ಅನುಭವ ನೀಡಿತು ನೋಡಲು ನಾವು ಸಂತೋಷಪಡುತ್ತೇವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇದನ್ನು ಅಳವಡಿಸಿಕೊಳ್ಳಲಾಯಿತು. ನಮ್ಮ ಹೈಟೆಕ್ ಹಾಗೂ ಹೈಟಚ್ ಸಣ್ಣ ಹೋಟೆಲ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆʼ ಎಂದು ಕಹ್ರಾಮನ್ ಹೇಳಿಕೊಂಡಿದ್ದಾರೆ.
ಇದೂ ಓದಿ: ಈ ಐಷಾರಾಮಿ ಹೋಟೆಲ್‌ನಲ್ಲಿ ಬೀದಿನಾಯಿಗಳಿಗೂ ಮುಕ್ತಪ್ರವೇಶ!; ಗಣ್ಯಾತಿಗಣ್ಯರ ಮಧ್ಯೆ ಬೀದಿನಾಯಿಗಳ ಓಡಾಟ!
ಇದೂ ಓದಿ: ತಾಜ್ ಹೋಟೆಲ್ ಉದ್ಯೋಗಿಗಳಿಗೆ ಸಾವಿನ ಬಳಿಕವೂ ಜೀವನಪರ್ಯಂತದ ಸಂಬಳ ನೀಡಿದ್ದ ರತನ್ ಟಾಟಾ!
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ