ಒಳಗೇನಿದೆ!?

ಇಂಡಿಯಾ ಸ್ವೀಟ್‌ ಹೌಸ್‌ನಲ್ಲಿ ವಿಇಎಂ ಎಲ್‌ಎಲ್‌ಪಿ ಹೂಡಿಕೆ; ಐಪಿಒ ಪ್ರವೇಶಕ್ಕೆ ಸಜ್ಜು

ಬೆಂಗಳೂರು: ಭಾರತೀಯ ಮಿಠಾಯಿ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವ ‘ಇಂಡಿಯಾ ಸ್ವೀಟ್‌ ಹೌಸ್‌’ನಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ‘ಇಂಡಿಯಾ ಸ್ವೀಟ್‌ ಹೌಸ್‌’ನಲ್ಲಿ ‘ವಿನಿ ಇಕ್ವಿಟಿ ಮಾರ್ಕೆಟ್‌ ಎಲ್‌ಎಲ್‌ಪಿ’ (Viney Equity Market LLP) ಹೂಡಿಕೆ ಮಾಡಿದ್ದು, ಈ ಮೂಲಕ ಇಂಡಿಯಾ ಸ್ವೀಟ್‌ ಹೌಸ್‌ ಸಂಸ್ಥೆಯೂ ಇನಿಷಿಯಲ್‌ ಪಬ್ಲಿಕ್‌ ಆಫರಿಂಗ್‌(ಐಪಿಒ) ಪ್ರವೇಶಕ್ಕೆ ಮುಂದಾಗಿದೆ. ಈ ಹೂಡಿಕೆ ಸುತ್ತಿನಲ್ಲಿ ಇಂಟೆಲಿಫಿನ್‌ ಪ್ರೈವೇಟ್‌ ಲಿಮಿಟೆಡ್‌ ಏಕೈಕ ಸಲಹೆಗಾರ ಆಗಿ ಕಾರ್ಯನಿರ್ವಹಿಸಿದೆ.

ಈ ಹೂಡಿಕೆಯು ಬ್ರ್ಯಾಂಡ್‌ನ ತ್ವರಿತ ವಿಸ್ತರಣೆ ಮತ್ತು ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳು ಮತ್ತು ತಿಂಡಿಗಳಿಗೆ ನವೀನ ವಿಧಾನದಲ್ಲಿ ಬಲವಾದ ಹೂಡಿಕೆದಾರರ ವಿಶ್ವಾಸವನ್ನು ಸೂಚಿಸುತ್ತದೆ. ಕಂಪನಿಯು ಈಗ ತನ್ನ ಐಪಿಒ ಪ್ರಾರಂಭಿಸಲು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ತನ್ನ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಸಲ್ಲಿಸಲು ತಯಾರಿ ನಡೆಸುತ್ತಿದೆ.

ಸ್ಟಾರ್ಟಪ್‌ಗಳಲ್ಲಿನ ಸಾಮಾನ್ಯ ಅಭ್ಯಾಸವಾದ ಸಾಹಸೋದ್ಯಮ ಬಂಡವಾಳ ಅಥವಾ ಖಾಸಗಿ ಹೂಡಿಕೆ ಪಡೆಯುವ ಬದಲು ಇಂಡಿಯಾ ಸ್ವೀಟ್ ಹೌಸ್‌ ಸಂಸ್ಥಾಪಕರು ಐಪಿಒ ಮಾರ್ಗ ಅನುಸರಿಸಿದ್ದಾರೆ. ಈ ಕಾರ್ಯತಂತ್ರದ ಕ್ರಮವು ಲಾಭದಾಯಕ ಉದ್ಯಮ ನಿರ್ಮಿಸುವಲ್ಲಿನ ಅವರ ದೀರ್ಘಕಾಲದ ದೃಷ್ಟಿಯನ್ನು ಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಮಹತ್ವದ ಬೆಳವಣಿಗೆ ಕುರಿತು ಇಂಡಿಯಾ ಸ್ವೀಟ್‌ ಹೌಸ್‌ ಸಹ-ಸಂಸ್ಥಾಪಕರಾದ ಶ್ವೇತಾ ರಾಜಶೇಖರ್‌, ವಿಶ್ವನಾಥ್‌ ಮೂರ್ತಿ ಮತ್ತು ರಾಜೇಶ್‌ ಮೆಹ್ತ ಅವರು ಉತ್ಸಾಹದ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ನಮ್ಮ ಬೆಳವಣಿಗೆಯ ಪ್ರಯಾಣದ ಮುಂದಿನ ಹಂತ ಪ್ರಾರಂಭಿಸುತ್ತಿರುವಾಗ ವಿನಿ ಇಕ್ವಿಟಿ ಮಾರ್ಕೆಟ್ ಎಲ್‌ಎಲ್‌ಪಿ ಮತ್ತು ಅವರ ತಂಡವನ್ನು ಸ್ವಾಗತಿಸಲು ರೋಮಾಂಚಿತರಾಗಿದ್ದೇವೆ. ನಮ್ಮ ಎಲ್ಲ ಕಾರ್ಯಗಳಲ್ಲೂ ಉತ್ತಮ ಗುಣಮಟ್ಟ ಹಾಗೂ ಸಂಪ್ರದಾಯ ಕಾಯ್ದುಕೊಳ್ಳಲು ನಾವು ಬದ್ಧರಾಗಿದ್ದೇವೆʼ ಎಂದು ತಿಳಿಸಿದರು.

ʼಇಂಡಿಯಾ ಸ್ವೀಟ್ ಹೌಸ್ ಐಕಾನಿಕ್ ಬ್ರ್ಯಾಂಡ್ ಆಗಿದೆ. ಈ ಹೂಡಿಕೆಯು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಪೋಷಿಸುವ ನಮ್ಮ ವಿಶಾಲ ಗುರಿಯೊಂದಿಗೆ ಹೊಂದಿಕೆ ಆಗುತ್ತದೆ. ಬ್ರ್ಯಾಂಡ್‌ನ ಬೆಳವಣಿಗೆಯ ನಿರೀಕ್ಷೆಗಳ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಮತ್ತು ಈ ಪ್ರಯಾಣದ ಭಾಗವಾಗಿರಲು ಹೆಮ್ಮೆಪಡುತ್ತೇವೆʼ ಎಂದು ವಿನಿ ಇಕ್ವಿಟಿ ಮಾರ್ಕೆಟ್ ಎಲ್‌ಎಲ್‌ಪಿ ವ್ಯವಸ್ಥಾಪಕ ಪಾಲುದಾರ ಅನಂತ್ ಅಗರ್‌ವಾಲ್ ತಿಳಿಸಿದ್ದಾರೆ.

ವಿನಿ ಇಕ್ವಿಟಿ ಮಾರ್ಕೆಟ್ ಎಲ್‌ಎಲ್‌ಪಿ ಮಧ್ಯ ಲಂಡನ್‌ನಲ್ಲಿ ಹಲವು ರೆಸ್ಟೋರೆಂಟ್‌ಗಳನ್ನು ಹೊಂದಿದೆ. ಅಲ್ಲದೆ ಬೆಳವಣಿಗೆ ಮತ್ತು ನಾವೀನ್ಯತೆಗೆ ಪೂರಕ ಕಾರ್ಯತಂತ್ರಾತ್ಮಕ ಬಂಡವಾಳ ಮತ್ತು ಬೆಂಬಲ ಒದಗಿಸುವ ಮೂಲಕ ಕಂಪನಿಗಳನ್ನು ಸಬಲೀಕರಣಗೊಳಿಸಲು ಅದು ಬದ್ಧವಾಗಿದೆ.

ಇದೂ ಓದಿ: ಬೆಂಗಳೂರಿನ ಟೀ ಸ್ಟಾಲ್ ಮಾಲೀಕರ ಪತ್ನಿ ಖಾತೆಗೆ ಜಮಾ ಆಯ್ತು 999 ಕೋಟಿ ರೂಪಾಯಿ!; ಪತಿಗೀಗ ಭಾರಿ ಫಜೀತಿ

ಇದೂ ಓದಿ: ತಾಜ್‌ ಹೋಟೆಲ್‌ ಉದ್ಯೋಗಿಗಳಿಗೆ ಸಾವಿನ ಬಳಿಕವೂ ಜೀವನಪರ್ಯಂತದ ಸಂಬಳ ನೀಡಿದ್ದ ರತನ್‌ ಟಾಟಾ!

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ