ಒಳಗೇನಿದೆ!?

ಚಹಾ ಸರ್ವ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವಿಗೀಡಾದ ಹೋಟೆಲ್ ಸಿಬ್ಬಂದಿ!

ಕೃತಕ ಬುದ್ಧಿಮತ್ತೆ ರಚಿತ ಸಾಂಕೇತಿಕ ಚಿತ್ರ

ಬೆಂಗಳೂರು: ಹೋಟೆಲ್ ಸಿಬ್ಬಂದಿಯೊಬ್ಬರು ಚಹಾ ಸರ್ವ್ ಮಾಡುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಸಾವಿಗೀಡಾದರು. ಉತ್ತರಪ್ರದೇಶ ಮೂಲದ ಅಮರೇಂದ್ರ ಕುಮಾರ್ (24) ಸಾವಿಗೀಡಾದವರು.

ಕೇಂದ್ರ ದೆಹಲಿಯ ಜೈಸಿಂಗ್ ರಸ್ತೆಯಲ್ಲಿನ ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ‘ಸ್ತ್ರೀ ಶಕ್ತಿ ಕ್ಯಾಂಟೀನ್’ನಲ್ಲಿ ಶುಕ್ರವಾರ ಈ ಪ್ರಕರಣ ನಡೆದಿದೆ. ಕುಮಾರ್ ಕಳೆದ ಸುಮಾರು ಎರಡು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದರು.

ಅವರು ಶುಕ್ರವಾರ ಮಧ್ಯಾಹ್ನ‌ 3 ಗಂಟೆ ಸುಮಾರಿಗೆ ಕಟ್ಟಡದ ನಾಲ್ಕನೇ ಮಹಡಿಯಲ್ಲಿನ‌ ರೂಮ್ ನಂ. 429ರಲ್ಲಿ ಚಹಾ ನೀಡುತ್ತಿದ್ದಾಗ ಅಸ್ವಸ್ಥಗೊಂಡು ಕುಸಿದುಬಿದ್ದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಹತ್ತಿರದ ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಸಾವು ಸಂಭವಿಸಿತ್ತು ಎಂದು ವೈದ್ಯರು ಖಚಿತಪಡಿಸಿದರು ಎಂಬುದಾಗಿ ಕ್ಯಾಂಟೀನ್ ಮ್ಯಾನೇಜರ್ ಮನೋಜ್ ತಿಳಿಸಿದ್ದಾರೆ.

ಕುಮಾರ್‌ಗೆ ಈ ಮೊದಲು ಯಾವುದೇ ಅನಾರೋಗ್ಯ ಇರುವುದು ಕಂಡು ಬಂದಿರಲಿಲ್ಲ. ಹೀಗಾಗಿ ಈ ಘಟನೆ ಕ್ಯಾಂಟೀನ್‌ನ ಇತರ ಸಿಬ್ಬಂದಿಯನ್ನು ಆತಂಕಕ್ಕೀಡು ಮಾಡಿದೆ ಎಂದು ಮನೋಜ್ ಹೇಳಿದ್ದಾರೆ. 

ಕುಮಾರ್ ಹೃದಯಾಘಾತದಿಂದ ಸಾವಿಗೆ ಈಡಾಗಿರಬಹುದು ಎನ್ನಲಾಗಿದೆ. ಅದಾಗ್ಯೂ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿನ ಕುರಿತು ಖಚಿತ ಮಾಹಿತಿ ಲಭಿಸಲಿದೆ. ಕುಮಾರ್‌ಗೆ ಊರಿನಲ್ಲಿ ಪತ್ನಿ ಮತ್ತು ಒಂದೂವರೆ ವರ್ಷದ ಪುತ್ರಿ ಇದ್ದು, ಕುಮಾರ್ ಕರ್ತವ್ಯದಲ್ಲಿದ್ದಾಗ ಸಾವಿಗೀಡಾದ್ದರಿಂದ ಅವರ ಕುಟುಂಬದ ಬಗ್ಗೆ ಕಾಳಜಿ ವಹಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದೂ ಓದಿ: ಒಂದು ಕಪ್‌ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!

ಇದೂ ಓದಿ: ಬೆಂಗಳೂರಿನ ಟೀ ಸ್ಟಾಲ್ ಮಾಲೀಕರ ಪತ್ನಿ ಖಾತೆಗೆ ಜಮಾ ಆಯ್ತು 999 ಕೋಟಿ ರೂಪಾಯಿ!; ಪತಿಗೀಗ ಭಾರಿ ಫಜೀತಿ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ