ಒಳಗೇನಿದೆ!?

ಬೆಂಗಳೂರು ಹೋಟೆಲುಗಳ ಸಂಘದಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ

ಬೆಂಗಳೂರು: ಕಾಫಿ ಬೆಲೆಯಲ್ಲಿ ಭಾರಿ ಹೆಚ್ಚಳ ಹಿನ್ನೆಲೆಯಲ್ಲಿ ಬೆಂಗಳೂರು ಹೋಟೆಲುಗಳ ಸಂಘವು ಕೇಂದ್ರ ಕಾಫಿ ಮಂಡಳಿ ಸದಸ್ಯರೂ ಆಗಿರುವ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಇತ್ತೀಚೆಗೆ ಕಾಫಿ ಪುಡಿ ಬೆಲೆ ನಿರಂತರವಾಗಿ ಏರಿಕೆ ಆಗುತ್ತಲೇ ಇದೆ. ಈ ವರ್ಷದಲ್ಲಿ ಎರಡು ಬಾರಿ ದರ ಹೆಚ್ಚಳ ಆಗಿರುತ್ತದೆ. ಈಗ ಕಾಫಿ ಮಂಡಳಿ ಸಂಘಟನೆ ಮತ್ತೊಮ್ಮೆ ಪ್ರತಿ ಕೆ.ಜಿ.ಗೆ 100ರಿಂದ 120 ರೂ. ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ ಎಂದು ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್ಎ)ದ ಗೌರವಾಧ್ಯಕ್ಷ ಪಿ.ಸಿ. ರಾವ್‌ ಅವರು ಸಂಸದರ ಗಮನಕ್ಕೆ ತಂದಿದ್ದಾರೆ.

ನಮ್ಮಲ್ಲಿ ಕಾಫಿ ಪ್ರಿಯರು ಹೆಚ್ಚಿರುವುದರಿಂದ ಕಾಫಿಪುಡಿ ಬೆಲೆಯಲ್ಲಿ ಏರಿಕೆಯಾದರೆ ಅದರಿಂದ ಜನಸಾಮಾನ್ಯರಿಗೆ, ಅದರಲ್ಲೂ ಹೋಟೆಲ್ ಉದ್ಯಮದವರಿಗೆ ಬಹುದೊಡ್ಡ ಹೊಡೆತ ಬೀಳಲಿದೆ. ಆದ್ದರಿಂದ ಕಾಫಿ ರಫ್ತು ಮಾಡುವುದನ್ನು ನಿಲ್ಲಿಸಿದರೆ ನಿರಂತರ ಬೆಲೆ ಏರಿಕೆಯನ್ನು ಹತೋಟಿಗೆ ತರಬಹುದು ಎಂಬ ಪರ್ಯಾಯ ಮಾರ್ಗವನ್ನೂ ರಾವ್‌ ಸೂಚಿಸಿದರು.

ತಾವು ದಯವಿಟ್ಟು ಇದರ ಕಡೆ ಗಮನ ಹರಿಸಿ ಕಾಫಿ ಬೆಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಬೆಂಗಳೂರು ಹೋಟೆಲುಗಳ ಸಂಘ ಮನವಿ ಮಾಡಿಕೊಂಡಿದೆ.

ಸಂಘದ ಜಂಟಿ ಕಾರ್ಯದರ್ಶಿ ಎಸ್‌.ಪಿ.ಕೃಷ್ಣರಾಜ್‌, ಬಿಜೆಪಿ ಹಾಲು ಉತ್ಪಾದಕರ ರಾಜ್ಯ ಪ್ರಕೋಷ್ಠದ ಸಂಚಾಲಕ, ಹೋಟೆಲ್‌ ಉದ್ಯಮಿಯೂ ಆಗಿರುವ ಬೇಳೂರು ರಾಘವೇಂದ್ರ ಶೆಟ್ಟಿ ಈ ವೇಳೆ ಉಪಸ್ಥಿತರಿದ್ದರು.

ಇದೂ ಓದಿ: ಸರ್ಕಾರ ಅಂದುಕೊಂಡಿದ್ದಕ್ಕಿಂತಲೂ ದೊಡ್ಡದಿದೆ ಹೋಟೆಲ್‌ ಕ್ಷೇತ್ರದ ಗಾತ್ರ-ಸಾಮರ್ಥ್ಯ: ಪ್ರದೀಪ್‌ ಶೆಟ್ಟಿ

ಇದೂ ಓದಿ: ಒಂದು ಕಪ್‌ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!

ಇದೂ ಓದಿ: ಬೆಂಗಳೂರಿಗೂ ಬಂತು ತಂಬುಳಿ: ʼತಂಬುಳಿ ಮನೆʼಗೆ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ಟರ ಮೆಚ್ಚುಗೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ