ಬೆಂಗಳೂರು: ದೇಶಾದ್ಯಂತ ಕೆಲವು ದಿನಗಳಿಂದ ನಿರಂತರವಾಗಿ ಬರುತ್ತಿರುವ ಬಾಂಬ್ ಬೆದರಿಕೆ ಸಂದೇಶಗಳು ಇದೀಗ ಹೋಟೆಲ್ ಕ್ಷೇತ್ರಕ್ಕೂ ವ್ಯಾಪಿಸಿವೆ. ಅದರಲ್ಲೂ ಒಂದೇ ದಿನ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ರವಾನೆ ಆಗಿದೆ.
‘ಆಂಧ್ರಪ್ರದೇಶದಲ್ಲಿನ ಮೂರು ಹೋಟೆಲ್‌ಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕಿಡಿಗೇಡಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು’ ಎಂದು ತಿರುಪತಿ ಪೂರ್ವ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸುಲು ತಿಳಿಸಿದ್ದಾರೆ.
ಭಾರತದ ವಿಮಾನಗಳನ್ನು ಗುರಿಯಾಗಿಸಿ ಕಳೆದ ಒಂದು ಹತ್ತು ದಿನಗಳಿಂದ ನಿರಂತರವಾಗಿ 200ಕ್ಕೂ ಅಧಿಕ ಬಾಂಬ್ ಬೆದರಿಕೆ ಸಂದೇಶಗಳು ರವಾನೆ ಆಗಿವೆ. ಇದು ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರು-ಸಾರ್ವಜನಿಕರನ್ನು ಆತಂಕಕ್ಕೆ ಒಡ್ಡಿದ್ದಲ್ಲದೆ, ದೇಶದ ಭದ್ರತಾ ವ್ಯವಸ್ಥೆಗಳಿಗೂ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಕಾನೂನು ತಿದ್ದುಪಡಿಗೂ ಚಿಂತನೆ ನಡೆಸಿದೆ.
ಮತ್ತೊಂದೆಡೆ ದೇಶದ ಕೆಲವೆಡೆ ಸಿಆರ್‌ಪಿಎಫ್ ಶಾಲೆಗಳಿಗೂ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ರವಾನೆಯಾಗಿದ್ದು, ಮಂಗಳವಾರ ದೆಹಲಿಯ ಸಿಆರ್‌ಪಿಎಫ್ ಶಾಲೆ ಬಳಿ ಸ್ಫೋಟ ಕೂಡ ಸಂಭವಿಸಿತ್ತು. (ಏಜೆನ್ಸೀಸ್)
ಇದೂ ಓದಿ: ‘ಹಳ್ಳಿಮನೆ’ ಹೋಟೆಲ್ ಬಳಿ 25 ವರ್ಷಗಳ ಹಿಂದೆ ನೆಟ್ಟಿದ್ದ ಗಿಡವೇ ಮರವಾಗಿ ರಕ್ಷಿಸಿತು!
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ