ಒಳಗೇನಿದೆ!?

ಫುಡ್‌ ವ್ಲಾಗರ್‌ಗೆ ತಿಂಡಿ ಕೊಡದೆ ದುಡ್ಡು ವಾಪಸ್‌ ಕೊಟ್ಟು ಕಳಿಸಿದ ಫುಡ್‌ ಸ್ಟಾಲ್‌ ಮಾಲೀಕ!; ಜನ ಏನಂದ್ರು?

ಸಾಂಕೇತಿಕ ಎಐ ಚಿತ್ರ.

ಬೆಂಗಳೂರು: ಫುಡ್‌ ವ್ಲಾಗರ್ಸ್‌ ಫುಡ್‌ ಸ್ಟಾಲ್‌ ಮತ್ತು ಹೋಟೆಲ್‌ಗಳು ಮುಂತಾದೆಡೆಗೆ ತೆರಳಿ ಆಹಾರ ಸವಿದು ತಮ್ಮ ಅಭಿಪ್ರಾಯ ಹೇಳುವುದು ಸಾಮಾನ್ಯ. ಅವರನ್ನು ಕೆಲವು ಹೋಟೆಲ್‌ಗಳ ಮಾಲೀಕರು ವಿಶೇಷವಾಗಿ ಉಪಚರಿಸಿ ಕಳಿಸುವುದೂ ಉಂಟು. ಆದರೆ ಇಲ್ಲೊಂದು ಕಡೆ ಫುಡ್‌ ವ್ಲಾಗರ್‌ ಒಬ್ಬರಿಗೆ ಫುಡ್‌ ಸ್ಟಾಲ್‌ ಮಾಲೀಕರು ತಿಂಡಿ ಕೊಡದೆ, ದುಡ್ಡು ವಾಪಸ್‌ ಕೊಟ್ಟು ಸಾಗಹಾಕಿದ ಪ್ರಕರಣವೊಂದು ನಡೆದಿದೆ.

ಫುಡ್‌ ಸ್ಟಾಲ್‌ವೊಂದಕ್ಕೆ ಬಂದ ವ್ಯಕ್ತಿ ಹಣಕೊಟ್ಟು ಸ್ಪ್ರಿಂಗ್‌ರೋಲ್‌ ಕೇಳಿದ್ದಾನೆ. ಆದರೆ ಕೆಲವೇ ಕ್ಷಣಗಳಲ್ಲಿ ಆತ ಫುಡ್‌ ವ್ಲಾಗರ್‌ ಎಂಬುದು ಗೊತ್ತಾಗಿ ಸ್ಟಾಲ್‌ ಮಾಲೀಕ ಆತನನ್ನು ಬಳಿಗೆ ಕರೆದು ಹಣ ವಾಪಸ್‌ ಕೊಟ್ಟಿದ್ದಾರೆ. ಅಲ್ಲದೆ, ತಿಂಡಿಯನ್ನು ಕೊಡಲು ನಿರಾಕರಿಸಿದ್ದಾರೆ.

ʼನೀವು ಇಲ್ಲಿ ನಮ್ಮ ಮುಂದೆ ಎಲ್ಲ ಚೆನ್ನಾಗಿದೆ ಎಂದು ಹೇಳುತ್ತೀರಿ, ಬಳಿಕ ನೆಗೆಟಿವ್‌ ರಿವ್ಯೂ ಅಪ್‌ಲೋಡ್‌ ಮಾಡುತ್ತೀರಿʼ ಎಂದ ಫುಡ್‌ಸ್ಟಾಲ್‌ ಮಾಲೀಕ ವ್ಲಾಗರ್‌ನನ್ನು ಸಾಗಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಆಗಿದ್ದು, ಜನರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕಮೆಂಟ್‌-ಪೋಸ್ಟ್‌ ಮಾಡುತ್ತಿದ್ದಾರೆ.

ಇದೂ ಓದಿ: ‘ಹಳ್ಳಿಮನೆ’ ಹೋಟೆಲ್ ಬಳಿ 25 ವರ್ಷಗಳ ಹಿಂದೆ ನೆಟ್ಟಿದ್ದ ಗಿಡವೇ ಮರವಾಗಿ ರಕ್ಷಿಸಿತು!

ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ