ಒಳಗೇನಿದೆ!?

ಪಾರ್ಕ್‌ ವ್ಯೂ ರೆಸ್ಟೋರೆಂಟ್‌ ಮೂರನೇ ಬ್ರ್ಯಾಂಚ್‌ ಉದ್ಘಾಟನೆ; ಕರಾವಳಿಗರ ಒಕ್ಕೂಟದ ಶುಭ ಹಾರೈಕೆ

ಬೆಂಗಳೂರು: ಪಾರ್ಕ್‌ ವ್ಯೂ ರೆಸ್ಟೋರೆಂಟ್‌ನ ಮೂರನೇ ಶಾಖೆ ರಾಜಧಾನಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ಮೆಟ್ರೋ ಸ್ಟೇಷನ್‌ ಪಕ್ಕದಲ್ಲಿ ನ. 4ರ ಸೋಮವಾರ ಉದ್ಘಾಟನೆಗೊಂಡಿದೆ.

ಬೆಂಗಳೂರಿನಲ್ಲಿರುವ ಕರಾವಳಿಗರ ಮುಂಚೂಣಿ ಸಂಘಟನೆಗಳಲ್ಲಿ ಒಂದಾಗಿರುವ ʼಕರಾವಳಿಗರ ಒಕ್ಕೂಟ (ರಿ.)ʼ ಉಪಾಧ್ಯಕ್ಷ ನರಸಿಂಹಮೂರ್ತಿ ಮಧ್ಯಸ್ಥ ಅವರ ಮಾಲೀಕತ್ವದ ಈ ಹೋಟೆಲ್ ಉದ್ಘಾಟನೆಗೆ ಕರಾವಳಿಗರ ಒಕ್ಕೂಟದ ಪದಾಧಿಕಾರಿಗಳು ತೆರಳಿ ಶುಭ ಹಾರೈಸಿದ್ದಾರೆ.

ಕರಾವಳಿಗರ ಒಕ್ಕೂಟ ಅಧ್ಯಕ್ಷ ಕೆ.ಸುಬ್ರಾಯ ಭಟ್, ಕಾರ್ಯಾಧ್ಯಕ್ಷ ಅನಂತ ಸದಾಶಿವ, ಕೋಶಾಧಿಕಾರಿ ರತ್ನಾಕರ್ ನಾಯಕ್, ಪ್ರಧಾನ ಕಾರ್ಯದರ್ಶಿ ಚರಣ್‌ ದೇವಾಡಿಗ ಬೈಂದೂರು ಮುಂತಾದವರು ಹೋಟೆಲ್‌ ಮಾಲೀಕರಾದ ನರಸಿಂಹಮೂರ್ತಿ ಮಧ್ಯಸ್ಥ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

ಪಾರ್ಕ್‌ ವ್ಯೂ ರೆಸ್ಟೋರೆಂಟ್‌ನ ಇನ್ನೆರಡು ಬ್ರ್ಯಾಂಚ್‌ಗಳು ಈಗಾಗಲೇ ಬೆಂಗಳೂರಿನ ಜೆ.ಪಿ.ನಗರದ ಮಿನಿ ಫಾರೆಸ್ಟ್‌  ಹಾಗೂ ಕನಕಪುರ ರಸ್ತೆಯ ರಘುವನಹಳ್ಳಿಯ ಕೆಎಸ್‌ಐಟಿ ಇಂಜಿನಿಯರಿಂಗ್‌ ಕಾಲೇಜು ಬಳಿ ಕಾರ್ಯಾಚರಿಸುತ್ತಿವೆ.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ: ಬೆಂಗಳೂರಿಗೂ ಬಂತು ತಂಬುಳಿ: ʼತಂಬುಳಿ ಮನೆʼಗೆ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ಟರ ಮೆಚ್ಚುಗೆ

ಇದೂ ಓದಿ: ಹೋಟೆಲ್‌ ಉದ್ಯಮಕ್ಕಿದೆ ನಮ್ಮ ಸಂಪೂರ್ಣ ಬೆಂಬಲ: ಕನ್ನಡಪ್ರಭ- ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ