ಒಳಗೇನಿದೆ!?

ಬೆಂಗಳೂರು ಹೋಟೆಲುಗಳ ಸಂಘಕ್ಕೆ ಮೂರೇ ತಿಂಗಳಲ್ಲಿ 30ಕ್ಕೂ ಹೆಚ್ಚು ಹೋಟೆಲ್‌ಗಳ ಸೇರ್ಪಡೆ

ಬೆಂಗಳೂರು: ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ) ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಮೂರೇ ತಿಂಗಳಲ್ಲಿ ಮೂವತ್ತಕ್ಕೂ ಹೆಚ್ಚು ಹೋಟೆಲ್‌ಗಳ ಮಾಲೀಕರು ಸದಸ್ಯತ್ವ ಪಡೆದುಕೊಂಡಿದ್ದಾರೆ.

ಕಳೆದ ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ 33 ಹೊಸ ಹೋಟೆಲ್‌ಗಳು ಸದಸ್ಯತ್ವ ಪಡೆದಿವೆ. ಜುಲೈನಲ್ಲಿ 4, ಆಗಸ್ಟ್‌ನಲ್ಲಿ 19 ಹಾಗೂ ಸೆಪ್ಟೆಂಬರ್‌ನಲ್ಲಿ 10 ಹೋಟೆಲ್‌ಗಳ ಮಾಲೀಕರು ಹೊಸದಾಗಿ ಸದಸ್ಯತ್ವ ನೋಂದಣಿ ಮಾಡಿಸಿಕೊಂಡಿದ್ದಾರೆ.

ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ)ದ ಗೌರವಾಧ್ಯಕ್ಷ ಪಿ.ಸಿ. ರಾವ್‌, ಅಧ್ಯಕ್ಷ ಎಚ್‌.ಎಸ್.‌ ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಎನ್‌. ವೀರೇಂದ್ರ ಕಾಮತ್‌ ಅವರ ನೇತೃತ್ವದಲ್ಲಿ ಸಂಘದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸದಸ್ಯತ್ವಕ್ಕೂ ಹೊಸ ಸಮಿತಿ ಸೃಷ್ಟಿಸಲಾಗಿತ್ತು.

ಬಿಎಚ್‌ಎ ಸದಸ್ಯರ ಸಂಖ್ಯೆ ಹೆಚ್ಚಿಸುವ ಸಲುವಾಗಿ ರೂಪಿಸಲಾಗಿರುವ ಬಿಎಚ್‌ಎ ಸದಸ್ಯತ್ವ ಅಭಿವೃದ್ಧಿ ಸಮಿತಿಗೆ ಬಿಎಚ್‌ಎ ಉಪಾಧ್ಯಕ್ಷ ಎ. ಶಂಕರ್‌ ಕುಂದರ್‌ ಅವರನ್ನು ಅಧ್ಯಕ್ಷರನ್ನಾಗಿಸಿ, ಬಿಎಚ್‌ಎ ಜಂಟಿ ಕಾರ್ಯದರ್ಶಿ ಬಿ.ಎಂ. ಧನಂಜಯ ಅವರನ್ನು ಉಪಾಧ್ಯಕ್ಷರನ್ನಾಗಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ.

ಸದಸ್ಯತ್ವ ಶುಲ್ಕ ವಿವರ

ಸದಸ್ಯರಾಗುವ ಎಲ್ಲರೂ ನೋಂದಣಿ ಶುಲ್ಕವಾಗಿ ಒಂದು ಸಾವಿರ ರೂಪಾಯಿ ನೀಡಬೇಕಾಗುತ್ತದೆ. ಅಲ್ಲದೆ, ಉದ್ಯಮದ ವರ್ಗಕ್ಕೆ ಅನುಗುಣವಾಗಿ 1,200 ಅಥವಾ 2,400 ರೂಪಾಯಿ ವಾರ್ಷಿಕ ವಂತಿಗೆ ಕೂಡ ಇರುತ್ತದೆ.

ಯಾರು ಸದಸ್ಯರಾಗಬಹುದು?

ಹೋಟೆಲ್‌ ಹಾಗೂ ಹೋಟೆಲ್‌ ಸಂಬಂಧಿತ ಉದ್ಯಮದಲ್ಲಿದ್ದು ಟ್ರೇಡ್‌ ಲೈಸೆನ್ಸ್‌ ಹೊಂದಿರುವ ಎಲ್ಲರೂ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರಾಗಬಹುದು. ಒಂದು ಟ್ರೇಡ್‌ ಲೈಸೆನ್ಸ್‌ಗೆ ಒಂದರಂತೆ ಸದಸ್ಯತ್ವ ನೀಡಲಾಗುತ್ತದೆ.

ಚಾಟ್‌ ಸೆಂಟರ್‌, ಸ್ವೀಟ್‌ ಸ್ಟಾಲ್‌, ಕಾಫಿ-ಚಹಾ ಸ್ಟಾಲ್‌, ಕಾಂಡಿಮೆಂಟ್ಸ್‌, ಜ್ಯೂಸ್‌ ಸೆಂಟರ್‌, ಐಸ್‌ಕ್ರೀಮ್‌ ಪಾರ್ಲರ್‌, ಬೇಕರಿಗಳವರು ನೋಂದಣಿ ಶುಲ್ಕದ ಜೊತೆಗೆ 1,200 ರೂ. ನೀಡಿ ಸದಸ್ಯತ್ವ ಪಡೆಯಬಹುದು.

ಹೋಟೆಲು, ಭೋಜನ ಗೃಹ, ಕೇಟರಿಂಗ್‌ ಕೇಂದ್ರ, ಉಪಾಹಾರ ಗೃಹ, ಬಾರ್‌ & ರೆಸ್ಟೋರೆಂಟ್‌, ಪಬ್‌ & ಬ್ರಿವರೀಸ್‌, ಫೈನ್‌ ಡೈನಿಂಗ್‌, ಲಾಡ್ಜ್‌, ವಸತಿಗೃಹ, ಪಾರ್ಟಿ ಹಾಲ್‌ಗಳವರು ನೋಂದಣಿ ಶುಲ್ಕದ ಜೊತೆಗೆ 2,400 ವಾರ್ಷಿಕ ವಂತಿಗೆ ನೀಡಬೇಕಾಗುತ್ತದೆ. ಐದು ಅಥವಾ ಅದಕ್ಕಿಂತ ಹೆಚ್ಚು ಶಾಖೆಗಳಿರುವ ಗ್ರೂಪ್‌ ಹೋಟೆಲ್‌ ಇತ್ಯಾದಿಗಳಾದರೆ ಪ್ರತಿ ಶಾಖೆಗೆ 1,200 ರೂ. ವಾರ್ಷಿಕ ವಂತಿಗೆ ನೀಡಬೇಕಾಗುತ್ತದೆ.

ಸದಸ್ಯತ್ವದ ಅವಧಿ

ಸದಸ್ಯತ್ವದ ಅವಧಿ ಪ್ರತಿವರ್ಷದ ಏಪ್ರಿಲ್‌ 1ರಿಂದ ಮುಂದಿನ ವರ್ಷದ ಮಾ.31ರ ವರೆಗೆ ಇರುತ್ತದೆ. ಸದಸ್ಯರು ಪ್ರತಿ ವರ್ಷದ ಏ.30ರ ಒಳಗೆ ಸದಸ್ಯತ್ವ ಶುಲ್ಕ ನೀಡಿ ಸದಸ್ಯತ್ವ ನವೀಕರಿಸಿಕೊಳ್ಳಬೇಕು. ಆ ರೀತಿ ಮಾಡದಿರುವ ಸದಸ್ಯರು ಸಂಘದಿಂದ ಲಿಖಿತ ಸೂಚನೆ ನೀಡಿದ 15 ದಿನಗಳ ಒಳಗೆ ಸದಸ್ಯತ್ವ ನವೀಕರಿಸಿಕೊಳ್ಳಬೇಕು. ತಪ್ಪಿದರೆ ಅಂಥ ಸದಸ್ಯರು ಕಾರ್ಯಕಾರಿ ಸಮಿತಿ ಸಭೆ, ಸಾಮಾನ್ಯ ಮಹಾಸಭೆಗಳಲ್ಲಿ ಭಾಗವಹಿಸುವ, ಮತ ಚಲಾಯಿಸುವ ಹಾಗೂ ನಾಮನಿರ್ದೇಶನಕ್ಕೆ ಒಳಗಾಗುವ ಇಲ್ಲವೇ ನಾಮನಿರ್ದೇಶನ ಮಾಡುವ ಅವಕಾಶ ಕಳೆದುಕೊಳ್ಳುತ್ತಾರೆ. ಅದಾಗ್ಯೂ ಸದಸ್ಯತ್ವ ನವೀಕರಿಸಿಕೊಳ್ಳದಿದ್ದಲ್ಲಿ ಸದಸ್ಯತ್ವ ರದ್ದುಗೊಳ್ಳುತ್ತದೆ.

ಸದಸ್ಯತ್ವದ ಪ್ರಯೋಜನ

ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆದವರಿಗೆ ವಿಶೇಷ ಪ್ರಯೋಜನಗಳು ಇರುತ್ತವೆ.

  • ಹೋಟೆಲ್‌ ಉದ್ಯಮಕ್ಕೆ ಸಂಬಂಧಿಸಿದ ಹಲವು ಪ್ರಯೋಜನಕಾರಿ ವಿಷಯಗಳನ್ನು ಹಂಚಿಕೊಳ್ಳಲಾಗುವ ʼಬಿಎಚ್‌ಎ ವಾಟ್ಸ್ಯಾಪ್‌ ಗ್ರೂಪ್‌ʼನಲ್ಲಿ ಸದಸ್ಯರ ಫೋನ್‌ ನಂಬರ್‌ ಸೇರಿಸಲಾಗುತ್ತದೆ. ಇದರಿಂದಾಗಿ ಎಲ್ಲ ಅಪ್‌ಡೇಟ್ಸ್‌ ತಕ್ಷಣಕ್ಕೆ ಸಿಗುತ್ತವೆ.
  • ಹೋಟೆಲ್‌ ಉದ್ಯಮಕ್ಕೆ ಸಂಬಂಧಿಸಿ ವಿವಿಧ ಇಲಾಖೆಗಳಿಂದ ಹೊರಡುವ ಆದೇಶ ಇತ್ಯಾದಿ ಮಾಹಿತಿಗಳು ಸದಸ್ಯರಿಗೆ ತಕ್ಷಣಕ್ಕೆ ತಲುಪಿಸಲಾಗುತ್ತದೆ.
  • ಉದ್ಯಮಕ್ಕೆ ಸಂಬಂಧಿತ ವಿವಿಧ ಇಲಾಖೆಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದು ಪರಿಹರಿಸಲು ಯತ್ನಿಸಲಾಗುತ್ತದೆ.
  • ಉದ್ಯಮಕ್ಕೆ ಸಂಬಂಧಿತ ವಿವಿಧ ವಿಷಯಗಳ ಕುರಿತು ಮಾಹಿತಿ, ಮಾರ್ಗದರ್ಶನ ಆಗಾಗ್ಯೆ ನೀಡಲಾಗುತ್ತದೆ.
  • ಉದ್ಯಮಕ್ಕೆ ಸಂಬಂಧಿಸಿ ಯಾವುದೇ ಇಲಾಖೆಗಳಿಂದ ಅಥವಾ ಬೇರೆ ಇನ್ಯಾವುದೇ ಕಡೆಗಳಿಂದ ಅಡ್ಡಿ-ಆತಂಕಗಳಿದ್ದರೆ ಆ ಕುರಿತು ಮಧ್ಯಪ್ರವೇಶಿಸಿ ಸೂಕ್ತ ಸಹಾಯ ಒದಗಿಸಲಾಗುತ್ತದೆ.
  • ಟ್ರೇಡ್‌ ಲೈಸೆನ್ಸ್‌, ತೆರಿಗೆ, ಇಎಸ್‌ಐ, ಇಪಿಎಫ್‌ಒ, ಬಿಬಿಎಂಪಿ, ಪೊಲೀಸ್‌ ಇಲಾಖೆ ಇತ್ಯಾದಿಗಳ ನಡುವಿನ ಅಗತ್ಯ ವ್ಯವಹಾರಕ್ಕೆ ಸೂಕ್ತ ಸಂಪನ್ಮೂಲ ವ್ಯಕ್ತಿಗಳ ಸಂಪರ್ಕ ಒದಗಿಸುವ ಜೊತೆಗೆ ಸಲಹೆ-ಸಹಕಾರ ನೀಡಲಾಗುತ್ತದೆ.
  • ವರ್ಷಕ್ಕೊಮ್ಮೆ ಆಯೋಜಿಸುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗೆ ಆಯ್ಕೆ ಆಗುವ ನಿಟ್ಟಿನಲ್ಲಿ ಬಿಎಚ್‌ಎ ಸದಸ್ಯರಿಗೆ ಅವಕಾಶ ಇರುತ್ತದೆ.
  • ಕೆಲವೊಂದು ಸಂದರ್ಭಗಳಲ್ಲಿ ಸಂಘ ಯಾವುದಾದರೂ ಸುರಕ್ಷತಾ ಕ್ರಮ ಹಾಗೂ ಕಾನೂನು ವಿನಾಯಿತಿಗಳನ್ನು ಪಡೆಯುತ್ತದೆ. ಅಂಥ ಸಂದರ್ಭಗಳಲ್ಲಿ ಬಿಎಚ್‌ಎ ಸದಸ್ಯತ್ವ ಇರುವವರಿಗೂ ಅದರ ಪ್ರಯೋಜನ ಸಿಗುತ್ತದೆ.
  • ಬಿಎಚ್‌ಎ ಸದಸ್ಯರಿಗೆ ಫಾಸ್ಟ್ಯಾಕ್‌ ಟ್ರೇನಿಂಗ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ.
  • ಎಲ್ಲಕ್ಕಿಂತ ಹೆಚ್ಚು ಬಿಎಚ್‌ಎ ಸದಸ್ಯರಾಗುವುದರಿಂದ ವೈಯಕ್ತಿಕ ಉದ್ಯಮಕ್ಕೆ ಒಂದು ಸಂಘಟಿತ ಶಕ್ತಿ ಲಭಿಸುತ್ತದೆ

ಬಿಎಚ್‌ಎ ಸದಸ್ಯತ್ವ ಪಡೆದ ಹೋಟೆಲ್-ಮಾಲೀಕರು

ಜುಲೈ
  1. ಹೋಟೆಲ್‌ ಗ್ರ್ಯಾಂಡ್‌ ಹಿಂದುಸ್ತಾನ್-‌ ಸೈಯದ್‌ ಉಮೇರ್‌
  2. ಬೆಂದಕಾಳೂರು ಪ್ಯಾರಾಮೌಂಟ್‌ ಹಾಸ್ಪಿಟಾಲಿಟಿ ಪ್ರೈ.ಲಿ.- ಎಸ್‌. ಹಮೀದ್‌ ಅಕ್ಬರ್‌ ಅಲಿ
  3. ವಾಲ್‌ನಟ್‌ ಬೇಕ್‌ & ಕೇಕ್-‌ ಎಂ. ಮಹೇಶ ಮೂರ್ತಿ
  4. ಕ್ಷೀರಸಾಗರ ಮಿಲ್ಕ್‌ ಪ್ರಾಡಕ್ಟ್ಸ್-‌ ಕೆ.ಪಿ. ಶ್ರೀನಿಧಿ

ಆಗಸ್ಟ್‌
  1. ಧರಣ್‌ ಫುಡ್-‌ ಟಿ.ಎಸ್‌. ಮಧುಸೂದನ್‌
  2. ಶ್ರೀವತ್ಸ ಕೇಟರರ್ಸ್-‌ ಜಿ. ಕುಮಾರ್‌
  3. ಬೆಂಕಿ ಕಾಫಿ- ಸುಹಾಸ್‌ ದ್ವಾರಕನಾಥ್‌
  4. ಶ್ರೀಸೀತಾರಾಮ ಕೇಟರರ್ಸ್-‌ ರವೀಂದ್ರ
  5. ನ್ಯೂ ಉಡುಪಿ ಗಾರ್ಡನ್-‌ ಎಂ. ಕರುಣಾಕರ ಶೆಟ್ಟಿ
  6. ಮದುರೈ ಇಡ್ಲಿ ಶಾಪ್-‌ ಎಸ್‌.ಎಫ್.‌ ಮಶೂರ್
  7. ಶ್ರೀಬ್ರಾಹ್ಮೀ ಕೂಲ್‌ & ಹಾಟ್-‌ ಸಂತೋಷ್‌
  8. ಉಡುಪಿ ಶ್ರೀ ಮಂದರ್ತಿ ವೈಭವ- ನಿತ್ಯಾನಂದ ಶೆಟ್ಟಿ
  9. ಉಡುಪಿ ತಾಜಾ ತಿಂಡಿ- ಶುಭಾ/ಅಜಿತ್‌ ಶೆಟ್ಟಿ
  10. ಜಲರಾಂ ಸ್ವೀಟ್ಸ್-‌ ಹಿರೇನ್‌ ಜಯಪ್ರಕಾಶ್‌
  11. ಎಂಎಲ್‌ಸಿ ಗೇಟ್‌ವೇ ಡಿಲಕ್ಸ್‌ ಇನ್-‌ ಎಂ.ಸಿ. ಶ್ರೀನಿವಾಸಯ್ಯ
  12. ಶ್ರೀಕೃಷ್ಣ ಫುಡ್‌ ಕೋರ್ಟ್-‌ ಸತೀಶ್‌ ಶೆಟ್ಟಿ
  13. ಅಳನತಿ ರುಚುಲು- ನಿಮ್ಮಗದ್ದ ವಂಶಿಕೃಷ್ಣ
  14. ವೆಂಕಟಂ ಕೆಫೆ- ಕೆ. ಬಸವ
  15. ಪುಳಿಯೋಗರೆ ಪಾಯಿಂಟ್-‌ ವೈಜಯಂತಿ ಮಾಲಾ
  16. ನೈನ್‌ ಲೀಫ್‌ಲೆಟ್ಸ್‌ ಫುಡ್‌ ಎಲ್‌ಎಲ್‌ಪಿ- ಎಂ.ಆರ್. ನಾಗರಾಜು
  17. ಮಯೂರ ಕೆಫೆ & ಫುಡ್‌ ಕೋರ್ಟ್-‌ ಎನ್‌. ರುದ್ರೇಶ್‌ ಬಾಬು
  18. ಎಸ್‌ಎಲ್‌ವಿ ಉಪಾಹಾರ- ಎಸ್.‌ ಸಂತೋಷ್‌
  19. ಮಹಾಲಕ್ಷ್ಮೀ ರೆಸ್ಟೋರೆಂಟ್- ಪಿ. ವಿಶ್ವನಾಥ

ಸೆಪ್ಟೆಂಬರ್‌
  1. ಎಸ್‌ಎಲ್‌ವಿ ಉಪಾಹಾರ- ಎಸ್.‌ ಸಂತೋಷ್‌
  2. ಮಹಾಲಕ್ಷ್ಮೀ ರೆಸ್ಟೋರೆಂಟ್-‌ ಪಿ. ವಿಶ್ವನಾಥ
  3. ಕಾಮಧೇನು ವೆಜ್-‌ ಸಿ.ಜೆ.ನಂದೀಶ್‌
  4. ದ ಗೊಂಗುರ ಪ್ಯಾಲೇಸ್-‌ ಗಿರೀಶ
  5. ರಾಜೇಶ್‌ ಕೆಫೆ- ರಾಜೇಶ್‌ ಭಟ್‌
  6. ಸುವಿಧಾ ಕಂಫರ್ಟ್ಸ್-‌ ಬಿ.ಎಸ್.‌ ಸುಂದರ್‌
  7. ತಿರುಪತಿ ಭೀಮಾಸ್‌ ಫೈನ್‌ ಡೈನ್‌ ರೆಸ್ಟೋರೆಂಟ್- ಟಿ.ಎಸ್.‌ ಸಾಯಿಕುಮಾರ್‌
  8. ಶ್ರೀ ವಿಷ್ಣು ಗಾರ್ಡನ್-‌ ಎಂ. ಪ್ರಕಾಶ್‌
  9. ಓಂ ಶುಭಂ ಪಾರ್ಟಿ ಹಾಲ್-‌ ನವೀನ್‌ ಚಲ್ಲಂ
  10. ಉಡುಪಿ ಗ್ರ್ಯಾಂಡ್‌ ವೆಜ್-‌ ಟಿ. ರಮೇಶ್‌ ಶೆಟ್ಟಿ

ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ