ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಊಟೋಪಚಾರಕ್ಕೆ ಹೆಸರುವಾಸಿ ಆಗಿರುವ ʼಹಳ್ಳಿಮನೆʼ ಹೋಟೆಲ್ ಹಬ್ಬದೂಟಕ್ಕೂ ಪ್ರಸಿದ್ಧಿಯನ್ನು ಪಡೆದಿದೆ. ಪ್ರತಿ ಹಬ್ಬಕ್ಕೂ ವಿಶೇಷವಾದ ಹಬ್ಬದೂಟ ಆಯೋಜಿಸುವ ಹಳ್ಳಿಮನೆ ಮಕರ ಸಂಕ್ರಮಣಕ್ಕೂ ಅದನ್ನು ಆಯೋಜಿಸಿದೆ.
ಸಂಕ್ರಾಂತಿ ಪ್ರಯುಕ್ತ ಏರ್ಪಡಿಸಲಾಗಿರುವ ಹಬ್ಬದೂಟಕ್ಕೆ ಜ.14ರ ಮಂಗಳವಾರ ಮಧ್ಯಾಹ್ನ ಜನರು ಉದ್ದದ ಸರದಿಯಲ್ಲಿ ನಿಂತು ಕಾದು ಹಬ್ಬದೂಟವನ್ನು ಸವಿದಿರುವುದು ಕಂಡುಬಂದಿದೆ. ಸೋಮವಾರ ಬೆಳಗ್ಗೆ ಗೋಪೂಜೆಯನ್ನು ನೆರವೇರಿಸುವ ಮೂಲಕ ಹಳ್ಳಿಮನೆಯಲ್ಲಿ ಸಂಕ್ರಾಂತಿಯ ಸಡಗರ ಆರಂಭವಾಗಿದೆ.
ವಯಸ್ಕರು ಹಾಗೂ ಮಕ್ಕಳಿಗೆ ಎರಡು ವರ್ಗಗಳಲ್ಲಿ ನೀಡಲಾಗುವ ಹಬ್ಬದೂಟ ಇಂದು (ಜ.14) ಮಧ್ಯಾಹ್ನ 12ರಿಂದ 3.30ರ ವರೆಗೆ ನಡೆದಿದ್ದು, ಭೋಜನಪ್ರಿಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ರಾತ್ರಿ 7ರಿಂದ 9.30ರ ವರೆಗೆ ಮತ್ತೆ ಹಬ್ಬದೂಟ ಇರಲಿದ್ದು, ಅದಕ್ಕೂ ಉತ್ತಮ ಸ್ಪಂದನೆಯ ನಿರೀಕ್ಷೆ ವ್ಯಕ್ತವಾಗಿದೆ.
ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಅವರು ಮಕರ ಸಂಕ್ರಮಣದ ವಿಶೇಷ ಆಚರಣೆ ಹಿನ್ನೆಲೆಯಲ್ಲಿ ಹಳ್ಳಿಮನೆಗೆ ಮಂಗಳವಾರ ಭೇಟಿ ನೀಡಿದ್ದು, ಮಾಲೀಕ ಸಹೋದರರಾದ ರಾಘವೇಂದ್ರ ಹಾಗೂ ರವೀಂದ್ರ ಅವರನ್ನು ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ