ಬೆಂಗಳೂರು: ಹೋಟೆಲ್ಗಳಲ್ಲಿನ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಸುವುದಕ್ಕೆ ನಿಷೇಧ ಹೇರಲಾಗುವುದು ಎಂದು ಆರೋಗ್ಯ ಸಚಿವರು ಹೇಳಿಕೆ ನೀಡಿದ ಬೆನ್ನಿಗೇ ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್ಎ) ಸ್ಪಷ್ಟನೆಯನ್ನು ನೀಡಿದೆ.
ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಸದಂತೆ ನಿಷೇಧ ಹೇರಲಾಗುವುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಗುರುವಾರ ಬೆಳಗ್ಗೆಯಷ್ಟೇ ಮಾಧ್ಯಮಗಳಿಗೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷರಾದ ಪಿ.ಸಿ. ರಾವ್ ಅವರು ರಾತ್ರಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ನಗರದ ಯಾವುದೇ ಹೋಟೆಲ್ನಲ್ಲಿ ಇತ್ತೀಚೆಗೆ ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಉಪಯೋಗಿಸುತ್ತಿಲ್ಲ. ಇಡ್ಲಿ ತಯಾರಿಕೆಗೆ ಈಗಾಗಲೇ ನಾನ್ಸ್ಟಿಕ್ ಪ್ಲೇಟ್ಗಳು ಬಂದಿವೆ. ಕೆಲವೊಂದು ಹೋಟೆಲ್ಗಳಲ್ಲಿ ಬಟ್ಟೆಯನ್ನು ಉಪಯೋಗಿಸುತ್ತಿದ್ದಾರೆ ಎಂದು ಪಿ.ಸಿ. ರಾವ್ ಅವರು ಸ್ಪಷ್ಟನೆ ನೀಡಿದ್ದಾರೆ.
ಸಚಿವರು ಹೇಳಿದ್ದೇನು?
ಹೋಟೆಲ್ನಲ್ಲಿ ಇಡ್ಲಿ ತಯಾರಿಸುವ ಸಂದರ್ಭ ಪಾತ್ರೆಗೆ ಹಿಟ್ಟು ಅಂಟದಂತೆ ತೆಳುವಾದ ಬಟ್ಟೆ ಬದಲು ಪ್ಲಾಸ್ಟಿಕ್ ಶೀಟ್ ಬಳಸುತ್ತಿರುವುದು ಕಂಡುಬಂದಿದೆ. ಇದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಇದರ ವಿರುದ್ಧ ನಿಷೇಧ ಹೇರಲಾಗುವುದು. ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಶೀಟ್ ಬಳಸದಂತೆ ಇನ್ನೆರಡು ದಿನಗಳಲ್ಲಿ ಸುತ್ತೋಲೆ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದರು.
ಹೋಟೆಲ್ ಕನ್ನಡ.ಕಾಮ್ಗೆ ಜಾಹೀರಾತು ನೀಡಿ ಪ್ರೋತ್ಸಾಹಿಸಿ..
ಇಡ್ಲಿ ತಯಾರಿಗೆ ಸಂಬಂಧಿಸಿ ತಪಾಸಣೆ ನಡೆಸಿದ 251 ಸ್ಥಳಗಳಲ್ಲಿ 52 ಕಡೆಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡುಬಂದಿದೆ. ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೇ ಇನ್ಮುಂದೆ ಯಾರೂ ಇಡ್ಲಿ ತಯಾರಿಯಲ್ಲಿ ಪ್ಲಾಸ್ಟಿಕ್ ಬಳಸದಂತೆ ನಿಷೇಧಿಸಲಾಗುವುದು ಎಂದು ಸಚಿವರು ತಿಳಿಸಿದ್ದರು.
ಇದೂ ಓದಿ: ಹೋಟೆಲ್ ಕ್ಷೇತ್ರಕ್ಕಾಗಿ ʼಬಿಎಚ್ಎ ಫುಡ್ ಅವಾರ್ಡ್ಸ್-2025ʼ: ನಾಮನಿರ್ದೇಶನ ಸಲ್ಲಿಸಲು ಇಲ್ಲಿದೆ ವಿವರ, ಅವಕಾಶ..
ಇದೂ ಓದಿ: ವಿದ್ಯಾರ್ಥಿ ಭವನದ ಎದುರು ʼಇಡ್ಲಿ-ಸಾಂಬಾರ್, ದೋಸೆ-ಚಟ್ನಿʼಯಲ್ಲೇ ಯೋಗರಾಜ್ ಭಟ್ಟರ ಸಂಗೀತ ಪಾಕ!
ಇದೂ ಓದಿ: ಈಗ ಬೆಂಗಳೂರಲ್ಲೂ ಲಭ್ಯ ʼರಾಯಲ್ ಕಾಫಿ-ಟೀʼ ಪೌಡರ್; 1961ರಿಂದಲೂ ಗ್ರಾಹಕರಿಗೆ ಲಾಯಲ್ ಆಗಿರುವ ರಾಯಲ್