ನವದೆಹಲಿ: ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಮೂಲಕ ಮಾಡಲಾದ ಎರಡು ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ವಹಿವಾಟಿಗೆ ಜಿಎಸ್‌ಟಿ ಹಾಕಲಾಗುತ್ತದೆ ಎಂಬುದೆಲ್ಲ ವದಂತಿ ಎಂದಿರುವ ಕೇಂದ್ರ ಸರ್ಕಾರ, ಅಂಥ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಶುಕ್ರವಾರ ಸ್ಪಷ್ಟನೆ ನೀಡಿದೆ.
ನಿರ್ದಿಷ್ಟ ಉಪಕರಣ ಬಳಸಿ ಮಾಡುವ ಪಾವತಿಗಳಿಗೆ ಸಂಬಂಧಿಸಿದಂತೆ ʼವ್ಯಾಪಾರಿ ರಿಯಾಯ್ತಿ ದರʼದಂತಹ (ಮರ್ಚಂಟ್ ಡಿಸ್ಕೌಂಟ್ ರೇಟ್- ಎಂಡಿಆರ್) ಶುಲ್ಕಗಳ ಮೇಲೆ ಜಿಎಸ್‌ಟಿ ಹಾಕಲಾಗುತ್ತದೆ. ವ್ಯಕ್ತಿಯಿಂದ ವ್ಯಾಪಾರಿಗೆ ನಡೆಸುವ ಯುಪಿಐ ವಹಿವಾಟುಗಳ ಮೇಲಿನ ಎಂಡಿಆರ್ 2020ರ ಜನವರಿಯಲ್ಲೇ ಸಿಬಿಡಿಟಿ ತೆಗೆದುಹಾಕಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಯುಪಿಐ ವಹಿವಾಟುಗಳ ಮೇಲೆ ಸದ್ಯಕ್ಕೆ ಎಂಡಿಆರ್ ಇಲ್ಲದ ಕಾರಣ ಸಹಜವಾಗಿಯೇ ಈ ವಹಿವಾಟುಗಳಿಗೆ ಜಿಎಸ್‌ಟಿ ಅನ್ವಯ ಆಗುವುದಿಲ್ಲ ಎಂದು ವಿತ್ರ ಸಚಿವಾಲಯ ಸ್ಪಷ್ಟನೆ ನೀಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.
ಇದೂ ಓದಿ: ಪಿಎಫ್ ಹಣ ಹಿಂಪಡೆಯುವುದು ಈಗ ಮತ್ತಷ್ಟು ಸುಲಭ; ಕ್ಲೇಮ್ ಇತ್ಯರ್ಥ ಸರಾಗ..
ಇದೂ ಓದಿ: ಬಿಎಚ್‌ಎ ಫುಡ್ ಅವಾರ್ಡ್ಸ್-2025 ಪ್ರದಾನ; ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ವಿವರ..
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ