ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಉಂಟಾದ ಭಾರತ-ಪಾಕ್ ಉದ್ವಿಗ್ನತೆ ಭಾರತೀಯರಲ್ಲಿನ ದೇಶಭಕ್ತಿಯನ್ನು ಇನ್ನಷ್ಟು ಜಾಗೃತಿಗೊಳಿಸಿದ್ದು, ಅದೀಗ ಸಿಹಿತಿನಿಸುಗಳಲ್ಲಿ ಪಾಕ್ಗೆ ಇತಿಶ್ರೀ ಹೇಳುವ ಮಟ್ಟಕ್ಕೂ ತಲುಪಿದೆ. ಪರಿಣಾಮವಾಗಿ ʼಮೈಸೂರು ಪಾಕ್ʼ ಕೂಡ ʼಮೈಸೂರ್ಶ್ರೀʼ ಆಗಿ ಬದಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ‘ಮೈಸೂರ್ ಪಾಕ್’ ಹೆಸರನ್ನು ‘ಮೈಸೂರು ಪಾಕ’ ಎಂದು ಮರು ನಾಮಕರಣ ಮಾಡಲು ಕೆಲವು ಹೋಟೆಲಿಗರು ಚಿಂತಿಸುತ್ತಿರುವುದನ್ನು ‘ಹೋಟೆಲ್ ಕನ್ನಡ’ ವರದಿ ಮಾಡಿದ ಬೆನ್ನಿಗೇ ರಾಜಸ್ಥಾನದ ಜೈಪುರದಲ್ಲಿ ಮೈಸೂರ್ ಪಾಕ್ಗೆ ಮರು ನಾಮಕರಣವಾದ ವಿಷಯ ಹೊರಹೊಮ್ಮಿದೆ.
ಜೈಪುರದಲ್ಲಿ ಸ್ವೀಟ್ ಅಂಗಡಿಗಳಲ್ಲಿ ಪಾಕ್ನಿಂದ ಕೊನೆಯಾಗುವ ಸಿಹಿತಿನಿಸುಗಳ ಹೆಸರುಗಳನ್ನು ಶ್ರೀ ಎಂದು ಬದಲಿಸಲಾಗಿದೆ. ಕೆಲವರು ಪಾಕ್ ಬದಲು ಭಾರತ್ ಎಂದೂ ಬದಲಿಸಿರುವುದು ವರದಿಯಾಗಿದೆ. ಅಂದರೆ ಮೈಸೂರ್ ಪಾಕ್, ಮೋತಿ ಪಾಕ್, ಆಮ್ ಪಾಕ್, ಗೋಂದ್ ಪಾಕ್ ಇತ್ಯಾದಿಗಳನ್ನು ಮೈಸೂರ್ ಶ್ರೀ, ಮೋತಿ ಶ್ರೀ, ಆಮ್ ಶ್ರೀ, ಗೋಂದ್ ಶ್ರೀ ಎಂದು ಬದಲಿಸಲಾಗಿದೆ.
ಇದೂ ಓದಿ: ಹೋಟೆಲ್ಗಳಲ್ಲಿ ನೀವು ಸೇವಿಸುವ ಪನೀರ್ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ಕೆಎಸ್ಎಚ್ಎ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಭಿನಂದನೆ