ಒಳಗೇನಿದೆ!?

ರಜತಗಿರಿ ಪ್ಯಾಲೇಸ್‌ನಲ್ಲಿ ವಾರಪೂರ್ತಿ ಹಲಸಿನ ಖಾದ್ಯ ಮೇಳ; ಇಲ್ಲಿದೆ ಪೂರ್ತಿ ವಿವರ..

ಬೆಂಗಳೂರು: ರಾಜಧಾನಿ ಬೆಂಗಳೂರಿನ ʼರಜತಗಿರಿ ಪ್ಯಾಲೇಸ್‌ʼ ಹೋಟೆಲ್‌ನಲ್ಲಿ ಎಂದಿನಂತೆ ಈ ವರ್ಷವೂ ʼಹಲಸಿನ ಖಾದ್ಯ ಮೇಳʼ ಆಯೋಜಿಸಲಾಗಿದ್ದು, ಈ ಸಲವೂ ಬಗೆಬಗೆಯ ಹಲಸಿನ ಖಾದ್ಯಗಳು ತಿನಿಸುಪ್ರಿಯರ ಹಸಿವು ತಣಿಸಲಿವೆ.

ವಿಶೇಷವೆಂದರೆ ಹಲಸುಪ್ರಿಯರಿಗೆ ಈ ಸಲ ಹಲಸಿನ ವಿಶೇಷ ಖಾದ್ಯಗಳನ್ನು ಸವಿಯಲು ಇನ್ನೊಂದು ಅವಕಾಶ ಹೆಚ್ಚುವರಿಯಾಗಿ ಸಿಗಲಿದೆ. ಏಕೆಂದರೆ ಇತ್ತೀಚೆಗಷ್ಟೇ ಉದ್ಘಾಟನೆಯಾದ ಮೈಸೂರು ರಸ್ತೆಯ ʼರಜತಗಿರಿ ಪ್ಯಾಲೇಸ್‌ʼನಲ್ಲೂ ಈ ಮೇಳ ಆಯೋಜಿಸಲಾಗಿದೆ.

ಈ ಬಾರಿ ʼರಜತಗಿರಿ ಪ್ಯಾಲೇಸ್‌ʼನಲ್ಲಿ ಜುಲೈ 14ರಿಂದ ಜುಲೈ 20ರ ವರೆಗೆ ಈ ಹಲಸಿನ ಖಾದ್ಯ ಮೇಳ ಇರಲಿದ್ದು, ಒಂದು ವಾರಪೂರ್ತಿ ದಿನವಿಡೀ ಹಲಸಿನ ಹಣ್ಣಿನ ವಿಶೇಷ ತಿಂಡಿ ತಿನಿಸುಗಳು ಲಭ್ಯ ಇರಲಿವೆ.

ಹಲಸಿನ ಹಣ್ಣಿನ ಕೋಸಂಬರಿ, ಉಪ್ಪಿನ ಕಾಯಿ, ಉಪ್ಪು, ಹಲಸಿನ ಹಪ್ಪಳ, ಹಲಸಿನ ಕಾಯಿ ಪಲ್ಯ (ಕಡ್ಗಿ ತಾಳ್ಳ್)‌, ಹಲಸಿನ ಕಬಾಬ್‌, ದೀವಿ ಹಲಸಿನ ರವಾ ಫ್ರೈ, ಹಲಸಿನ ಹಣ್ಣಿನ ಮುದ್ದುಳಿ, ಹಲಸಿನ ಇಡ್ಲಿ, ಕೊಟ್ಟೆ ಬಿರಿಯಾನಿ, ಹಲಸಿನ ಹಣ್ಣಿನ ಚಂಪಾಕಲಿ, ಹಲಸಿನ ಹಣ್ಣಿನ ಹಾಲ್ಬಾಯಿ, ಹಲಸಿನ ಹಣ್ಣಿನ ಪಾಯಸ, ಅನ್ನ, ದೀವಿ ಹಲಸಿನ ಸಾರು, ಉಡುಪಿ ರಸಂ, ಮೊಸರು, ಹಲಸಿನ ಹಣ್ಣಿನ ಐಸ್‌ ಕ್ರೀಮ್‌ ಒಳಗೊಂಡ ಬಾಳೆ ಎಲೆಯ ಊಟ ಈ ಏಳು ದಿನಗಳಲ್ಲಿ ಮಧ್ಯಾಹ್ನ 12ರಿಂದ 3.30ರ ವರೆಗೆ ಲಭ್ಯ ಇರುತ್ತದೆ. ಬಾಳೆ ಎಲೆಯ ಊಟದ ಫ್ಯಾಮಿಲಿ ಪ್ಯಾಕ್‌ ಪಾರ್ಸೆಲ್‌ಗೂ ಸಿಗುತ್ತದೆ.

ಕಳೆದ ವರ್ಷ ಹಲಸಿನ ಖಾದ್ಯ ಮೇಳ ಸವಿದವರ ಸವಿಮಾತು

ಇಷ್ಟೇ ಅಲ್ಲದೆ ಹಲಸಿನ ಹಣ್ಣಿನ ಇಡ್ಲಿ, ದೋಸೆ, ಮುಳಕ, ಚಿಲ್ಲಿ, 65, ಕಬಾಬ್‌, ಮಂಚೂರಿಯನ್‌, ಹಾಲ್ಬಾಯಿ, ಹೋಳಿಗೆ, ಪಾಯಸ, ಚಂಪಾಕಲಿ ಮುಂತಾದ ಹಲಸಿನ ಹಣ್ಣಿನ ಖಾದ್ಯಗಳು ಮಾತ್ರವಲ್ಲದೆ ಹಲಸಿನ ಹಣ್ಣಿನ ಮಿಲ್ಕ್‌ ಶೇಕ್‌ ಕೂಡ ದಿನವಿಡೀ ಸಿಗಲಿವೆ.

ಹಲಸಿನ ಖಾದ್ಯ ಮೇಳ ನಡೆಯುವ ಸ್ಥಳಗಳು
  1. ರಜತಗಿರಿ ಪ್ಯಾಲೇಸ್:‌ ವಾಜರಹಳ್ಳಿ, ಕನಕಪುರ ರಸ್ತೆ.
  2. ರಜತಗಿರಿ ಪ್ಯಾಲೇಸ್:‌ ಕೆಂಗೇರಿ, ಮೈಸೂರು ರಸ್ತೆ.

ಬುಕಿಂಗ್‌ಗಾಗಿ ಸಂಪರ್ಕಿಸಬೇಕಾದ ಸಂಖ್ಯೆ
99000 04701 / 99000 04702

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ: ದೇವಸ್ಥಾನ ನಿರ್ಮಾಣದಿಂದ ಇಲ್ಲಿ ಶೇ.20 ಹೆಚ್ಚಾಯ್ತು ಹೋಟೆಲೋದ್ಯಮದ ವಹಿವಾಟು!

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ