ಬೆಂಗಳೂರು: ತಿನಿಸುಪ್ರಿಯರ ನೆಚ್ಚಿನ ತಾಣಗಳಲ್ಲಿ ಒಂದಾಗಿರುವ ʼಕೆಫೆ ಅಮುದಂʼ, ರಾಜಧಾನಿ ಬೆಂಗಳೂರಿನಾದ್ಯಂತ ಹಲವು ಶಾಖೆಗಳನ್ನು ಹೊಂದಿದೆ. ಆ ಪೈಕಿ ಒಂದು ಶಾಖೆಯನ್ನು ಇದೀಗ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಜನಪ್ರಿಯ ಹೋಟೆಲ್ ಸರಣಿಯನ್ನು ಹೊಂದಿರುವ ಕೆಫೆ ಅಮುದಂ ದೆಹಲಿಯ ಜನಪತ್ ಹಾಗೂ ಗ್ರೀನ್ ಪಾರ್ಕ್‌ನಲ್ಲೂ ತನ್ನ ಶಾಖೆಗಳನ್ನು ಹೊಂದಿದೆ. ಅಲ್ಲದೆ, ಬೆಂಗಳೂರಿನ ಕೋರಮಂಗಲ, ಗಾಂಧಿನಗರ, ಆರ್.ಟಿ.ನಗರ, ಬ್ರೂಕ್‌ಫೀಲ್ಡ್, ಎಚ್‌ಎಸ್‌ಆರ್ ಬಡಾವಣೆಗಳಲ್ಲೂ ಶಾಖೆಗಳನ್ನು ತೆರೆದು ಜನಾಕರ್ಷಣೆಯ ಕೇಂದ್ರವಾಗಿದೆ.
ಸಂಸ್ಥೆ ಹಾಗೂ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಿಸುವ ನಿಟ್ಟಿನಲ್ಲಿ ಕೆಫೆ ಅಮುದಂದ ಬೆಂಗಳೂರಿನ ಜಯನಗರದಲ್ಲಿದ್ದ ಶಾಖೆಯನ್ನು ಆರ್.ವಿ.ರಸ್ತೆಗೆ ಸ್ಥಳಾಂತರಿಸಿದೆ. ಹೊಸ ಶಾಖೆ ತನ್ನ ಹಳೆಯ ಗ್ರಾಹಕರ ಜೊತೆಗೆ ಮತ್ತಷ್ಟು ಹೊಸ ಗ್ರಾಹಕರನ್ನು ಸೆಳೆಯಲಾರಂಭಿಸಿದೆ.
ನೂತನ ಶಾಖೆಯ ವಿಳಾಸ
ಕೆಫೆ ಅಮುದಂ, ನಂ. 31, ರಾಷ್ಟ್ರೀಯ ವಿದ್ಯಾಲಯ ರಸ್ತೆ, ವಿಜಯ ಕಾಲೇಜು ಎದುರು, ಬಸವನಗುಡಿ, ಬೆಂಗಳೂರು-04.
ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ: 9008802101
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ



