ಒಳಗೇನಿದೆ!?

ಕರ್ನಾಟಕ ಹೋಟೆಲ್‌ ಕಾರ್ಮಿಕರ ಸಂಘದಿಂದ ಗುರುವಾರ ಬೃಹತ್‌ ಸಮಾರಂಭ; ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ಹೋಟೆಲ್‌ ಕಾರ್ಮಿಕರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸುವ ಸಲುವಾಗಿ ಕರ್ನಾಟಕ ಹೋಟೆಲ್‌ ಕಾರ್ಮಿಕರ ಸಂಘ (ರಿ.) ʼಪ್ರತಿಭಾ ಪುರಸ್ಕಾರʼ ಸಮಾರಂಭವನ್ನು ಹಮ್ಮಿಕೊಂಡಿದೆ.

ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಅಂಬೇಡ್ಕರ್‌ ಸಹಾಯಹಸ್ತ ಯೋಜನೆಯ ಲೇಬರ್‌ ಕಾರ್ಡ್‌ ನೋಂದಣಿ ಮತ್ತು ವಿತರಣೆ ಕೂಡ ಇದೇ ವೇಳೆ ಜರುಗಲಿದೆ.

ಈ ಬೃಹತ್‌ ಸಮಾರಂಭವು ಜುಲೈ 17ರ ಗುರುವಾರ ಬೆಳಗ್ಗೆ 11ರಿಂದ ಮಂಗಳೂರಿನ ಕೊಲ್ಯದ ಶ್ರೀಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಲಿದೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಮಂಗಳೂರಿನ ಕೊಂಡಣ ಶಿವಗಿರಿ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಭಾಪತಿ ಯು.ಟಿ.ಖಾದರ್‌, ದಕ್ಷಿಣ ಕನ್ನಡ ಉಪ ವಿಭಾಗ-೧ರ ಕಾರ್ಮಿಕ ಅಧಿಕಾರಿ ಬಿ.ಆರ್.ಕುಮಾರ್‌, ಸಿಐಟಿಯು ದಕ್ಷಿಣಕನ್ನಡದ ಸುನಿಲ್‌ ಕುಮಾರ್‌, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕಂಪಲ, ಗೆಜ್ಜೆಗಿರಿ ಆಡಳಿತ ಮೊಕ್ತೇಸರ ಚಂದ್ರಶೇಖರ ಉಚ್ಚಿಲ, ಸಮಾಜ ಸೇವಕ ಶ್ರೀಕೃಷ್ಣ ಮತ್ತು ಮಂಗಳೂರು ಗೋಲ್ಡ್‌ ಫಿಂಚ್‌ ಹೋಟೆಲ್‌ನ ಸುರೇಶ್‌ ನಾಯಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಹೋಟೆಲ್‌ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಸತೀಶ್‌ ಜೋಗಿ ಅವರ ಅಧ್ಯಕ್ಷತೆಯಲ್ಲಿ ಈ ಸಮಾರಂಭ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ: 9743539990

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ