ಒಳಗೇನಿದೆ!?

ಆಹಾರ ವ್ಯಾಪಾರಿಗಳಿಗೆ ಎಫ್‌ಎಸ್‌ಎಸ್‌ಎಐನಿಂದ ಮತ್ತೊಂದು ಆದೇಶ: ಕ್ಯೂಆರ್‌ ಕೋಡ್‌ ಪ್ರದರ್ಶಿಸಲು ಸೂಚನೆ

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಉದ್ದೇಶದಿಂದ ಆಗಾಗ ನಿರ್ದೇಶನಗಳನ್ನು ನೀಡುತ್ತ ಬಂದಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇತ್ತೀಚೆಗೆ ಇನ್ನೊಂದು ಆದೇಶವನ್ನು ಹೊರಡಿಸಿದೆ.

ಆಹಾರ ಸುರಕ್ಷತೆ ಮತ್ತು ಗ್ರಾಹಕರ ಸಬಲೀಕರಣಕ್ಕಾಗಿ ಎಲ್ಲ ಆಹಾರ ವ್ಯಾಪಾರಿಗಳು ತಮ್ಮ ಮಳಿಗೆಯ ಆವರಣದಲ್ಲಿ ಪರವಾನಗಿ​ ಮತ್ತು ಗ್ರಾಹಕ ದೂರು ನೋಂದಣಿಗಾಗಿ ಫುಡ್​ ಸೇಫ್ಟಿ ಕನೆಕ್ಟ್​ ಆ್ಯಪ್​ನ ಕ್ಯೂಆರ್​ ಕೋಡ್​ ಪ್ರದರ್ಶಿಸಬೇಕೆಂದು ಎಫ್​ಎಸ್​ಎಸ್​ಎಐ ಸೂಚಿಸಿದೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ರೆಸ್ಟೋರೆಂಟ್​ಗಳು, ಢಾಬಾಗಳು, ಕೆಫೆಗಳು ಸೇರಿದಂತೆ ಎಲ್ಲ ಆಹಾರ ಮಳಿಗೆಗಳು ಪ್ರವೇಶದ್ವಾರ, ಬಿಲ್ಲಿಂಗ್​ ಕೌಂಟರ್​ಗಳಲ್ಲಿ ಈ ಕ್ಯೂಆರ್​ ಕೋಡ್ ಇಡಬೇಕು. ವೆಬ್​ಸೈಟ್​ಗಳು ಮತ್ತು ಆನ್​ಲೈನ್​ ಆರ್ಡರಿಂಗ್​ ಪ್ಲಾಟ್​ಫಾಮ್​ರ್ಗಳಲ್ಲೂ ಈ ಕೋಡ್ ಒದಗಿಸಬೇಕು.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಗ್ರಾಹಕರು ಆಹಾರ ಸುರಕ್ಷತೆ, ಗುಣಮಟ್ಟ ಅಥವಾ ತಪ್ಪು ಜಾಹೀರಾತುಗಳ ಬಗ್ಗೆ ಗ್ರಾಹಕರು ಎಫ್​ಎಸ್​ಎಸ್ಎಐ​ ನಿಯಮಗಳಿಗೆ ಅನುಗುಣವಾಗಿ ಈ ಕೋಡ್‌ ಮೂಲಕ ದೂರು ಸಲ್ಲಿಸಬಹುದು.

ಇದೂ ಓದಿ: ಬೆಂಗಳೂರಲ್ಲಿ ನಡೆಯಲಿದೆ ಎಫ್‌ಎಚ್‌ಆರ್‌ಎಐನ 55ನೇ ವಾರ್ಷಿಕ ಸಮಾವೇಶ ಫ್ಯೂಚರ್‌ ಸ್ಕೇಪ್‌-2047

ಇದೂ ಓದಿ: ಉದ್ಯೋಗಿಗಳಿಗೆ ಸರ್ಕಾರದಿಂದ ಸಂತಸದ ಸುದ್ದಿ; ಇನ್ಮುಂದೆ ಪೂರ್ತಿ ಹಣ ಪಡೆಯುವ ಅವಕಾಶ..

ಇದೂ ಓದಿ: ಜಿಎಸ್‌ಟಿ ಬಳಿಕ ಈಗ ಎಂಆರ್‌ಪಿ ಕಡೆಗೂ ಸರ್ಕಾರದ ಗಮನ; ಮುಂದೇನಾಗಬಹುದು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ