ಒಳಗೇನಿದೆ!?

ಹಳ್ಳಿಮನೆ ಸಮೂಹದ ಇನ್ನೊಂದು ಹೋಟೆಲ್‌ ʼದೋಸೆ ಕ್ಯಾಂಪ್‌ʼ ನಾಳೆ ಉದ್ಘಾಟನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೆಸರಾಂತ ಹೋಟೆಲ್‌ ಆಗಿರುವ ʼಹಳ್ಳಿಮನೆʼ ಸಮೂಹದ ಇನ್ನೊಂದು ಹೋಟೆಲ್‌ ʼದೋಸೆ ಕ್ಯಾಂಪ್‌ʼ ಅ.11ರ ಶನಿವಾರ ಉದ್ಘಾಟನೆ ಆಗಲಿದೆ.

ಬಿಟಿಎಂ ಆರನೇ ಹಂತದ ಅಕ್ಷಯ ನಗರದಲ್ಲಿ ನಿರ್ಮಾಣಗೊಂಡಿರುವ ನೂತನ ʼದೋಸೆ ಕ್ಯಾಂಪ್‌ʼ ಶನಿವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್‌ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ

ನೀಲಾವರ ಸಂಜೀವ ರಾವ್‌ ಅವರ ಮಾಲೀಕತ್ವದ ʼಹಳ್ಳಿಮನೆʼ ಸಮೂಹವು ಜಯನಗರದಲ್ಲಿಈಗಾಗಲೇ ಹಲವು ದಶಕಗಳಿಂದ ʼದೋಸೆ ಕ್ಯಾಂಪ್‌ʼ ಹೊಂದಿದ್ದು, ಈ ನೂತನ ಹೋಟೆಲ್ ಅವರ ಮೂರನೇ ಔಟ್‌ಲೆಟ್‌ ಆಗಿದೆ.

ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್‌. ಮಂಜುನಾಥ್‌

ಮಲ್ಲೇಶ್ವರದಲ್ಲಿನ ‌ʼಹಳ್ಳಿಮನೆʼ ಹಲವು ವರ್ಷಗಳಿಂದ ಜನಪ್ರಿಯವಾಗಿದ್ದು, ದಕ್ಷಿಣ ಭಾರತೀಯ ತಿನಿಸುಗಳಷ್ಟೇ ಅಲ್ಲದೇ ಹಬ್ಬದೂಟಕ್ಕೂ ಪ್ರಸಿದ್ಧಿ ಪಡೆದಿದೆ. ಹಬ್ಬದ ಸಂದರ್ಭಗಳಲ್ಲಿನ ವಿಶೇಷ ಭೋಜನಕ್ಕೆ ಇಲ್ಲಿ ಜನರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ವಿಳಾಸ: ದೋಸೆ ಕ್ಯಾಂಪ್‌, ನಂ. 14, ಬಿಡಿಎ, 80 ಅಡಿ ರಸ್ತೆ, ಐದನೇ ಅಡ್ಡರಸ್ತೆ, ಅವನಿ ಶೃಂಗೇರಿನಗರ, ಬಿಟಿಎಂ ಆರನೇ ಹಂತ, ಬೆಂಗಳೂರು-560076

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ:ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ