ಹೋಟೆಲ್ ಕನ್ನಡ, ಬೆಂಗಳೂರು: ಯಾವುದಾದರೂ ಮದುವೆ ಸಮಾರಂಭಗಳಿಗೆ ಹೋದಾಗ ಅಲ್ಲಿ ಊಟಕ್ಕೆ ತರಹೇವಾರಿ ತಿಂಡಿ-ತಿನಿಸುಗಳನ್ನು ಮಾಡಿರುತ್ತಾರೆ. ಅವುಗಳ ವೆರೈಟಿ ನೋಡಿದಾಗ ಎಲ್ಲವನ್ನೂ ಸ್ವಲ್ಪ ಸ್ವಲ್ಪ ರುಚಿ ನೋಡೋಣ ಅಂತನಿಸುವುದು ಸಹಜ.
ಆದರೆ ಈಗಿನ ಕಾಲಘಟ್ಟದಲ್ಲಿ ಬಯಸಿದ್ದೆಲ್ಲ ಎದುರಿಗಿದ್ದರೂ ತಿನ್ನುವುದು ಸಾಧ್ಯವಿಲ್ಲ. ಹೀಗಿರುವಾಗ ಹಲವಾರು ಬಗೆಯ ಭಕ್ಷ್ಯ-ಭೋಜನಗಳಿದ್ದಾಗ ಏನನ್ನು ತಿನ್ನಬೇಕು ಅಥವಾ ಯಾವುದನ್ನು ತಿನ್ನಬಾರದು ಎಂಬ ಗೊಂದಲ ಸಹಜ.
ಅಂಥ ಸಂದರ್ಭಕ್ಕೆಂತಲೇ ಒಂದು ಕೃತಕ ಬುದ್ಧಿಮತ್ತೆ(ಎಐ) ಸೃಷ್ಟಿಸಲಾಗಿದೆ. ಚಾಟ್-ಜಿಪಿಟಿ ಶೈಲಿಯಲ್ಲಿ ಇದಕ್ಕೆ ʼಬಫೆ-ಜಿಪಿಟಿʼ ಎಂದು ಹೆಸರಿಡಲಾಗಿದೆ. ಯಾವುದೇ ಸಮಾರಂಭಕ್ಕೆ ತೆರಳಿದ್ದಾಗ ಅಲ್ಲಿನ ಊಟದ ವೇಳೆ ಅಲ್ಲಿರುವ ಖಾದ್ಯಗಳ ವೆರೈಟಿಗಳನ್ನು ಸ್ಕ್ಯಾನ್ ಮಾಡಬಲ್ಲ ಈ ಎಐ, ʼಇದನ್ನು ತಿನ್ನಬಹುದು, ಇದನ್ನು ತಿನ್ನುವುದು ಬೇಡʼ ಎಂಬ ಸಲಹೆ ನೀಡುತ್ತದೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಪಂಕಜ್ ಎಂಬವರು ಇಂಥದ್ದೊಂದು ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸಿದ್ದು, ಅದನ್ನು ಪ್ರಯೋಗ ಮಾಡಿಯೂ ನೋಡಿದ್ದಾರೆ. ಗೆಳೆಯನ ಮದುವೆ ಊಟದ ಸಂದರ್ಭ ಈ ತಂತ್ರಜ್ಞಾನವನ್ನು ಪರೀಕ್ಷೆಗೆ ಒಳಪಡಿಸಿರುವ ಅವರು ಅದರ ಫಲಿತಾಂಶಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದೂ ಓದಿ: ಬಜೆಟ್ನಲ್ಲಿ ಹೋಟೆಲ್ ಕ್ಷೇತ್ರಕ್ಕೆ ಸಿಕ್ಕಿದ್ದೇನು?; ಏನಿದು ರಾಷ್ಟ್ರೀಯ ಆತಿಥ್ಯ ಸಂಸ್ಥೆ?
ಹಾಟ್ಕೇಸ್ನಲ್ಲಿ ಇರಿಸಿದ ಬಗೆಬಗೆಯ ಆಹಾರಗಳನ್ನು ಬಫೆ-ಜಿಪಿಟಿ ಮೂಲಕ ಸ್ಕ್ಯಾನ್ ಮಾಡಿದರೆ, ಅದು ಅದರಲ್ಲಿನ ಪದಾರ್ಥಗಳನ್ನೆಲ್ಲ ವಿಶ್ಲೇಷಿಸಿ ʼಯಾವುದನ್ನು ತಿನ್ನಲೇಬೇಕು, ಯಾವುದನ್ನು ತಿನ್ನದಿರುವುದು ಒಳಿತುʼ ಎಂಬ ಸಲಹೆ ನೀಡುತ್ತದೆ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇಂಥ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಬಗ್ಗೆ ಸಂತಸ ಹಂಚಿಕೊಂಡಿರುವ ಅವರು, ಇದಿನ್ನೂ ಪರೀಕ್ಷಾರ್ಥ ಹಂತದಲ್ಲಿದೆ ಎಂಬ ಮಾಹಿತಿ ಕೂಡ ನೀಡಿದ್ದಾರೆ. ಶೀಘ್ರದಲ್ಲೇ ಈ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಲಭ್ಯವಾದರೂ ಅಚ್ಚರಿ ಏನಿಲ್ಲ.
ಇದೂ ಓದಿ: ಈಗ ಬೆಂಗಳೂರಲ್ಲೂ ಸಿಗುತ್ತೆ ಮೈಸೂರು ಮೈಲಾರಿ ದೋಸೆ; ಹೋಟೆಲ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ



