ಒಳಗೇನಿದೆ!?

ಜುಲೈ ಮೊದಲ ವಾರ ರಜತಗಿರಿ ಪ್ಯಾಲೇಸ್‌ನಲ್ಲಿ ಹಲಸಿನ ಹಣ್ಣಿನ ಆಹಾರ ಮೇಳ

ಹೋಟೆಲ್‌ ಕನ್ನಡ, ಬೆಂಗಳೂರು: ನೀವು ಹಲಸಿನ ಹಣ್ಣಿನ ವಿಭಿನ್ನ ಖಾದ್ಯಗಳ ಪ್ರೇಮಿಗಳಾಗಿದ್ದರೆ ನಿಮಗೊಂದು ಸಿಹಿ ಸುದ್ದಿ. ನಗರದ ಪ್ರಸಿದ್ಧ ಹೋಟೆಲ್ ‘ರಜತಗಿರಿ ಪ್ಯಾಲೇಸ್ʼ ತನ್ನ ಗ್ರಾಹಕರಿಗಾಗಿ ಈ ವರ್ಷವೂ ವಿಶೇಷವಾದ ‘ಜಾಕ್‌ಫ್ರೂಟ್ ಫುಡ್ ಫೆಸ್ಟ್’ ಆಯೋಜಿಸಿದೆ.

ಹಲಸಿನ ಹಣ್ಣಿನ ಖಾದ್ಯಗಳ ಈ ಆಹಾರ ಮೇಳ ಇದೇ ಜುಲೈ 2, 3 ಮತ್ತು 4ರಂದು ನಡೆಯಲಿದೆ. ಕನಕಪುರ ರಸ್ತೆಯ ವಾಜರಹಳ್ಳಿ ಹಾಗೂ ಮೈಸೂರು ರಸ್ತೆಯ ಕೆಂಗೇರಿಯಲ್ಲಿರುವ ರಜತಗಿರಿ ಪ್ಯಾಲೇಸ್‌ನ ಶಾಖೆಗಳಲ್ಲಿ ಈ ಮೇಳ ಹಮ್ಮಿಕೊಳ್ಳಲಾಗಿದೆ.

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಗಣ್ಯರಿಂದ ಆತಿಥ್ಯ ಸ್ವೀಕಾರ

ಹಲಸಿನ ಹಣ್ಣಿನ ಆಹಾರ ಮೇಳಕ್ಕೂ ಮುಂಚಿತವಾಗಿ ಹೋಟೆಲ್‌ ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರಿಗೆ ರಜತಗಿರಿ ಪ್ಯಾಲೇಸ್‌ ಮಾಲೀಕರಾದ ರಾಘವೇಂದ್ರ ಕಾಂಚನ್‌ ಅವರು ಸೋಮವಾರ ಭೋಜನಕೂಟ ಆಯೋಜಿಸಿದ್ದರು.

ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್.‌ ಸುಬ್ರಹ್ಮಣ್ಯ ಹೊಳ್ಳ, ಪತ್ರಕರ್ತರಾದ ವಿಜಯಲಕ್ಷ್ಮೀ ಶಿಬರೂರು, ನವಿತಾ ಜೈನ್‌ ಮುಂತಾದವರು ಈ ಭೋಜನಕೂಟದಲ್ಲಿ ವಿಶೇಷ ಖಾದ್ಯಗಳನ್ನು ಸವಿದರು.

ರಜತಗಿರಿ ಪ್ಯಾಲೇಸ್‌ನಲ್ಲಿ ಮಾಲೀಕ ರಾಘವೇಂದ್ರ ಕಾಂಚನ್‌ ಅವರ ಜೊತೆ ಹೋಟೆಲ್‌ ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರು.

ಇದೂ ಓದಿ: ಸವಿದವರ ಸವಿಮಾತು: ಹಲಸಿನ ತಿನಿಸೂ.. ರಜತಗಿರಿ ಪ್ಯಾಲೇಸೂ; ಆಹಾ.. ಎರಡೂ ಸೊಗಸು!

ಮೂರೂ ದಿನ ಭರ್ಜರಿ ಬಾಳೆ ಎಲೆ ಊಟ

ಈ ಮೂರೂ ದಿನ ಮಧ್ಯಾಹ್ನ 12 ಗಂಟೆಯಿಂದ 3.30ರವರೆಗೆ ಅತ್ಯಂತ ವೈವಿಧ್ಯಮಯ ಹಲಸಿನ ಖಾದ್ಯಗಳನ್ನು ಒಳಗೊಂಡ ಭರ್ಜರಿ ಬಾಳೆ ಎಲೆಯ ಊಟವನ್ನು ಉಣಬಡಿಸಲಾಗುತ್ತದೆ. ಇದರ ಬೆಲೆ ಜಿಎಸ್‌ಟಿ ಹೊರತುಪಡಿಸಿ ಕೇವಲ 399 ರೂಪಾಯಿ ಆಗಿರುತ್ತದೆ.

ಇದೂ ಓದಿ: ಆನ್‌ಲೈನ್‌ ಕಂಪನಿ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು: ಜಂಟಿ ಹೋರಾಟಕ್ಕೆ ಕರೆ

ಬಾಳೆ ಎಲೆ ಊಟದಲ್ಲಿ ಏನೆಲ್ಲ ಇರಲಿದೆ?
  • ಹಲಸಿನ ಹಣ್ಣಿನ ಕಡುಬು, ಬಿರಿಯಾನಿ, ರೈತಾ
  • ಹಲಸಿನಕಾಯಿ ಪಲ್ಯ (ಕಡ್ಗಿ), ಹಲಸಿನ ಕಾಯಿ ಕಬಾಬ್, ಹಲಸಿನ ಕಾಯಿ ರವಾ ಫ್ರೈ, ಮುದ್ದುಳಿ
  • ಹಲಸಿನಕಾಯಿ ಹಪ್ಪಳ, ಹಲಸಿನ ಕೋಸಂಬರಿ, ಉಪ್ಪಿನಕಾಯಿ
  • ಹಾಲುಬಾಯಿ, ಹಲಸಿನ ಹಣ್ಣಿನ ಚಂಪಾಕಲಿ, ಹಲಸಿನ ಪಾಯಸ
  • ಅನ್ನ, ಸಾಂಬಾರ್, ರಸಂ, ಮೊಸರು ಮತ್ತು ಹಲಸಿನ ಹಣ್ಣಿನ ಐಸ್‌ಕ್ರೀಮ್.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ದಿನವಿಡೀ ಲಭ್ಯವಿರುವ ವಿಶೇಷ ತಿಂಡಿಗಳು

ಬಾಳೆ ಎಲೆಯ ಊಟದ ಹೊರತಾಗಿ ದಿನವಿಡೀ ಸವಿಯಲು ಹಲಸಿನ ಹಣ್ಣಿನಿಂದ ಮಾಡಿದ ವಿಶೇಷ ತಿಂಡಿಗಳೂ ಲಭ್ಯ ಇರಲಿವೆ. ಇದರಲ್ಲಿ ಹಲಸಿನ ಇಡ್ಲಿ, ದೋಸೆ, ಮುಳ್ಕ, ಕೇಸರಿಬಾತ್, ಚಿಲ್ಲಿ, ಮಂಚೂರಿಯನ್, 65, ಕಬಾಬ್, ಬಿರಿಯಾನಿ, ಹಾಲುಬಾಯಿ, ಹೋಳಿಗೆ, ಪಾಯಸ, ಚಂಪಾಕಲಿ, ಸ್ಪೆಷಲ್ ಕರಿ ಹಾಗೂ ಹಲಸಿನ ಮಿಲ್ಕ್‌ಶೇಕ್ ಮತ್ತು ಐಸ್‌ಕ್ರೀಮ್‌ಗಳು ಪ್ರಮುಖ ಆಕರ್ಷಣೆಗಳಾಗಿ ಇರಲಿವೆ.

ಹೆಚ್ಚಿನ ಮಾಹಿತಿ ಮತ್ತು ಕಾಯ್ದಿರಿಸುವಿಕೆಗಾಗಿ ಸಂಪರ್ಕಿಸಿ

  • ರಜತಗಿರಿ ಪ್ಯಾಲೇಸ್‌, ವಾಜರಹಳ್ಳಿ, ಕನಕಪುರ ರಸ್ತೆ ಶಾಖೆ: 9900004703
  • ರಜತಗಿರಿ ಪ್ಯಾಲೇಸ್‌, ಕೆಂಗೇರಿ, ಮೈಸೂರು ರಸ್ತೆ ಶಾಖೆ: 9900087681

ಇದೂ ಓದಿ: ಅಯೋಧ್ಯೆಯಲ್ಲಿ ‘ಬೆಂಗಳೂರು ಕೆಫೆ’: ರಾಮ ಜನ್ಮಭೂಮಿಯಲ್ಲಿ ಈಗ ಉಡುಪಿಯ ನೈಜ ರುಚಿಯ ಹೋಟೆಲ್

ಇದೂ ಓದಿ: ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಇದೂ ಓದಿ:ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ