ಒಳಗೇನಿದೆ!?

About Us

ಹೋಟೆಲ್‌ ಉದ್ಯಮ-ಉದ್ಯಮಿಗಳ ಹಾಗೂ ಹೋಟೆಲ್‌ ಕ್ಷೇತ್ರಕ್ಕೆ ಸಂಬಂಧಿತರ ಮತ್ತು ಹೋಟೆಲ್‌ ಗ್ರಾಹಕರನ್ನು ಕೇಂದ್ರೀಕರಿಸಿ ಆರಂಭಿಸಲಾಗಿರುವ ಈ ಸುದ್ದಿತಾಣವನ್ನು ಕನ್ನಡ ಪತ್ರಿಕಾ ದಿನವಾದ 2024ರ ಜುಲೈ 1ರಂದು ಲೋಕಾರ್ಪಣೆ ಮಾಡಲಾಗಿದೆ.

ಕನ್ನಡ ಡಿಜಿಟಲ್‌ ಮಾಧ್ಯಮ ಜಗತ್ತಿನಲ್ಲಿ ಇದು ಪ್ರಪ್ರಥಮ ಪ್ರಯತ್ನವಾಗಿದ್ದು, ಇದು ಹೋಟೆಲ್‌ ಕ್ಷೇತ್ರಕ್ಕೆಂದೇ ಕನ್ನಡದಲ್ಲಿರುವ ಏಕೈಕ ಸುದ್ದಿ ಮಾಧ್ಯಮ. ಹೋಟೆಲ್‌ ಕ್ಷೇತ್ರಕ್ಕೆ ಸಂಬಂಧಿತ ಎಲ್ಲ ಥರದ ಸಂಗತಿಗಳನ್ನು ಅನಾವರಣ ಮಾಡುವ ಜೊತೆಜೊತೆಗೆ ಹೋಟೆಲ್‌ ಉದ್ಯಮ ಹಾಗೂ ಆತಿಥ್ಯ ಕ್ಷೇತ್ರದ ಒಂದು ಪ್ರಬಲ ಮಾಧ್ಯಮವಾಗಿಸುವ ಕನಸಿನೊಂದಿಗೆ ಇದನ್ನು ಆರಂಭಿಸಲಾಗಿದೆ.

ದರ್ಶಿನಿ, ರೆಸ್ಟೋರೆಂಟ್‌, ವಸತಿಗೃಹ, ಪಾರ್ಟಿಹಾಲ್‌, ಕೇಟರಿಂಗ್‌ ಸೇರಿ ಎಲ್ಲ ಥರದ ಹೋಟೆಲ್‌ಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ʼಹೋಟೆಲ್‌ ಕನ್ನಡʼ ರೂಪಿಸಲಾಗಿದೆ. ಹೋಟೆಲ್‌ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ಕುರಿತ, ಹೋಟೆಲ್‌ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘ-ಸಂಸ್ಥೆಗಳ ವಿವರ, ಹೋಟೆಲ್‌ಗಳದ್ದೇ ಆದ ಡೈರೆಕ್ಟರಿ, ಹೋಟೆಲ್‌ಗೆ ಸಂಬಂಧಿತ ಕಾರ್ಯಕ್ರಮಗಳ ವಿವರ, ಹೋಟೆಲ್‌ ಕ್ಷೇತ್ರದ ಉದ್ಯೋಗಾವಕಾಶಗಳ ವಿವರ ಎಲ್ಲವೂ ಇದೊಂದೇ ತಾಣದಲ್ಲಿ ಸಿಗುವಂಥ ಸಮರ್ಥ ವೇದಿಕೆ ನಿರ್ಮಿಸುವ ಕನಸು ನಮ್ಮದು. ಆ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳು ಆರಂಭವಾಗಿದ್ದು, ಅವು ಈಗ ನಿಮ್ಮ ಕಣ್ಮುಂದೆಯೇ ಇವೆ. ಇನ್ನಷ್ಟು ಪ್ರಯತ್ನಗಳು ಜಾರಿಯಲ್ಲಿವೆ. ಅವುಗಳಿಗೆ ನಿಮ್ಮ ಸ್ಪಂದನೆ-ಸಹಕಾರ ಅತ್ಯಗತ್ಯ.

ಏನನ್ನಾದರೂ ಆರಂಭಿಸುವಾಗ ಅದನ್ನು ʼನಾವು ಮಾಡಬಲ್ಲೆವುʼ ಎಂಬ ನಂಬಿಕೆ ಮೊದಲು ನಮಗಿರಬೇಕು ಎನ್ನುತ್ತಾರೆ. ಖಂಡಿತ.. ಇದು ಒಂದುಮಟ್ಟಿಗೆ ನಿಜ. ಆದರೆ, ನಮ್ಮ ಮೇಲೆ ನಮಗಿರುವ ನಂಬಿಕೆಗಿಂತಲೂ ನಾವು ಯಾರನ್ನು ನಂಬಿ ಒಂದು ಕೆಲಸ ಆರಂಭಿಸುತ್ತೇವೋ ಅವರ ಮೇಲಿನ ನಂಬಿಕೆ ಅತ್ಯಂತ ಮುಖ್ಯವಾದದ್ದು. ಈ ವಿಚಾರದಲ್ಲಿಯೂ ಅಷ್ಟೇ.. ʼಹೋಟೆಲ್‌ ಕನ್ನಡʼ ಎಂಬ ಹೆಸರಿನಲ್ಲಿ ಹೋಟೆಲಿಗರಿಗೆ, ಹೋಟೆಲ್‌ ಕ್ಷೇತ್ರಕ್ಕೆಂದೇ ರೂಪಿಸಲಾದ ಈ ಸುದ್ದಿತಾಣವನ್ನು ನೀವು ಮೆಚ್ಚಿ, ಸಲಹೆ-ಸಹಕಾರ, ಪ್ರೋತ್ಸಾಹ ನೀಡಿ ಬೆಂಬಲಿಸುತ್ತೀರಿ ಎಂಬ ನಂಬಿಕೆಯಿಂದಲೇ ಇದನ್ನು ಆರಂಭಿಸಲಾಗಿದೆ. ನಿಮ್ಮನ್ನೇ ನಂಬಿದ್ದೇವೆ.. ʼನಂಬಿ ಕೆಟ್ಟವರಿಲ್ಲವೋʼ ಎನ್ನುವುದು ಹಿರಿಯರ ಹಿತವಚನ.

ಓದಿ, ಕೇಳಿ, ನೋಡಿ ಬೆಂಬಲಿಸಿ.. ಇತರರಿಗೂ ತಿಳಿಸಿ.

ನಿಮ್ಮ ಸಲಹೆ-ಸೂಚನೆಗಳಿಗೆ ಸದಾ ಸ್ವಾಗತ…

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ