ಹೆಸರು ʼಬೈಟು ಕಾಫಿʼ ಎಂದಾದರೂ ಇದು ಕಾಫಿಗಷ್ಟೇ ಸೀಮಿತ ಸ್ಥಳವಲ್ಲ. ಚಹಾ ಜೊತೆಗೆ ಇಡ್ಲಿ-ವಡೆ, ಕೇಸರಿ ಬಾತ್, ಕಾರಾ ಬಾತ್, ಮಸಾಲೆ ದೋಸೆ ಮುಂತಾದವು ಇಲ್ಲಿ ಲಭ್ಯ. ಇಲ್ಲಿ ಇಡ್ಲಿ-ವಡೆಗೆ ಸಾಂಬಾರ್ ನೀಡದಿದ್ದರೂ ಚಟ್ನಿಯಲ್ಲೇ ಇವುಗಳನ್ನು ಸವಿಯುವ ಜನರು ನಿತ್ಯವೂ ಸೇರುವ ಜಾಗವಿದು. ಇಡ್ಲಿ-ದೋಸೆ ಹಿಟ್ಟುಗಳು ಕೂಡ ಇಲ್ಲಿ ಸಿಗುತ್ತವೆ. ಬಾದಾಮಿ ಹಲ್ವಾ, ರವೆ ಲಾಡು, ಮೈಸೂರು ಪಾಕ್ ಚಿಕ್ಕ ಬಾಕ್ಸ್‌ಗಳಲ್ಲಿ ಸಿಗುವುದರಿಂದ ಒಬ್ಬರೇ ಹೋಗಿದ್ದರೂ ಸಿಹಿತಿನಿಸು ಸವಿಯಬಹುದು. ಪಕ್ಕದಲ್ಲೇ ಬಿಸಿಬಿಸಿಯಾಗಿ ತರಹೇವಾರಿ ಹೋಳಿಗೆಗಳನ್ನೂ ತಯಾರಿಸಿಕೊಡುತ್ತಾರೆ.