ಹೆಸರು ‘ಹಳ್ಳಿಮನೆ’ ಎಂದಾದರೂ ಇದು ಇರುವುದು ರಾಜಧಾನಿ ಬೆಂಗಳೂರಿನಲ್ಲಿ. ದಕ್ಷಿಣ ಭಾರತದ ತಿಂಡಿ-ತಿನಿಸುಗಳ ಜೊತೆಗೆ ಕರಾವಳಿಯ ವಿಶೇಷ ಖಾದ್ಯಗಳಿಗೂ ಇದು ಜನಪ್ರಿಯ ತಾಣ. ಹಬ್ಬದ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಊಟಕ್ಕೂ ಇದು ಹೇಳಿಮಾಡಿಸಿದ ಸ್ಥಳ. ಇಡ್ಲಿ-ದೋಸೆ ಹಿಟ್ಟು, ಕುರುಕಲು ತಿಂಡಿಗಳು ಕೂಡ ಇಲ್ಲಿ ಲಭ್ಯ. ವಾರದ ಎಲ್ಲ ದಿನಗಳಲ್ಲೂ ಇದು ಬೆಳಗ್ಗೆ 7ರಿಂದ ರಾತ್ರಿ 10ರ ವರೆಗೆ ತೆರೆದಿರುತ್ತದೆ.